ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಕಂಡೆ ಕಂಡೆ ಸ್ವಾಮಿಯ, ಬೇಡಿಕೊಂಡೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಆಲಿಸಿ: ಭಕ್ತಿಗೀತೆ- ಕಂಡೆ ಕಂಡೆ ಸ್ವಾಮಿಯ,  ಬೇಡಿಕೊಂಡೆ
ಗಾಯನ: ಶ್ರೀ ವಿದ್ಯಾಭೂಷಣ






ಕಂಡೆ ಕಂಡೆ ಸ್ವಾಮಿಯ, ಬೇಡಿ ಕೊಂಡೆ||2||

ಕಂಡೆ ಕಂಡೆ ಸ್ವಾಮಿಯಾ...

 

ಕಂಡೆ ತಿರುಪತಿ ವೆಂಟೇಶನ 

ಕಾರಣಾತ್ಮಕ ಸಾರ್ವಭೌಮನ

ಕಾಮಿತಾರ್ಥಗಳೀವ ದೇವನ 

ಕರುಣನಿಧಿ ಎಂದೆನಿಸಿ ಮೆರೆವನ

                                    ||ಕಂಡೆ ಕಂಡೆ||


ಕೋಟಿ ಸೂರ್ಯ ಪ್ರಕಾಶವೆನಿಪ 

ಕಿರೀಟವನು ಮಸ್ತಕದಿ ಕಂಡೆನು

ನೋಟಕಾಶ್ಚರ್ಯವಾದ ನಗೆ ಮುಖ 

ನೊಸಲಿನಲಿ ತಿರುಮಣಿಯ ಕಂಡೆನು

ಸಾಟಿಇಲ್ಲದೆ ಚತುರ ಹಸ್ತದಿ 

ಶಂಖಚಕ್ರಗದಾಬ್ಜ ಕಂಡೆನು

ಬೂಟಕದ ಮಾತಲ್ಲ ಕಾಣಿರೊ, 

ಬೂರಿ ದೈವರ  ಗಂಡನಂಘ್ರಿಯ 

                                 ||ಕಂಡೆ ಕಂಡೆ||


ತಪ್ಪು ಕಾಣಿಕೆ , ಕಪ್ಪಗಳನು 

ಸಪ್ತ ದ್ವೀಪಗಳಿಂದ ತರಿಸುವ

ಉಪ್ಪು ಓಗರೆಗಳನೆ ಮಾರಿಸಿ 

ಉಚಿತದಿಂದಲೆ ಹಣವಗಳಿಸುವ

ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ

ಒಪ್ಪದಲಿ ಕ್ರಯ ಮಾಡಿ ಕೊಡಿಸುವ

ಸರ್ಪಶಯನನ ಸಾರ್ವಭೌಮನ 

ಅಪ್ಪ  ವೆಂಕಟರಮಣನಂಘ್ರಿಯ

                                    ||ಕಂಡೆ ಕಂಡೆ||


ಪುರದಿ ಸಿರಿದೇವಿ ಇರಲು ಕಂಡೆನು

ಉನ್ನತದಿ ಕೌಸ್ತುಭವ ಕಂಡೆನು

ಗರುಡ ಕಿನ್ನರ ನಾರದಾದಿ 

ಗಂಧರ್ವರೆಡಬಲದಿ ಕಂಡೆನು

ತೆರತೆರದಿ ಭಕ್ತರಿಗೆ ವರಗಳ 

ಕರೆದು ಕೊಡುವುದ ನಾನು ಕಂಡೆನು

ಶರದಿ ಶಯನನ ಸಾರ್ವಭೌಮನ 

ವರದ ಪುರಂದರವಿಠ್ಠಲನಂಘ್ರಿಯ

                                         ||ಕಂಡೆ ಕಂಡೆ||



Post a Comment

أحدث أقدم