ಸಿನಿರಂಗವನ್ನೇ ಧೂಳೆಬ್ಬಿಸಿದ ಕೆಜಿಎಫ್ ಸಿನಿಮಾ ಜನರ ಫೇವರೆಟ್ ಸಿನಿಮಾಗಳಲ್ಲಿ ಮಹತ್ವದ ಸಾಲಿನಲ್ಲಿದೆ. ಇದೀಗ ಕೆಜಿಎಫ್ 2 ಚಿತ್ರದ ಬಗ್ಗೆ ಅಭಿಮಾನಿಗಳು ಕುತೂಹಲದಿಂದಿದ್ದಾರೆ.
ಈ ಚಿತ್ರ ಕಳೆದ ಅಕ್ಟೋಬರ್ ತಿಂಗಳಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಸಾಧ್ಯವಾಗಲಿಲ್ಲ. ಮತ್ತೆ ಜುಲೈ ತಿಂಗಳಿಗೆ ಮುಂದೂಡಲಾಗಿತ್ತು. ಆದರೆ ಜುಲೈನಲ್ಲೂ ಸಿನಿಮಾ ರಿಲೀಸ್ ಮಾಡುವುದು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಇನ್ನೆರಡು ತಿಂಗಳು ಚಿತ್ರಮಂದಿರ ತೆರೆಯಲು ಸಾಧ್ಯವಿಲ್ಲ. ತೆರೆದರೂ ಕೂಡ 100% ಪ್ರವೇಶ ಇರದು.
ಆದ್ದರಿಂದ ಜುಲೈ 16ರಂದೇ ಚಿತ್ರ ಬಿಡುಗಡೆಯ ಹೊಸ ದಿನಾಂಕವನ್ನು ಚಿತ್ರ ತಂಡ ಘೋಷಣೆ ಮಾಡಲಿದೆಯಂತೆ.
Tags: KGF-2, Yash Films, Sandalwood,ಕೆಜಿಎಫ್-2
ಕಾಮೆಂಟ್ ಪೋಸ್ಟ್ ಮಾಡಿ