ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಬಾಲಯ್ಯ ಕುಟುಂಬ ಶ್ರೀ ಪಂಜುರ್ಲಿ ಟ್ರಸ್ಟ್‌ , ಬಂಧುಗಳಿಂದ ನೀಲಾವರ ಗೋಶಾಲೆಗೆ 150 ಕ್ವಿಂಟಾಲ್ ಗೋಗ್ರಾಸ ಅರ್ಪಣೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಉಡುಪಿಯ ಗೋಶಾಲೆಗಳೂ ಸೇರಿದಂತೆ ರಾಜ್ಯದ ಬಹುತೇಕ ಗೋಶಾಲೆಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಆ ಹಿನ್ನೆಲೆಯಲ್ಲಿ ಸಮಾಜದ ಗೋಪ್ರೇಮಿಗಳು ಯಥಾಶಕ್ತಿ ನೆರವು ನೀಡಿ ಸಹಕರಿಸುವಂತೆ ಗೋ ಭಿಕ್ಷಾ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶದ ಮೂಲಕ ಮನವಿ ಮಾಡಲಾಗಿತ್ತು.

ಆ ಸಂದೇಶಕ್ಕೆ ಗೋಪ್ರೇಮಿಗಳಿಂದ ಬಹಳ ಉತ್ತಮ ಸ್ಪಂದನೆ ದೊರೆಯುತ್ತಿರುವುದಕ್ಕೆ ಉಡುಪಿ ಜಿಲ್ಲೆಯ ನೀಲಾವರ ಹೆಬ್ರಿ ಕೊಡವೂರು ಗೋಶಾಲೆಗಳ ರೂವಾರಿ ಗೋವರ್ಧನಗಿರಿ ಟ್ರಸ್ಟ್ ಇದರ ಅಧ್ಯಕ್ಷರಾಗಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಹೂವಿನಕೆರೆ ಶ್ರೀ ಕಾಮಧೇನು ಗೋಸಂವರ್ಧನಾ ಟ್ರಸ್ಟ್ ಗೋ ಶಾಲೆಯ ರೂವಾರಿ ಶ್ರೀ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಮನವಿಯನ್ನು ಪುರಸ್ಕರಿಸಿ ಉಡುಪಿ ಬಡಾನಿಡಿಯೂರಿನ ಬಾಲಯ್ಯ ಕುಟುಂಬ ಶ್ರೀ ಪಂಜುರ್ಲಿ ಟ್ರಸ್ಟ್ ವತಿಯಿಂದ ಮತ್ತು ಅದರ ಬಂಧುಮಿತ್ರರು 150 ಕ್ವಿಂಟಾಲ್ ನಷ್ಟು ಗೋವಿನ‌ಹಿಂಡಿಯನ್ನು ಸಂಗ್ರಹಿಸಿ ನೀಲಾವರ ಗೋಶಾಲೆಗೆ ಅರ್ಪಿಸಿ ಗಮನ ಸೆಳೆದಿದ್ದಾರೆ.‌

ಇದರ ರೂವಾರಿಗಳೂ ಮುಂಬಯಿಯ ಉದ್ಯಮಿಗಳೂ ಆಗಿರುವ ಪ್ರಸ್ತುತ ಉಡುಪಿಯಲ್ಲೇ ನೆಲೆಸಿರುವ ಶ್ರೀ ಉಮೇಶ್ ರಾವ್ ತಮ್ಮ ಕುಟುಂಬಸ್ಥರಿಗೆ ಮತ್ತು ಅವರ ಬಂಧು ಮಿತ್ರರಿಗೆ ಗೋಶಾಲೆಗೆ ಸಹಕರಿಸಲು ಮುಂದಾಗುವಂತೆ ನೀಡಿದ ಕರೆಗೆ ಬಹಳ ಉತ್ತಮ ಪ್ರತಿಕ್ರಿಯೆ ದೊರಕಿದೆ. ಈ ಬಗ್ಗೆ ಉಮೇಶ್ ರಾವ್ ಸಂತಸ ವ್ಯಕ್ತಪಡಿಸಿದ್ದು ಈ ಪ್ರತಿಕ್ರಿಯೆ ಅನಿರೀಕ್ಷಿತವಾಗಿದ್ದು ಗೋವಿನ ಬಗೆಗಿನ ಕಾಳಜಿ ಕಂಡು ಮೂಕ ವಿಸ್ಮಿತರಾಗಿದ್ದೇವೆ ಎಂದಿದ್ದಾರೆ.

ಟ್ರಸ್ಟ್ ನ ಈ ಕಾರ್ಯಕ್ಕೆ ಶ್ರೀ ಪೇಜಾವರ ಶ್ರೀಗಳೂ ಅಚ್ಚರಿ ವ್ಯಕ್ತಪಡಿಸಿದ್ದು ಸಹಕರಿಸಿದ ಎಲ್ಲರಿಗೂ ಶ್ರೀ ಕೃಷ್ಣನ ಕೃಪೆ ಇರಲಿ ಎಂದು ಅನುಗ್ರಹಿಸಿದ್ದಾರೆ.

ಈ ಹಿಂದೆಯೂ ಮೂರು ವರ್ಷಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ  ಭೀಕರ ಪ್ರವಾಹದಿಂದ ಸಂತ್ರಸ್ತರಾದವರಿಗೆ ನೆರವಾಗಲು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಿತ್ಯೋಪಯೋಗಿ ಅವಶ್ಯಕ ವಸ್ತುಗಳನ್ನು ವಿತರಿಸುವ ಸಂದರ್ಭದಲ್ಲೂ  ಬಾಲಯ್ಯ ಕುಟುಂಬ ಶ್ರೀ ಪಂಜುರ್ಲಿ ಟ್ರಸ್ಟ್ ವತಿಯಿಂದ 50 ಸಾವಿರ ರೂ ಮೊತ್ತದ ಹೊಸ ಬಟ್ಟೆಗಳನ್ನು ಒದಗಿಸಿದ್ದರು ಎಂದು ಮಠದ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಸ್ಮರಿಸಿಕೊಂಡಿದ್ದಾರೆ.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು