ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಯಕ್ಷಗಾನ ತಾಳಮದ್ದಳೆ- ರಾಮನನ್ನು ಕರೆದೊಯ್ಯಲು ಅಯೋಧ್ಯೆ ಅಂಗಳಕ್ಕೆ ಕಾಲ ಪುರುಷ ಬಂದಿದ್ದು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 

"ಮುಂದಿನ ವರ್ಷ 'ರಾಮ ನಿರ್ಯಾಣ' ಪ್ರಸಂಗ ಮಾಡುವ" ಹಾಗಂತ ಹೇಳಿದ್ದು ರಾಮಚಂದ್ರ ರಾಯರು, ಕುಮರಿಗದ್ದೆ. ಹೇಳಿದ್ದು ಏಪ್ರಿಲ್ 2018 ರಲ್ಲಿ.  ಅವತ್ತು ವಾಲಿ ಮೋಕ್ಷದಲ್ಲಿ ವಾಲಿಗೆ ಮೋಕ್ಷ ಅನುಗ್ರಹಿಸುವ ಶ್ರೀರಾಮನ ಪಾತ್ರ ವಹಿಸಿದ್ದ ರಾಮಚಂದ್ರರಾಯರು ಪ್ರಸಂಗ ಮುಗಿದ ಮೇಲೆ ಹೇಳಿದ ಮಾತು "ಮುಂದಿನ ವರ್ಷ 'ರಾಮ ನಿರ್ಯಾಣ' ಪ್ರಸಂಗ ಮಾಡುವ" ಎಂದು.


ಆ ರಾಮ ನಿರ್ಯಾಣದ ಪ್ರಸಂಗದ ಕತೆಯಲ್ಲಿ ಕಾಲ ಪುರುಷನೇ ಬಂದು "ರಾಮಾವತಾರದ ಉದ್ದೇಶ ಮತ್ತು ನಿಗದಿ ಪಡಿಸಿದ ಕಾಲ ಎರಡೂ ಮುಗಿದಿದೆ, ವೈಕುಂಠಕ್ಕೆ ಹಿಂದಿರುಗುವ ಕಾಲ ಬಂದಿದೆ" ಎಂದು ನೆನಪಿಸುವ ಕತೆ.


ಇಲ್ಲಿ, "ಮುಂದಿನ ವರ್ಷ 'ರಾಮ ನಿರ್ಯಾಣ' ಮಾಡುವ" ಎಂದ ರಾಮಚಂದ್ರ ರಾಯರನ್ನು ಮುಂದಿನ ವರ್ಷದ ಆ ಪ್ರಸಂಗ ನಡೆಯುವ ಕಾಲದವರೆಗೆ ಕಾಯಲೂ, ಕಾಲ ಪುರುಷ ಅವಕಾಶ ಕೊಡಲಿಲ್ಲ ಎನ್ನುವುದು ದುರಂತ. 17.09.2018 ರಂದು ರಾಮಚಂದ್ರ ರಾಯರು ಇಹ ಲೋಕ ತ್ಯಜಿಸಿದರು.


ಪೊಳಲಿ ಶಾಸ್ರಿ ಪ್ರಶಸ್ತಿಯೂ ಸೇರಿ ಅನೇಕ ಪ್ರಶಸ್ತಿ ಬಿರುದುಗಳನ್ನು ಪಡೆದ, ಘಟ್ಟದ ಮೇಲಿನ ಯಕ್ಷ ಭೀಷ್ಮ ಎಂದೇ ಪ್ರಖ್ಯಾತರಾದ ಎಂ.ಎಲ್.ರಾಮಚಂದ್ರ ರಾಯರು ಅನೇಕ ಯಕ್ಷ ಸಂಘ, ಮೇಳಗಳನ್ನು ಕಟ್ಟಿ, ಕಲಿಕಾ ಕಲಾ ಕೇಂದ್ರಗಳನ್ನು ಹುಟ್ಟು ಹಾಕಿ, ಪ್ರಸಿದ್ಧ ಮೇಳಗಳಲ್ಲಿ ವೇಷಧಾರಿಯಾಗಿ ಅನೇಕ ವರ್ಷಗಳ ಕಾಲ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸುತ್ತಿ ತಿರುಗಾಟ ಮಾಡಿ ಯಕ್ಷಗಾನ ಕಲೆಯನ್ನು ಬೆಳಸಿದ ರಾಮಚಂದ್ರರಾಯರು ವೇಷಕಟ್ಟಿ ತಿರುಗಾಟ ಸಾಕು ಅನಿಸಿದಾಗ ತಾಳಮದ್ದಲೆ ಮತ್ತು ಕಾವ್ಯವಾಚನವನ್ನು ತಬ್ಬಿಕೊಂಡಿದ್ದವರು.


ಅನೇಕ ವರ್ಷಗಳು ಕೂಟ ತಿರುಗಾಟಗಳೊಂದಿಗೆ ಪ್ರತೀ ವರ್ಷ ಮನೆಯಂಗಳದಲ್ಲಿ ಒಂದು ತಾಳಮದ್ದಲೆ,  ಅದೂ ಪ್ರಸಿದ್ಧ ಕಲಾವಿದರುಗಳನ್ನು ಕರೆಸಿ, ನಡೆಸಿಕೊಂಡು ಬಂದಿದ್ದರು.


ಅವರ ಸ್ಮರಣೆಯಲ್ಲಿ ಮತ್ತು  "ಮುಂದಿನ ವರ್ಷ ರಾಮ ನಿರ್ಯಾಣ ಮಾಡುವ" ಎನ್ನುವ ಅವರ ಬಯಕೆಯಂತೆ  ದಿನಾಂಕ 30.03.2019ರ ಶನಿವಾರ ಮನೆ ಅಂಗಳದಲ್ಲಿ ಶ್ರೀರಾಮ ನಿರ್ಯಾಣ ಪ್ರಸಂಗ.   

*****

ರಾಮನೊಂದಿಗೆ ಏಕಾಂತ ಸಂಭಾಷಣೆಗೆ ಬಂದ ಕಾಲ ಪುರುಷ, ರಾಮ ಏಕಾಂತ ಸಂಭಾಷಣೆಯಲ್ಲಿದ್ದಾಗಲೇ ರಾಮನನ್ನು ಭೇಟಿಯಾಗಲು ಬಂದ ದೂರ್ವಾಸರು, ಬಾಗಿಲಲ್ಲಿ ತಡೆಯುವ ಲಕ್ಷ್ಮಣ, ರಾಮ-ಕಾಲ ಪುರುಷರ ಏಕಾಂತಕ್ಕೆ ಲಕ್ಷ್ಮಣನಿಂದಲೇ ಭಂಗ ಉಂಟಾಗುವುದು, ಲಕ್ಷ್ಮಣನಿಗೆ ಶಿಕ್ಷೆ,, ರಾಮ ಅಯೋಧ್ಯೆಯನ್ನು ತೊರೆದು ವೈಕುಂಠ ಸೇರುವ ದೃಶ್ಯ... ಎಲ್ಲವನ್ನೂ ಮಾತಿನಲ್ಲೇ ಕಟ್ಟಿ ಕೇಳುಗರ ಗಂಟಲುಬ್ಬುವಂತ ಭಾವ ಸೃಷ್ಟಿಯ ಈ ರಾಮ ನಿರ್ಯಾಣ ಪ್ರಸಂಗ ನಿಮ್ಮ ಮನಸ್ಸನ್ನು ಕಲಕದಿದ್ದರೆ ಹೇಳಿ!!


ಅದರ ಆಡಿಯೋ ಯೂ ಟೂಬ್ ಮೂಲಕ ನಿಮ್ಮ ಕರಣಗಳಿಗೆ, ನಿಮ್ಮ ಮನಸ್ಸಿಗೆ.  

ರಸವತ್ತಾದ ತಾಳ ಮದ್ದಳೆ ರಾಮ ನಿರ್ಯಾಣದ ಯೂಟ್ಯೂಬ್ ಲಿಂಕ್:



ಕೇಳಿ ರಾಮಾನುಗ್ರಹ ಪಡೆಯೋಣ.


ಜೈ ಶ್ರೀರಾಮ್.


***


ಮನೆಯಂಗಳದಲ್ಲಿ ತಾಳಮದ್ದಲೆ

ಸ್ಥಳ : ಕುಮರಿಗದ್ದೆ - ಸಿಗದಾಳ್

ದಿನಾಂಕ : 30.03.2019

ಪ್ರಸಂಗ: ರಾಮ ನಿರ್ಯಾಣ


ಭಾಗವತರು:

ಪ್ರಸನ್ನ ಭಟ್, ಬಾಳಕಲ್,

ಶಿವಾನಂದ ಭಟ್, ಹೇರೂರು,

ಮದ್ದಲೆ:

ರಾಘವೇಂದ್ರ ಹೆಗಡೆ, ಯಲ್ಲಾಪುರ

ಹೆಚ್ ಎಸ್ ಗಣೇಶ್‌ಮೂರ್ತಿ, ಹುಲುಗಾರು

ವೆಂಕಟೇಶ ಭಟ್, ಭಾಗವತರ ಮನೆ


ರಾಮ: ವಾಸುದೇವ ರಂಗಾಭಟ್, ಉಡುಪಿ,

ಲಕ್ಷ್ಮಣ : ವಿದ್ವಾನ್ ಗಣಪತಿಭಟ್, ಸಂಕದಗುಂಡಿ,

ಕಾಲ ಪುರುಷ: ಪವನ್, ಕಿರಣ್‌ಕೆರೆ,

ದೂರ್ವಾಸ: ಸೀತಾರಾಮಚಂದು ಹೆಗಡೆ, ಶಿರಸಿ,

ಊರ್ಮಿಳೆ: ಎಂ.ಎಸ್.ಜನಾರ್ದನ, ಮಂಡಗಾರು.

ನಾರದ : ಅಶೋಕ ಸಿಗದಾಳ್, ಕುಮರಿಗದ್ದೆ.

ಇಂದ್ರ : ಅರವಿಂದ ಸಿಗದಾಳ್, ಮೇಲುಕೊಪ್ಪ.


ಕೇಳಿ, ಅದರ ಹ್ಯಾಂಗ್ ಓವರ್‌ನಿಂದ ಹೊರಬಂದ ಮೇಲೆ ಅನಿಸಿದ್ದನ್ನು ಹೇಳಲು ಮರೆಯಬೇಡಿ.


-ಅರವಿಂದ ಸಿಗದಾಳ್, ಮೇಲುಕೊಪ್ಪ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

ನವೀನ ಹಳೆಯದು