ಆಲಿಸಿ: ಭಕ್ತಿಗೀತೆ- ಕರೆದರೆ ಬರಬಾರದೆ ಕರುಣೆಯ ವಾರಿಧಿ
ಗಾಯನ: ಪದ್ಮವಿಭೂಷಣ ಡಾ. ಎಸ್‌ಪಿ ಬಾಲಸುಬ್ರಹ್ಮಣ್ಯ
ಕರೆದರೆ ಬರಬಾರದೆ ಕರುಣೆಯ ವಾರಿಧಿ||2||
ಧೂಮ್ರವರ್ಣನೆ , ಚಾಮರಕರ್ಣನೆ||2||
ಗಣನಾಥ ಆನಂದದಾತಾ...||2||
||ಕರೆದರೆ||
ಯುಗಯುಗದಲ್ಲು ಅವತರಿಸಿದೆ ನೀನು
ಮಡುಹಿದೆ ಮದಿಸಿದ ಧನುಜರನು
||ಯುಗಯುಗದಲ್ಲು||
ಶರಣ ಜನರ ಮೊರೆ ಕೇಳಿ ಹರಸುತ||2||
ಪೊರೆದವನೆ ಪ್ರಭುವೆ ಹರಸುತಾ...||2||
||ಕರೆದರೆ||
ಸುರಮುನಿಗಳು ಆರಾಧಿಸೆ ನಿನ್ನ
ಹರಿಸಿದೆ ಮರೆಸಿದೆ ಬವಣೆಗಳನ್ನ
||ಸುರಮುನಿಗಳು||
ಭೂಮಿಯ ಭಾಗ್ಯ ಹಣ್ಣಾಯಿತು ಎಂದೆ||2||
ಕಲಿಯುಗದ ವರದಾ ನೀನಾಗಿ ಬಂದೆ||2||
||ಕರೆದರೆ||
ಭಕ್ತಿಯಿಂದ ನಿನ್ನ ಸ್ಮರಣೆಯ ಮಾಡಿ
ಗರಿಕೆಹುಲ್ಲಿನಲ್ಲಿ ಪೂಜೆ ಮಾಡಿ
ಸವಿಮೋದಕ ನಿವೇದಿಸೆ ತಂದೆಯೆ
ದರುಶನವ ನೀಡಯ್ಯ ತಂದೆ||ಭಕ್ತಿಯಿಂದ||
ದರುಶನವ ನೀಡಯ್ಯ ತಂದೆ....
||ಕರೆದರೆ||
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق