ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದ ತೊಂದರೆಗೀಡಾಗಿರುವ ವರಿಗೆ ನೆರವಾಗಬೇಕೆಂಬ ಉದ್ದೇಶದಿಂದ ತಾಲ್ಲೂಕು ಯುವ ಬಿಲ್ಲವ ವೇದಿಕೆ "ಶ್ರೀ ಗುರು ಸೇವೆ " ಸೇವಾ ಯೋಜನೆಯನ್ನು ಪ್ರಾರಂಭಿಸಿದ್ದು, ಇದೀಗ ನಾಲ್ಕನೇ ಸೇವಾ ಯೋಜನೆ ಆಗಿ ರಕ್ತಕಣಗಳ ಕೊರತೆಯಿಂದ ಬಳಲುತ್ತಿರುವ ಧರ್ಮಸ್ಥಳ ಗ್ರಾಮದ ಅಗುಳೆಬೈಲ್ ನಿವಾಸಿ ದಿನೇಶ್ ಮತ್ತು ಭಾರತಿ ದಂಪತಿಗಳ ಪುತ್ರಿ ಧೃತಿ ಅವರ ಚಿಕಿತ್ಸೆಗೆ ಸಹಾಯಾರ್ಥವಾಗಿ ಆರ್ಥಿಕ ನೆರವು ನೀಡಿದ್ದಾರೆ.
ಜೂ.4ರಂದು ದಾನಿಗಳಿಂದ ಸಂಗ್ರಹಿಸಿದ್ದ ಸಹಾಯಧನವನ್ನು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ ಬಳಂಜ ಇವರು ದಿನೇಶ್ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಯುವ ಬಿಲ್ಲವ ವೇದಿಕೆಯ ಕಾರ್ಯದರ್ಶಿ ರೂಪೇಶ್ ಧರ್ಮಸ್ಥಳ, ಉಪಾಧ್ಯಕ್ಷರು ಗುರುಪ್ರಸಾದ್ ಉಜಿರೆ, ಕೋಶಾಧಿಕಾರಿ ಹರೀಶ್ ಕಲ್ಲಾಜೆ ಶಿರ್ಲಾಲ್ , ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಧರ್ಮಸ್ಥಳ ಇದರ ಅಧ್ಯಕ್ಷ ಪ್ರಕಾಶ್ ಪೂಜಾರಿ, ಉಪಾಧ್ಯಕ್ಷರು ಶ್ರೀಧರ ಪೂಜಾರಿ, ಪುರುಷೋತ್ತಮ ಧರ್ಮಸ್ಥಳ, ವೆಂಕಪ್ಪ ಸುವರ್ಣ ಮಲ್ಲರ್ ಮಾಡಿ ಉಪಸ್ಥಿತರಿದ್ದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق