ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನಾಳೆ (ಮೇ 26) ಸೂಪರ್‌ ಮೂನ್‌, ಚಂದ್ರಗ್ರಹಣ: 'ಯಾಸ್‌' ಚಂಡನಿಗೆ ಸಾಥ್‌ ಕೊಡುವನೇ ನಮ್ಮ ಚಂದ್ರ? ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ನಾಳೆ 26ನೇ ತಾರೀಕು ಹುಣ್ಣಿಮೆ. ಅದೇ ದಿನ ಚಂದ್ರ ಭೂಮಿಗೆ, (ಪೆರಿಜಿಗೆ) ಬರುವುದರಿಂದ ಸೂಪರ್ ಮೂನ್. ಅದೇ ದಿನ ಪೂರ್ವ ಕರಾವಳಿಗೆ "ಯಾಸ್" ಚಂಡ ಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅಷ್ಟೂ ಅಲ್ಲದೇ, ಅದೇ ದಿನ, ನಮ್ಮ ಭಾರತದ ಹೆಚ್ಚಿನ ಭಾಗಗಳಿಗೆ ಗೋಚರವಾಗದೇ ಇರುವ ಚಂದ್ರ ಗ್ರಹಣವೂ ಸಂಭವಿಸಲಿದೆ.

ಇವುಗಳೆಲ್ಲದರ ಪರಿಣಾಮವಾಗಿ ನಮ್ಮ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ತೆರೆಗಳ (ಭರತ  ಇಳಿತಗಳ) ಅಬ್ಬರ ಜೋರಿರಬಹುದು.

ಪ್ರತೀ ಹುಣ್ಣಿಮೆ ಹಾಗೂ ಅಮಾವಾಸ್ಯೆಗಳಲ್ಲಿ ಸೂರ್ಯ, ಚಂದ್ರ, ಭೂಮಿ ಇವುಗಳು, ಸರಿ ಸುಮಾರು ನೇರವಿರುವುದರಿಂದ ಸಮುದ್ರದ ನೀರಿನ ಮೇಲೆ ಮಾಮೂಲಿಗಿಂತ  ಹೆಚ್ಚಿನ ಗುರುತ್ವ ಬಲವುಂಟಾಗಿ ಭರತ ಇಳಿತಗಳು ಜೋರಾಗಿರುತ್ತವೆ. 26 ರಂದು ಹುಣ್ಣಿಮೆ. ಮಾಮೂಲಿ ಹುಣ್ಣಿಮೆಗಳಿಗಿಂತ ಗ್ರಹಣದ ಹುಣ್ಣಿಮೆ ದಿನ ಭೂಮಿ, ಚಂದ್ರ ಹಾಗೂ ಸೂರ್ಯ, ಮೂರು ನೇರವೇ ಇರುವುದರಿಂದ, ಭರತ ಇಳಿತಗಳ ವ್ಯತ್ಯಾಸ ಸ್ವಲ್ಪ ಹೆಚ್ಚೇ ಇರುತ್ತದೆ.



ಇನ್ನು ಆ ದಿನ ಸೂಪರ್ ಮೂನ್. ಈ ಸೂಪರ್ ಮೂನ್, ಈ ವರ್ಷದ ಅತೀ ಸಮೀಪದ ಸೂಪರ್ ಮೂನ್. ಈ ದಿನ ಚಂದ್ರ, ಭೂಮಿಗೆ ಸುಮಾರು 3 ಲಕ್ಷದ 57 ಸಾವಿರದ 462 ಕಿಮೀಯ ಪೆರಿಜಿಗೆ ಬರಲಿದೆ. (ಸರಾಸರಿ ದೂರ 3,84,000 ಕೀಮಿ)

ಇವುಗಳೆಲ್ಲದರ ಜೊತೆಗೆ ಆ ಕಡೆ ಪೂರ್ವ ಕರಾವಳಿಯಲ್ಲಿ ಪ್ರಬಲ ಯಾಸ್ ಚಂಡ ಮಾರುತವೂ ಅದೇ ದಿನ ಕಾಣಿಸಿಕೊಳ್ಳುತ್ತಿದೆ.

ಸೂಪರ್ ಮೂನ್, ಗ್ರಹಣ, ಯಾಸ್ ಚಂಡಮಾರುತ ಹೀಗೆ, ಇವೆಲ್ಲದರ ಒಟ್ಟು ಪರಿಣಾಮದಿಂದಾಗಿ ನಮ್ಮ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ತೆರೆಗಳು ಹಾಗೂ ಭರತ ಇಳಿತಗಳು ಹೆಚ್ಚಿರಬಹುದು.

ಇದು ಆ ದಿನವೇ ಇರಬಹುದು, ಅಥವಾ ಆಸುಪಾಸಿನ ದಿನಗಳಲ್ಲೂ ಸಂಭವಿಸಬಹುದು. ನಮ್ಮ ಪಶ್ಚಿಮ ಸಮುದ್ರ ತೀರದಲ್ಲೂ ಎಚ್ಚರಿಕೆ ಅಗತ್ಯ.

ಹಾಗೆ ಈ ದಿನ ಸೂಪರ್ ಮೂನ್‌ನ ಹುಣ್ಣಿಮೆಯ ಚಂದ್ರ ನೋಡಲು ಬಲು ಚೆಂದ. 

-ಡಾ ಎ ಪಿ ಭಟ್, ಉಡುಪಿ.

Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು