ಆಲಿಸಿ: ಭಕ್ತಿಗೀತೆ- ನಂಬಿದೆ ನಿನ್ನ ನಾಗಾಭರಣ
ಗಾಯಕಿ: ಬಿ.ಕೆ ಸುಮಿತ್ರಾ
ನಂಬಿದೆ ನಿನ್ನ ನಾಗಾಭರಣ
ಕಾಯೋ ಕರುಣಾಮಯನನ್ನ
||ನಂಬಿದೆ||
ನಿನ್ನೀ ನಾಮವು ಒಂದೇ
ನೀಗಿಸ ಬಲ್ಲುದು ಬಾಧೆ
||ನಿನ್ನೀ||
ತನುಮನ ಜೀವನ ಪಾವನವಯ್ಯ
ಶಂಭೋ ಎನ್ನಲು ಇಲ್ಲ ಭಯ
||ನಂಬಿದೆ||
ಬಾಡದ ಹೂವಿನ ಮಾಲೆ
ಬಾಗಿಸು ಪಾದದ ಮೇಲೆ
||ಬಾಡದ||
ಪ್ರೇಮ ಮಯ ನಿನಗೆ ಜಯ||2||
ನನ್ನ ಜೀವನ ನಿನ್ನಲಿ ತನ್ಮಯ
ಬಾಳಿನ ಹಾದಿಯ ಬೆಳಗಯ್ಯ
||ನಂಬಿದೆ||
ಲೋಕವ ಕಾಯುವ ಸ್ವಾಮೀ
ಭಿಕ್ಷೆಯ ಬೇಡಿದ ಪ್ರೇಮಿ
||ಲೋಕವ||
ಭಸ್ಮ ಮಯ ಬಿಲ್ವಪ್ರಿಯ||2||
ನನ್ನೀ ದೇಹವೆ ನಿನ್ನಯ ಆಲಯ
ಸೇವಾ ಭಾಗ್ಯವ ನೀಡಯ್ಯ
||ನಂಬಿದೆ||
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ