ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಕಣ್ವಪುರ ಕೃಷ್ಣ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಕಣ್ವಪುರದ ಕೃಷ್ಣನನ್ನು  

ಭಕ್ತಿಯಿಂದ ಪೂಜೆಗೈದು  

ಕಣ್ಣಿನೊಳಗೆ ರೂಪವನ್ನು 

ತುಂಬಿಕೊಳ್ಳಿರೊ || ೧ ||

 


ಪುಣ್ಯಮೂರ್ತಿ ದೇವರನ್ನು 

ಶುದ್ಧಮನದಿ ನೋಡಿ ನೀವು  

ಧನ್ಯರಾಗಿ ಅಂತರಂಗ  

ತೊಳೆಯೆ ಬನ್ನಿರೊ || ೨ || 


ತ್ರೇತಯುಗದ ಅಂತ್ಯದಲ್ಲಿ

ರಾಮದೇವ ಕಣ್ವಮುನಿಗೆ  

ಅರ್ತಿಯಿಂದ ಕೊಟ್ಟನಂದು 

ಕೃಷ್ಣಮೂರ್ತಿಯ || ೩ ||  


ಪುಟ್ಟ ಕೃಷ್ಣ ತೃಪ್ತನಾಗಿ 

ಮಕ್ಕಳನ್ನು ಲಲ್ಲೆಗೈದು  

ಕೊಟ್ಟ ಪೂಜೆ ಸೇವೆಯನ್ನು 

ಪಡೆದು ಕೊಳುವನು || ೪ || 


ಕಣ್ವಪುರವು ಮಹಿಮೆಯುಳ್ಳ 

ನಮ್ಮ ಊರ ಪುಣ್ಯಭೂಮಿ 

ಬನ್ನಿ ನೀವು ಭಕುತಜನರೆ  

ಕೃಷ್ಣನೂರಿಗೆ || ೫ ||  


ಭೂಮಿ ನಾಕ ಕಣ್ವಪುರದಿ  

ಕಡಲ ತೀರ ನದಿಯ ದಡದಿ 

ಕಾಮಿತಾರ್ಥ ಸಲಿಪ ದೇವ 

ನಮ್ಮ ಪೊರೆವನು || ೬ || 


ಅಗವನೆತ್ತಿ ಗೋವಕಾಯ್ದ  

ಬಾಲಕೃಷ್ಣ ನಮ್ಮ ನೋಡಿ 

ಮುಗುಳು ನಗುತ ಕೈಯನೆತ್ತಿ 

ಅಭಯ ಕೊಡುವನು || ೭ || 


ತೊಟ್ಳು ಪೂಜೆ ಹರಕೆಹೊತ್ತು 

ಕೈಯ ಮುಗಿದು ಸುತ್ತುಬಂದು  

ಪುಟ್ಟಮಗುವ ಹೆತ್ತು ಸಲಹಿ  

ಧನ್ಯರಾಗಿರಿ || ೮ ||  


ಮಕರಮಾಸ ಸಂಕ್ರಮಣಕೆ  

ತಲಪಿ ನೀವು ಸನ್ನಿಧಾನ  

ವಿಕಲಮನಸು ಹೃದಯ ಬುದ್ಧಿ 

ಶುದ್ಧಗೊಳಿಸಿರಿ || ೯ || 


ದೇವರೊಲಿದು ನಿಮ್ಮ ಹರಸೆ 

ನಿತ್ಯ ಭಜನೆ ಪೂಜೆಮಾಡಿ   

ಕಾವಕಾರ್ಯ ಮಾಡಿರೆಂದು 

ಅವನ ಬೇಡಿರಿ || ೧೦ ||  


ಛಂದಸ್ಸು:-  ೩+೩+೩+೩ 

                      ೩+೩+೩+೩

                      ೩+೩+೩+೩ 

                      ೩+೩+೪      ----- ಈ ರೀತಿಯ ಮಾತ್ರಾಗಣವುಳ್ಳ ಛಂದೋಬದ್ಧ ಭಕ್ತಿಗೀತೆ.


ಕಣ್ವಪುರ ಕೃಷ್ಣ (ಭಕ್ತಿಗೀತೆ) 

ರಚನೆ:-  ವಿ.ಬಿ.ಕುಳಮರ್ವ , ಕುಂಬ್ಳೆ 

ರಾಗಸಂಯೋಜನೆ ಮಾಡಿ ಹಾಡಿದವರು :-  ಶ್ರೀ ಬಾಲಕೃಷ್ಣ ಆಚಾರ್ಯ ಪುತ್ತಿಗೆ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم