ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕುಶಲ ಕಲೆ: ಪಪ್ಪಾಯಿ ದಂಟಿನ ದೊಂದಿ- ಮಾಡೋದು ಹೇಗೆ? ಗಣೇಶಣ್ಣ ಹೇಳಿಕೊಡ್ತಾರೆ ನೋಡಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 ನಮ್ಮ ಪಾರಂಪರಿಕ ಕುಶಲ ಕಲೆಗಳು, ಗ್ರಾಮೀಣ ಜ್ಞಾನಗಳು ನಶಿಸಿ ಹೋಗುತ್ತಿರುವ ಈ 'ಆಧುನಿಕ' (?) ಕಾಲದಲ್ಲಿ ಅಂತಹ ಒಂದೊಂದೇ ಕೌಶಲ್ಯಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ದಾಖಲೀಕರಣ ಮಾಡುತ್ತ, ಆಸಕ್ತರಿಗೆ ಕಲಿಸಿಕೊಡುತ್ತಿರುವ ನಮ್ಮ ಗಣೇಶಣ್ಣ ಈ ಬಾರಿ ಪಪ್ಪಾಯಿ ದಂಟಿನಿಂದ ದೊಂದಿ ಮಾಡೋದು ಹೇಗೆ ಅಂತ ತೋರಿಸಿಕೊಟ್ಟಿದ್ದಾರೆ.

ಮಕ್ಕಳ ಕುತೂಹಲವನ್ನು ತಣಿಸುವುದರ ಜತೆಗೆ ಪಾರಂಪರಿಕ ಜ್ಞಾನ ಮತ್ತು ಕೌಶಲಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಗಣೇಶಣ್ಣನವರ ಈ ಪ್ರಯತ್ನ ಸ್ತುತ್ಯರ್ಹ.

ಗಣೇಶಣ್ಣ- ಅಂದರೆ ಮುಣ್ಚಿಕಾನ ಗಣೇಶ ಭಟ್. ಕಾಸರಗೋಡು ನಿವಾಸಿ. ಪ್ರಗತಿಪರ ಕೃಷಿಕರು, ಗೋಪ್ರೇಮಿಗಳು. ಹವ್ಯಕ ಭಾಷೆಯಲ್ಲಿರುವ ಈ ವೀಡಿಯೋ ಕನ್ನಡ ಬಲ್ಲವರೆಲ್ಲರಿಗೂ ಅರ್ಥವಾಗುವಂತಿದೆ. ನಿರೂಪಣೆಯ ಶೈಲಿಯೂ ಆಕರ್ಷಕವಾಗಿದೆ. ವೃತ್ತಿಪರ ಟಿವಿ ಆಂಕರ್‌ಗಳೂ ಈ ಶೈಲಿಯ ಮುಂದೆ ತಾವೆಲ್ಲಿದ್ದೇವೆ ಎಂದು ಮುಟ್ಟಿನೋಡಿಕೊಳ್ಳುವಂತಿದೆ.

ವೀಡಿಯೋವನ್ನು ನೀವೂ ನೋಡಿ. ಮೆಚ್ಚುಗೆಯಾದರೆ ಹತ್ತಾರು ಮಂದಿಗೆ ತಿಳಿಸಿ. ಇಲ್ಲವಾದರೆ ಗಣೇಶಣ್ಣನಿಗೇ ನೇರವಾಗಿ ತಿಳಿಸಿ. ಅವರ ಮೊಬೈಲ್ ಸಂಖ್ಯೆ:  94964 20431

-ಚಂದ್ರಶೇಖರ ಕುಳಮರ್ವ




 

Post a Comment

ನವೀನ ಹಳೆಯದು