ಬದಿಯಡ್ಕ: ರಾಷ್ಟ್ರೀಯ ಸೇವಾ ಭಾರತಿ ಕಾಸರಗೋಡು ಇದರ ವತಿಯಿಂದ ಪೆರಡಾಲ ಕೊರಗ ಕಾಲೋನಿಗೆ ಪಲ್ಸ್ ಓಕ್ಸಿ ಮೀಟರ್, ಥರ್ಮೋಮೀಟರ್, ಮಾಸ್ಕ್ ಮತ್ತು ಔಷಧಿಗಳನ್ನೊಳಗೊಂಡ ವೈದ್ಯಕೀಯ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು. ಬದಿಯಡ್ಕದ ಸೇವಾ ಭಾರತಿಯ ಕಾರ್ಯಕರ್ತರು ಕೋಲನಿಗೆ ತೆರಳಿ ವಿತರಿಸಿದರು.
ಕೋವಿಡ್ ಕಾಲಘಟ್ಟದಲ್ಲಿ ಸೇವಾಭಾರತಿಯ ಕಾರ್ಯಕರ್ತರು ಜನಸೇವೆಯಲ್ಲಿ ತೊಡಗಿದ್ದು, ಈಗಾಗಲೇ ಬದಿಯಡ್ಕ ಪಂಚಾಯತ್ ಮಟ್ಟದ ಶುಚಿತ್ವ ಕಾರ್ಯಾಚರಣೆ ಯಜ್ಞದಲ್ಲಿಯೂ ಪಾಲ್ಗೊಂಡಿದ್ದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆಗಾಗಿ ಆಗಮಿಸುವ ಜನತೆಗೆ ಸೂಕ್ತ ಮಾರ್ಗದರ್ಶನವನ್ನು ನೀಡುವಲ್ಲಿಯೂ ಕಾರ್ಯಕರ್ತರು ಜೊತೆಗಿದ್ದರು. ಅಂಬ್ಯುಲೆನ್ಸ್ ಸೇವೆಯಿಂದಲೂ ಜನತೆಗೆ ನೆರವಾದರು.
ಗೋಳಿಯಡ್ಕ ಕೋಲನಿಯಲ್ಲಿ ಟ್ಯಾಂಕ್‌ನ ಅಡಿಯಲ್ಲಿ ವಾಸಿಸುತ್ತಿರುವ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವಲ್ಲಿ ಸೇವಾಭಾರತಿಯು ಮುಂದೆ ಬಂದಿದ್ದು ಅರ್ಧದಷ್ಟು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ