ನಾವು ಮಾರುಕಟ್ಟೆಯಲ್ಲಿ ಖರೀದಿಸುವ ಅಗ್ಗದ ಬೆಲೆಯ ತರಕಾರಿ ಅಥವಾ ಸೊಪ್ಪು ಎಂದರೆ ಈ ಕೊತ್ತಂಬರಿ. ಇದನ್ನು ಧನಿಯಾ ಎಂದು ಕೂಡ ಕರೆಯಲಾಗುತ್ತದೆ. ಬಹುಮುಖ್ಯವಾಗಿ ಅನೇಕ ಔಷಧಿ ಸತ್ವಗಳನ್ನು ಹೊಂದಿದೆ.
ಇದರ ಸೊಪ್ಪು ಮಾತ್ರವಲ್ಲದೆ ಕೊತ್ತಂಬರಿ ಬೀಜ ಕೂಡ ಅಡುಗೆಗೆ ಬಹುಮುಖ್ಯ ಸಾಂಬಾರ ಪದಾರ್ಥ. ಇದರಲ್ಲಿ ಆಂಟಿಬಯೋಟೆಕ್ ಅಂಶ ಹೇರಳವಾಗಿದೆ. ಸುಗಂಧಭರಿತವಾಗಿರುವ ಈ ಗಿಡದ ಎಲ್ಲಾ ಭಾಗವನ್ನು ನಮಗೆ ಬೇಕಾದ ರೀತಿಯಲ್ಲಿ ಬಳಸಬಹುದು.
ವಿಟಮಿನ್ ಸಿ ಅಂಶವನ್ನು ಒಳಗೊಂಡಿರುವ ಇದನ್ನು ತ್ವಚೆಯ ಆರೋಗ್ಯ ಕಾಪಾಡಲು ಮತ್ತು ಬೊಜ್ಜು ಕರಗಿಸಲು ಉಪಯೋಗವಾಗುತ್ತದೆ. ಅಷ್ಟೇ ಅಲ್ಲದೆ ಚರ್ಮ ರೋಗಗಳ ನಿವಾರಣೆಗೆ ಇದರ ಜ್ಯೂಸ್ ಅತ್ಯಂತ ಪರಿಣಾಮಕಾರಿ. ಇದರ ಸೊಪ್ಪಿನಿಂದ ಚರ್ಮದ ಮೇಲಿರುವ ಕಲೆಯನ್ನು ಹೋಗಲಾಡಿಸಿ ಹೆಚ್ಚು ಕಾಂತಿಯುತವಾಗಿರುವಂತೆ ಮಾಡುತ್ತದೆ.
ಕೊತ್ತಂಬರಿ ಸಸ್ಯದಲ್ಲಿ ಇರುವ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಇದರಲ್ಲಿ ಕಬ್ಬಿಣಾಂಶವು ಕೂಡ ಅಧಿಕವಾಗಿದೆ. ಹಾಗಾಗಿ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.
ಹೀಗೆ ಮನೆಯಲ್ಲಿ ದಿನನಿತ್ಯ ಬಳಸುವ ಅನೇಕ ಪದಾರ್ಥಗಳ ಔಷಧೀಯ ಗುಣದ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಇದರಿಂದ ನಮಗೆ ಅನೇಕ ರೀತಿಯ ಲಾಭಗಳಿವೆ. ಮತ್ತು ಆರೋಗ್ಯಕ್ಕೆ ಬೇಕಾದ ಅಂಶಗಳ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
-ಅರ್ಪಿತಾ ಕುಂದರ್
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ