ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ತಂಬಾಕು ರಹಿತ ದಿನವಾಗಲಿ ಇಂದು ಮುಂದು ಎಂದೆಂದು... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಇಂದು ವಿಶ್ವ ತಂಬಾಕು ರಹಿತ ದಿನವಂತೆ. ಆದರೆ ಇದು ಯಾವತ್ತೂ ಪ್ರಾಯೋಗಿಕವಾಗಿ ಜಾರಿಗೆ ಬರಲೇ ಇಲ್ಲ. ಇತ್ತೀಚೆಗೆ ಧೂಮಪಾನ ಮಾಡುವವರಲ್ಲಿ ಈ ಕೊರೋನಾ ಸೋಂಕು ತಗಲುವ ಪ್ರಮಾಣ ಕಡಿಮೆ ಎಂಬ ವಿಷಯ ಹರಿದಾಡಿತ್ತು. ಆದರೆ ಅಮೆರಿಕದಲ್ಲಿ ಐದು ಲಕ್ಷ ಜನ ಇದರಂತೆ ಧೂಮಪಾನ ಮಾಡುವವರು ಸಾಯುತ್ತಿದ್ದಾರೆ ಎಂಬಂಶ ಜನರಿಗೆ ಗೊತ್ತೇ ಇಲ್ಲ.

ಜನರ ಮಾನಸಿಕ ನೆಲೆಗಟ್ಟು ಏನಾಗುತ್ತಿದೆ? ಮದ್ಯ ವ್ಯಸನಿಗಳು, ಮಾದಕ ವ್ಯಸನಿಗಳ ಸಂಖ್ಯೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ತಂಬಾಕು ಪ್ಯಾಕೆಟ್ ಗಳಲ್ಲೇ "ಇದು ಆರೋಗ್ಯಕ್ಕೆ ಹಾನಿಕಾರಕ" ಎಂಬ ವಾಕ್ಯ ಬರೆದಿದ್ದರೂ ಜನ ಗಮನಿಸುವುದೇ ಇಲ್ಲ. ಸಿನಿಮಾ ಥಿಯೇಟರ್ ಗಳಲ್ಲಿ ಸಿನಿಮಾ ಪ್ರಾರಂಭವಾಗುವ ಮೊದಲು ತಂಬಾಕಿನ ಬಗ್ಗೆ ನೀಡುವ ಜಾಹೀರಾತನ್ನು ಕೂಡ ಯಾರೂ ಸರಿಯಾಗಿ ಗಮನಿಸುವುದೇ ಇಲ್ಲ. 

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ತಂಬಾಕನ್ನು ಸೇವಿಸುವವರಿದ್ದಾರೆ. ಕೋವಿಡ್ ತಂಬಾಕು ಸೇವನೆ ಮಾಎಉವ ಜನರಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತದೆ ಎಂಬ ಸುದ್ದಿ ಹರಿದಾಡಿದಾಗ ವೈದ್ಯಕೀಯ ಕ್ಷೇತ್ರ ಕೈ ಕಟ್ಟಿ ಕುಳಿತಿಲ್ಲ. ಕೋವಿಡ್ 19 ಮತ್ತು ಧೂಮಪಾನದ ಬಗ್ಗೆ ಆತಂಕಕಾರಿ ಸಂಗತಿಗಳೂ ಪ್ರಾಥಮಿಕ ಸಂಶೋಧನೆಗಳಲ್ಲಿ ಹೊರಬೀಳುತ್ತಿದೆ. ಕೋವಿಡ್ 19ರಿಂದ ಉಂಟಾಗುವ ಮಿದುಳಿನ ಸೋಂಕು ರೋಗಗಳು ಧೂಮಪಾನಿಗಳಲ್ಲಿ ಹೆಚ್ಚು ಎಂಬುದು ಕಂಡುಬಂದಿದೆ.

ಕೋವಿಡ್ ನಿಂದ ದೂರವಿರಲು, ಶ್ವಾಸಕೋಶದ ಖಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಧೂಮಪಾನ- ತಂಬಾಕುಗಳನ್ನು ತ್ಯಜಿಸಬೇಕು. ಈ ವಿಷಯದ ಬಗ್ಗೆ ಕೇವಲ ಮಾಧ್ಯಮ ಅಧ್ಯಯನಗಳಿಂದ ಮಾತ್ರವಲ್ಲ ಸ್ವಾನುಭವದಿಂದ ಕಲಿಯಬೇಕಾದ ಅನಿವಾರ್ಯದ ಹೊತ್ತು ಇದಾಗಿದೆ. 

ನಮ್ಮ ಆರೋಗ್ಯಕ್ಕೆ ನಾವೇ ಮೋಸ ಮಾಡದಿರೋಣ. 

-ಅರ್ಪಿತಾ ಕುಂದರ್

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم