ಕಂಡೆ ಕಂಡೆ ಸ್ವಾಮಿಯ, ಬೇಡಿ ಕೊಂಡೆ||2||
ಕಂಡೆ ಕಂಡೆ ಸ್ವಾಮಿಯಾ...
ಕಂಡೆ ತಿರುಪತಿ ವೆಂಟೇಶನ
ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥಗಳೀವ ದೇವನ
ಕರುಣನಿಧಿ ಎಂದೆನಿಸಿ ಮೆರೆವನ
||ಕಂಡೆ ಕಂಡೆ||
ಕೋಟಿ ಸೂರ್ಯ ಪ್ರಕಾಶವೆನಿಪ
ಕಿರೀಟವನು ಮಸ್ತಕದಿ ಕಂಡೆನು
ನೋಟಕಾಶ್ಚರ್ಯವಾದ ನಗೆ ಮುಖ
ನೊಸಲಿನಲಿ ತಿರುಮಣಿಯ ಕಂಡೆನು
ಸಾಟಿಇಲ್ಲದೆ ಚತುರ ಹಸ್ತದಿ
ಶಂಖಚಕ್ರಗದಾಬ್ಜ ಕಂಡೆನು
ಬೂಟಕದ ಮಾತಲ್ಲ ಕಾಣಿರೊ,
ಬೂರಿ ದೈವರ ಗಂಡನಂಘ್ರಿಯ
||ಕಂಡೆ ಕಂಡೆ||
ತಪ್ಪು ಕಾಣಿಕೆ , ಕಪ್ಪಗಳನು
ಸಪ್ತ ದ್ವೀಪಗಳಿಂದ ತರಿಸುವ
ಉಪ್ಪು ಓಗರೆಗಳನೆ ಮಾರಿಸಿ
ಉಚಿತದಿಂದಲೆ ಹಣವಗಳಿಸುವ
ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ
ಒಪ್ಪದಲಿ ಕ್ರಯ ಮಾಡಿ ಕೊಡಿಸುವ
ಸರ್ಪಶಯನನ ಸಾರ್ವಭೌಮನ
ಅಪ್ಪ ವೆಂಕಟರಮಣನಂಘ್ರಿಯ
||ಕಂಡೆ ಕಂಡೆ||
ಪುರದಿ ಸಿರಿದೇವಿ ಇರಲು ಕಂಡೆನು
ಉನ್ನತದಿ ಕೌಸ್ತುಭವ ಕಂಡೆನು
ಗರುಡ ಕಿನ್ನರ ನಾರದಾದಿ
ಗಂಧರ್ವರೆಡಬಲದಿ ಕಂಡೆನು
ತೆರತೆರದಿ ಭಕ್ತರಿಗೆ ವರಗಳ
ಕರೆದು ಕೊಡುವುದ ನಾನು ಕಂಡೆನು
ಶರದಿ ಶಯನನ ಸಾರ್ವಭೌಮನ
ವರದ ಪುರಂದರವಿಠ್ಠಲನಂಘ್ರಿಯ
||ಕಂಡೆ ಕಂಡೆ||
ಕಾಮೆಂಟ್ ಪೋಸ್ಟ್ ಮಾಡಿ