ಇರುಳಿನಲಿ ಸಾಗಿದ ಮಂಡೂಕಸಂಗೀತ
ನಿಶೆಕಳೆದು ಅರುಣನುದಯಕೆ ಧ್ಯಾನಸ್ಥವಾಗುವಲ್ಲಿ
ಪುಟಪಲ್ಲಟದಲಿ ಪುಟಿದೆದ್ದ ಭಾಸ್ಕರಗೆ
ನವೋನ್ಮೇಷ ಸ್ವಾಗತದ ಮುದಮುಂಜಾವು.
*ಸುಪ್ತದೀಪ್ತಿ.
******
ಬಾನಿಗೆಲ್ಲ ಹೊದೆಸಿದ ಬೂದು ಚಾದರ
ಅದರಾಚೀಚೆ ಬೆಚ್ಚಗೆ ಕಣ್ಣುಕೂರುವ
ಮಧ್ಯಾಹ್ನದ ನೇಸರ ಮತ್ತು ಬೇಸರ.
*ಸುಪ್ತದೀಪ್ತಿ.
*******
ಬಿಸಿಲಿಳಿದು ಬೆವರಿಳಿದು
ನೆಲದೆಸೆಗೆ ಹನಿಯಿಳಿದು
ತಂಪೆಂದು ಹಂಬಲಿಸಿ
ಕಪ್ಪೆರಾಗ ಹಾಡುವಿರುಳು.
*ಸುಪ್ತದೀಪ್ತಿ.
ಕಾಮೆಂಟ್ ಪೋಸ್ಟ್ ಮಾಡಿ