ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಬೆಳ್ತಂಗಡಿ ತಾಲೂಕು ಬಿಲ್ಲವ ಯುವ ವೇದಿಕೆಯಿಂದ ಬಾಲಕಿಯ ಚಿಕಿತ್ಸೆಗೆ ನೆರವು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad
ಬೆಳ್ತಂಗಡಿ: ಕೋವಿಡ್ ಲಾಕ್ಡೌನ್ ನಿಂದ ಸಾಮಾನ್ಯ ವರ್ಗದ ಜನರು ಸಂಕಷ್ಟಕ್ಕೀಡಾಗಿದ್ದು, ಜೀವನ ನಡೆಸಲು ಆದಾಯ ಮೂಲಗಳಿಲ್ಲದೇ ಕಂಗಾಲಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದ ತೊಂದರೆಗೀಡಾಗಿರುವ ವರಿಗೆ ನೆರವಾಗಬೇಕೆಂಬ ಉದ್ದೇಶದಿಂದ ತಾಲ್ಲೂಕು ಯುವ ಬಿಲ್ಲವ ವೇದಿಕೆ "ಶ್ರೀ ಗುರು ಸೇವೆ " ಸೇವಾ ಯೋಜನೆಯನ್ನು ಪ್ರಾರಂಭಿಸಿದ್ದು, ಇದೀಗ ನಾಲ್ಕನೇ ಸೇವಾ ಯೋಜನೆ ಆಗಿ ರಕ್ತಕಣಗಳ ಕೊರತೆಯಿಂದ ಬಳಲುತ್ತಿರುವ ಧರ್ಮಸ್ಥಳ ಗ್ರಾಮದ ಅಗುಳೆಬೈಲ್ ನಿವಾಸಿ ದಿನೇಶ್ ಮತ್ತು ಭಾರತಿ ದಂಪತಿಗಳ ಪುತ್ರಿ ಧೃತಿ ಅವರ ಚಿಕಿತ್ಸೆಗೆ ಸಹಾಯಾರ್ಥವಾಗಿ ಆರ್ಥಿಕ ನೆರವು ನೀಡಿದ್ದಾರೆ.

ಜೂ.4ರಂದು ದಾನಿಗಳಿಂದ ಸಂಗ್ರಹಿಸಿದ್ದ ಸಹಾಯಧನವನ್ನು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ ಬಳಂಜ ಇವರು ದಿನೇಶ್ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಯುವ ಬಿಲ್ಲವ ವೇದಿಕೆಯ ಕಾರ್ಯದರ್ಶಿ ರೂಪೇಶ್ ಧರ್ಮಸ್ಥಳ, ಉಪಾಧ್ಯಕ್ಷರು ಗುರುಪ್ರಸಾದ್ ಉಜಿರೆ, ಕೋಶಾಧಿಕಾರಿ ಹರೀಶ್ ಕಲ್ಲಾಜೆ ಶಿರ್ಲಾಲ್ , ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಧರ್ಮಸ್ಥಳ ಇದರ ಅಧ್ಯಕ್ಷ ಪ್ರಕಾಶ್ ಪೂಜಾರಿ, ಉಪಾಧ್ಯಕ್ಷರು ಶ್ರೀಧರ ಪೂಜಾರಿ, ಪುರುಷೋತ್ತಮ ಧರ್ಮಸ್ಥಳ, ವೆಂಕಪ್ಪ ಸುವರ್ಣ ಮಲ್ಲರ್ ಮಾಡಿ ಉಪಸ್ಥಿತರಿದ್ದರು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು