ಹಾಲಲ್ಲಾದರು ಹಾಕು,
ನೀರಲ್ಲಾದರು ಹಾಕು... ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ,ನೀರಲ್ಲಿ ಮೀನಾಗಿ
ಹಾಯಾಗಿರುವೆ ರಾಘವೇಂದ್ರ
||ಹಾಲಲ್ಲಾದರು||
ಮುಳ್ಳಲ್ಲಾದರು ನೂಕು
ಕಲ್ಲಲ್ಲಾದರು ನೂಕು ರಾಘವೇಂದ್ರ
||ಮುಳ್ಳಲ್ಲಾದರು||
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ
ಒಂದಾಗಿರುವೆ ರಾಘವೇಂದ್ರ
ಬಿಸಿಲಲ್ಲೆ ಒಣಗಿಸು,
ನೆರಲಲ್ಲೆ ಮಲಗಿಸು ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ, ನೆರಲಲ್ಲಿ ಕಂಪಾಗಿ
ನಗುನಗುತ ಇರುವೆ ರಾಘವೇಂದ್ರ
||ಹಾಲಲ್ಲಾದರು||
ಸುಖವನ್ನೆ ನೀಡೆಂದು
ಎಂದೂ ಕೇಳೆನು ನಾನು ರಾಘವೇಂದ್ರಾ...
||ಸುಖವನ್ನೆ||
ಮುನ್ನ ಮಾಡಿದ ಪಾಪ
ಯಾರ ತಾತನ ಗಂಟು
ನೀನೆ ಹೇಳು ರಾಘವೇಂದ್ರ
ಎಲ್ಲಿದರೇನು ನಾ
ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ
ಬಾಳಿದರೆ ಸಾಕು ರಾಘವೇಂದ್ರ
||ಹಾಲಲ್ಲಾದರು||
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ