ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ವೈದ್ಯರ ನಡೆ ಹಳ್ಳಿಯ ಕಡೆ ಕಾಯ೯ಕ್ರಮಕ್ಕೆ ಶಾಸಕ ಹರೀಶ್ ಪೂಂಜ ಅವರು ಜೂ.6 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧ ಬಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೋವಿಡ್ ನೋಡೆಲ್ ಅಧಿಕಾರಿ ವೆಂಕಟೇಶ್, ಆರೋಗ್ಯಧಿಕಾರಿ ಡಾ. ಕಲಾಮಧು, ತಹಶೀಲ್ದಾರ್ ಮಹೇಶ್ ಜೆ, ತಾಲೂಕು ಪಂಚಾಯತ್ ಸಿಇಒ ಕುಸುಮಾಧರ್, ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಆರೋಗ್ಯ ಶಿಕ್ಷಣ ಅಧಿಕಾರಿ ಅಮ್ಮಿ ಎ.ಬಿಇಒ ವಿರೂಪಾಕ್ಷಪ್ಪ, ಎಚ್.ಎಸ್. ಮುಂಡಾಜೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಾವ್ಯಾ ವೈಪನಾ, ಅಳದಂಗಡಿ .ಆ.ಕೇ.ವೈದ್ಯಾಧಿಕಾರಿ ಡಾ.ಚೈತ್ರಾ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ತಂಡದವರು ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕಿನಲ್ಲಿ 59,877 ಮನೆಗಳಿದ್ದು 2,86,667 ಜನಸಂಖ್ಯೆ ಇದೆ. ಅಷ್ಟು ಮಂದಿಯ ಸರ್ವೇ ಕಾರ್ಯ ನಡೆಯಲಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಗ್ರಾಮದ ಪ್ರತಿಯೊಬ್ಬರ ವೈದ್ಯರ ಪರೀಕ್ಷೆ ನಡೆಸುವುದೂ ಈ ಕಾರ್ಯಕ್ರಮದ ಉದ್ದೇಶ ವಾಗಿದೆ. ಸೋಂಕಿನ ಲಕ್ಷಣ ಇರುವವರ, ಜೊತೆಗೆ ಪ್ರಥಮ, ದ್ವಿತೀಯ ಸಂಪರ್ಕಿತರ ಪರೀಕ್ಷೆ ಯನ್ನು ತಂಡದವರು ನಡೆಸಲಿದ್ದಾರೆ.
ಒಟ್ಟು 21 ತಂಡಗಳಲ್ಲಿ ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನೀಶಿಯನ್, ಒಬ್ಬರು ವೈದ್ಯ, ಆಶಾ, ಎಎನ್‌ಎಂ, ಮೆಡಿಕಲ್ ಕಿಟ್ ಇರಲಿದೆ. ಆಶಾ ಕಾಯ೯ಕರ್ತೆಯರು, ಸ್ಥಳೀಯಾಡಳಿತ ಸಹಕಾರ ನೀಡಲಿದೆ.
ಆರು ಮಾರ್ಗಗಳು: ವೇಣೂರು, ನಾರಾವಿ, ಕಣಿಯೂರು, ಇಂದಬೆಟ್ಟು, ನೆರಿಯ, ಧರ್ಮಸ್ಥಳ ಆರು ಮಾರ್ಗಗಳಿದ್ದು, ಪಂಚಾಯತ್ ನಿಂದ ಊಟದ ವ್ಯವಸ್ಥೆ ಮಾಡಲಾಗಿದೆ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق