(ಚಿತ್ರ ಕೃಪೆ: ನ್ಯೂಯಾರ್ಕ್ ಟೈಮ್ಸ್)
ಮನುಷ್ಯನ ದಿನನಿತ್ಯದ ಜೀವನದಲ್ಲಿ ಒಂದೊಂದು ಕಾರ್ಯಕ್ಕನುಗುಣವಾಗಿ ಸಮಯವನ್ನು ಮೀಸಲಿರಿಸಿಕೊಳ್ಳುತ್ತೇವೆ. ಆಯಾ ದಿನದ ಕೆಲಸ ಅಂದೇ ಪೂರ್ತಿಗೊಂಡರೆ ಅದೇನೋ ಒಂದು ತೆರನಾದ ತೃಪ್ತಿ ಭಾವ.
ಆದರೆ ಇತ್ತೀಚೆಗೆ ನಮ್ಮ ಕೆಲಸದ ನಡುವೆ ಮೊಬೈಲ್ ಗೆ ನೀಡುವ ಆದ್ಯತೆ ಬೇರಾವುದಕ್ಕೂ ದಕ್ಕುವುದಿಲ್ಲವೇನೋ? ಏಕೆಂದರೆ ಅನೇಕ ಜನರು ಈ ಲಾಕ್ಡೌನ್ ಸಂದರ್ಭದಲ್ಲಿ ಕೆಲಸನೂ ಇಲ್ಲದೆ ಅತ್ತ ಕಡೆ ಶಾಲೆ ಕಾಲೇಜು ಇಲ್ಲದೆ ಮನರಂಜನೆ ಉದ್ದೇಶಕ್ಕಾಗಿ ಮೊಬೈಲ್ ನಲ್ಲೇ ತಲ್ಲೀನರಾಗಿರುತ್ತಾರೆ. ಆದರೆ ಮೊಬೈಲ್ ಪಕ್ಕಕಿಟ್ಟು ಒಮ್ಮೆ ಸುಮ್ಮನೆ ಕೂತು ಯೋಚಿಸೋಣ ಮನಸ್ಸಲ್ಲಿ ಅದೆಷ್ಟೋ ಮಾಡಬೇಕಾದ ಕೆಲಸಗಳ ವೇಳಾಪಟ್ಟಿ ತನ್ನಿಂದ ತಾನಾಗಿಯೇ ರೂಪುಗೊಳ್ಳುತ್ತೆ.
ಕೆಲವರಲ್ಲಿ ಕೆಲವು ರೀತಿಯ ಪ್ರತಿಭೆಗಳಿರಬಹುದು. ಅದರ ಅನಾವರಣಕ್ಕೆ ಇಲ್ಲಿಯವರೆಗೆ ಎಲ್ಲಿಯೂ ಅವಕಾಶ ಸಿಗದೇ ಕೂಡ ಇರಬಹುದು. ಈ ಸಮಯವೇ ಸುವರ್ಣಾವಕಾಶ ಅಂದುಕೊಳ್ಳಿ. ಕೆಲವರು ಹಾಡು ಬರೆಯಬಹುದು. ಸಿನಿಮಾ ನೋಡುವ ಹುಚ್ಚು ಇರುವವರು ಉತ್ತಮ ಸಿನಿಮಾ ನೋಡಿ ವಿಮರ್ಶೆ ಬರೆಯಬಹುದು. ಬರೆಯುವ ಆಸಕ್ತಿ ಇರುವ ಯಾವನ್ನೇ ಆದರೂ ಈ ಲಾಕ್ಡೌನ್ ರಜೇನಾ ಸರಿಯಾಗಿ ಬಳಸಿಕೊಂಡರೆ ಆತ ಕಾದಂಬರೀನೆ ಬರೆಯಬಹುದು. ಮನೆಯ ಎಲ್ಲಾ ಕೆಲಸಗಳಿಗೂ ನೆರವಾಗುತ್ತಾ ಹೊಸ ಹೊಸ ಕೆಲಸವನ್ನು ನಾವೂ ಕಲಿಯಬಹುದು, ಹುಡುಗೀರು ವಿಶೇಷ ಅಡಿಗೆ ತಯಾರಿಸಿ ತಮ್ಮದೇ ನಾಮಾಂಕಿತದಲ್ಲಿ ಅದನ್ನು ಪರಿಚಯಿಸಲೂಬಹುದು.
ಹುಡುಗರಿಗಂತೂ ಕೆಲಸಕ್ಕೆ ಬರವೇ? ಮಾಡುವ ಮನಸ್ಸಿದ್ದರೆ ಎಲ್ಲಾ ಕಡೆ ಬಾಗಿಲು ತೆರೆದಿರುತ್ತದೆ. ಕೂಲಿ ಮಾಡಿ ಹಣ ಸಂಪಾದಿಸಬಹುದು, ಬಾವಿ ತೋಡಬಹುದು, ಕೃಷಿ ಮಾಡಬಹುದು. ಒಂದೇ ಎರಡೇ ಮಾಡುವ ಕೆಲಸಕ್ಕೆ ಲಿಂಗ ತಾರತಮ್ಯವಿಲ್ಲ. ಶ್ರದ್ಧೆ ಇದ್ದರೆ ಎಲ್ಲವೂ ಎಲ್ಲರಿಗೂ ಸಾಧ್ಯ.
ಈ ಸಾಲುಗಳನ್ನು ಓದುತ್ತಾ ಹೋದರೆ ಹಲವರಿಗೆ ತಮ್ಮದೇ ಆದ ಅನೇಕ ರೀತಿಯ ಹೊಸ ಯೋಚನೆಗಳೂ ಬಂದಿರಬಹುದು. ಅದನ್ನು ಯೋಜನೆಗಿಳಿಸುವ ಕಾರ್ಯದಲ್ಲಿ ಬ್ಯುಸಿಯಾಗೋಣ. ಯಾವುದೋ ಮಹಾಮಾರಿ ರೋಗಕ್ಕೆ ದೇಶ ಲಾಕ್ಡೌನ್ ಆಗಿದೆಯೆಂದು ನಮ್ಮನ್ನು ನಾವು ಕೇವಲ ಮೊಬೈಲ್, ಸಾಮಾಜಿಕ ಮಾಧ್ಯಮಗಳಲ್ಲಿ ಲಾಕ್ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಅಲ್ಲವೇ...?
-ಅರ್ಪಿತಾ ಕುಂದರ್
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق