ನಮ್ಮ ಪಾರಂಪರಿಕ ಕುಶಲ ಕಲೆಗಳು, ಗ್ರಾಮೀಣ ಜ್ಞಾನಗಳು ನಶಿಸಿ ಹೋಗುತ್ತಿರುವ ಈ 'ಆಧುನಿಕ' (?) ಕಾಲದಲ್ಲಿ ಅಂತಹ ಒಂದೊಂದೇ ಕೌಶಲ್ಯಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ದಾಖಲೀಕರಣ ಮಾಡುತ್ತ, ಆಸಕ್ತರಿಗೆ ಕಲಿಸಿಕೊಡುತ್ತಿರುವ ನಮ್ಮ ಗಣೇಶಣ್ಣ ಈ ಬಾರಿ ಪಪ್ಪಾಯಿ ದಂಟಿನಿಂದ ದೊಂದಿ ಮಾಡೋದು ಹೇಗೆ ಅಂತ ತೋರಿಸಿಕೊಟ್ಟಿದ್ದಾರೆ.
ಮಕ್ಕಳ ಕುತೂಹಲವನ್ನು ತಣಿಸುವುದರ ಜತೆಗೆ ಪಾರಂಪರಿಕ ಜ್ಞಾನ ಮತ್ತು ಕೌಶಲಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಗಣೇಶಣ್ಣನವರ ಈ ಪ್ರಯತ್ನ ಸ್ತುತ್ಯರ್ಹ.
ಗಣೇಶಣ್ಣ- ಅಂದರೆ ಮುಣ್ಚಿಕಾನ ಗಣೇಶ ಭಟ್. ಕಾಸರಗೋಡು ನಿವಾಸಿ. ಪ್ರಗತಿಪರ ಕೃಷಿಕರು, ಗೋಪ್ರೇಮಿಗಳು. ಹವ್ಯಕ ಭಾಷೆಯಲ್ಲಿರುವ ಈ ವೀಡಿಯೋ ಕನ್ನಡ ಬಲ್ಲವರೆಲ್ಲರಿಗೂ ಅರ್ಥವಾಗುವಂತಿದೆ. ನಿರೂಪಣೆಯ ಶೈಲಿಯೂ ಆಕರ್ಷಕವಾಗಿದೆ. ವೃತ್ತಿಪರ ಟಿವಿ ಆಂಕರ್ಗಳೂ ಈ ಶೈಲಿಯ ಮುಂದೆ ತಾವೆಲ್ಲಿದ್ದೇವೆ ಎಂದು ಮುಟ್ಟಿನೋಡಿಕೊಳ್ಳುವಂತಿದೆ.
ವೀಡಿಯೋವನ್ನು ನೀವೂ ನೋಡಿ. ಮೆಚ್ಚುಗೆಯಾದರೆ ಹತ್ತಾರು ಮಂದಿಗೆ ತಿಳಿಸಿ. ಇಲ್ಲವಾದರೆ ಗಣೇಶಣ್ಣನಿಗೇ ನೇರವಾಗಿ ತಿಳಿಸಿ. ಅವರ ಮೊಬೈಲ್ ಸಂಖ್ಯೆ: 94964 20431
-ಚಂದ್ರಶೇಖರ ಕುಳಮರ್ವ
إرسال تعليق