ಮಂಗಳೂರು/ಬೆಂಗಳೂರು: ಆಕಾಶದಲ್ಲಿ ಅದೆಷ್ಟೋ ಬಾರಿ ಅನೇಕ ಆಶ್ಚರ್ಯಕರ ಸಂಗತಿಯನ್ನು ನೋಡುತ್ತಿರುತ್ತೇವೆ. ಅದೇ ರೀತಿ ಇಂದು ಮತ್ತೊಮ್ಮೆ ಆಗಸದಲ್ಲಿ ನೋಡುಗರಿಗೆ ಕೌತುಕ ಸೃಷ್ಠಿಸಿದೆ.
ಸೂರ್ಯನ ಸುತ್ತಲೂ ಕಾಮನಬಿಲ್ಲಿನ ಆಕೃತಿಯ ಉಂಗುರ ಕಾಣಿಸುತ್ತಿದೆ. ಸೂರ್ಯನ ಸುತ್ತಲಿನ ಒಳಭಾಗದಲ್ಲಿ ಕೆಂಪು ಮತ್ತು ಹೊರಭಾಗದಲ್ಲಿ ನೀಲಿ ಬಣ್ಣ ಗೋಚರಿಸುತ್ತಿದೆ. ಒಟ್ಟಾರೆಯಾಗಿ ಸೂರ್ಯನ ಪರಿಧಿಯ ಸುತ್ತ ಕಾಮನಬಿಲ್ಲಿನ ಬಣ್ಣವನ್ನು ಕಣ್ತುಂಬಿಸಿಕೊಳ್ಳಬಹುದು.
ಇದಕ್ಕೆ ಆಂಗ್ಲಭಾಷೆಯಲ್ಲಿ ಹ್ಯಾಲೋಸ್ ಎಂದು ಕರೆಯಲಾಗುತ್ತದೆ. ಆಯಾ ಊರಿನ ಭೌಗೋಳಿಕ ಪರಿಸರಕ್ಕನುಗುಣವಾಗಿ ಇದು ಗೋಚರಿಸುತ್ತಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ಇಂದು ಅನೇಕರು ಆಕಾಶದಲ್ಲಿ ಈ ದೃಶ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ.
Visit: Upayuktha Advertisements- A Dedicated place for Your Ads
(ಉಪಯುಕ್ತ ನ್ಯೂಸ್)
إرسال تعليق