ಮಂಗಳೂರು: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಉಪನ್ಯಾಸ ಮಾಲಿಕೆಯನ್ನು ಆರಂಭಿಸುತ್ತಿದ್ದು, ಮಾಲಿಕೆಯ ಮೊದಲ ಸಂಚಿಕೆಯಾಗಿ ಜೂನ್ 6ನೇ ತಾರೀಕು ಭಾನುವಾರ ಸಂಜೆ ಐದು ಗಂಟೆಗೆ ಮಂಗಳೂರಿನಲ್ಲಿ ನಡೆಯಲಿದೆ. ಹಿರಿಯ ಸಾಹಿತಿ, ನಿವೃತ್ತ ಕನ್ನಡ ಶಿಕ್ಷಕ ಗುಣಾಜೆ ರಾಮಚಂದ್ರ ಭಟ್ ಅವರು 'ಸಾಹಿತ್ಯದಲ್ಲಿ ಭಾಷಾಶುದ್ಧಿ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಅಧ್ಯಕ್ಷತೆ ವಹಿಸುವರು. ದಕ್ಷಿಣ ಕನ್ನಡ ಚುಸಾಪ ಅಧ್ಯಕ್ಷ ಶ್ರೀ ಹರೀಶ್ ಸುಲಾಯ ಒಡ್ಡಂಬೆಟ್ಟು ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸುವರು. ಹಿರಿಯ ಕವಿ ರಘು ಇಡ್ಕಿದು, ಜನಪ್ರಿಯ ಆಶುಕವಿ ಕವಿ ಎನ್.ಸುಬ್ರಾಯ ಭಟ್, ಪತ್ರಕರ್ತ ರೇಮಂಡ್ ಡಿಕುನಾ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕವಯತ್ರಿ ಅಕ್ಷಯ ಆರ್.ಶೆಟ್ಟಿ ಕಾರ್ಯಕ್ರಮ ನಿರ್ವಹಿಸುವರು. ಉಪನ್ಯಾಸವು ಗೂಗಲ್ ಮೀಟ್ ವರ್ಚುವಲ್ ವೇದಿಕೆಯಲ್ಲಿ ನಡೆಯಲಿದೆ. ಭಾಗವಹಿಸಲಿಚ್ಛಿಸುವವರು ಗೂಗಲ್ ಮೀಟ್ ಅಪ್ಲಿಕೇಶನ್ ನಲ್ಲಿ https://meet.google.com/vsx-ygwy-ghn ಲಿಂಕ್ ಬಳಸಿ ಸೇರಿಕೊಳ್ಳಬಹುದು ಎಂದು ಮಂಗಳೂರು ಚುಸಾಪ ಪ್ರಕಟಣೆ ತಿಳಿಸಿದೆ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق