ಹೊಸದಿಲ್ಲಿ: ದೇಶಕ್ಕೆ ಕಾಲಿಟ್ಟಿರುವ ಮಹಾಮಾರಿ ಕೊರೋನಾದಿಂದಾಗಿ ಲಾಕ್ಡೌನ್ ಘೋಷಣೆಯಾಗಿದೆ. ಜನರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಅದರಲ್ಲೂ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳುವುದೇ ಬೇಡ.
ಅದರಲ್ಲೂ ವಿಶೇಷವಾಗಿ ರೈತರ ಬದುಕು ದಿಕ್ಕು ತೋಚದಂತಾಗಿದೆ. ತಾವು ಬೆಳೆದ ಫಲ ಗದ್ದೆಯಲ್ಲೇ, ತೋಟದಲ್ಲೇ ಕೊಳೆಯುವಂತಾಗಿದೆ. ಕೆಲವು ರೈತರು ಸಾಲ ಮಾಡಿ ಬೆಳೆದ ಬೆಳೆಗೂ ಬೆಲೆ ಇಲ್ಲದಂತಾಗಿದೆ.
ಮಳೆ ಬೆಳೆಗೆ ಉತ್ತಮ ಸಹಕಾರ ನೀಡಿದ್ದರೂ ಲಾಕ್ಡೌನ್‌ನಿಂದಾಗಿ ಮಾರುಕಟ್ಟೆ ವ್ಯವಸ್ಥೆ ಲಭ್ಯವಾಗುತ್ತಿಲ್ಲ. ತಾವು ಬೆಳೆದ ಉತ್ಪನ್ನವನ್ನು ಸಾಗಣೆ ಮಾಡುವುದೂ ಕಠಿಣವಾಗಿದೆ.
ಒಟ್ಟಾರೆಯಾಗಿ ರೈತರು ತಾವು ಬೆಳೆದ ಬೆಳೆಗೆ ಗ್ರಾಹಕರನ್ನು ಫೇಸ್‌ಬುಕ್, ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಂತೂ ರೈತರು ಕಂಗೆಟ್ಟು ಹೋಗಿದ್ದಾರೆ.
Tags: Covid 19, Agri products, Lockdown, ಕೃಷಿ ಉತ್ಪನ್ನಗಳು, ಲಾಕ್‌ಡೌನ್ ಸಂಕಷ್ಟ
إرسال تعليق