ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಶಾಲಾರಂಭದ ಮಕ್ಕಳ ಸ್ವಾಗತ ಗೀತೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad ಆಲಿಸಿ: ಶಾಲಾರಂಭದ ಮಕ್ಕಳ ಸ್ವಾಗತ ಗೀತೆ

ರಚನೆ: ವಿಬಿ ಕುಳಮರ್ವ, ಕುಂಬ್ಳೆ

ಸಂಗೀತ, ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
 ಸ್ವಾಗತ ಸುನೀತ 🙏  
    ~~~~~~  
ನೂತನ ವರ್ಷಕೆ ಸ್ವಾಗತ ನಿಮಗಿದೊ  
ಮುದ್ದಿನ ಕಂದರೆ ಸುಮನಸರೆ ||
 
ಗಿಳಿಗಳೆ ಅಳಿಗಳೆ ಕೋಕಿಲ ಕುಲಗಳೆ  
ಬನ್ನಿರಿ ಪ್ರತಿಭೆಯ ಕಣಜಗಳೆ || 

ಶಾಲೆಯ ಬಾಗಿಲು ತೆರೆದಿದೆ ನೋಡಿರಿ  
ಕರೆವೆವು ನಿಮ್ಮನು ಒಳಗಡೆಗೆ ||  

ಮಾತೆಯ ಮಮತೆಯು ಇಲ್ಲಿದೆ ಮಕ್ಕಳೆ  
ವಿದ್ಯಾದೇಗುಲ ಪರಿಸರದಿ ||  

ದೇಶವ ಕಟ್ಟುವ ಮುಂದಿನ ಪ್ರಜೆಗಳೆ  
ಗಳಿಸಲು ಬೇಕು ಜ್ಞಾನವನು ||  

ಗ್ರೀಷ್ಮದ ಹನಿಮಳೆ ಸಿಂಚನಗೊಳ್ಳಲು  
ಬಾಳಲಿ ಸ್ಫೂರ್ತಿಯ ಉಕ್ಕುವುದು ||  

ಉಜ್ವಲ ಭವಿಷ್ಯ ನಿಮಗಿದೆ ಚಿಣ್ಣರೆ  
ಕಲಿತರೆ ಜೀವನ ಪಾಠವನು ||  
 
ರಚನೆ:- 
✍ ವಿ.ಬಿ.ಕುಳಮರ್ವ ,ಕುಂಬ್ಳೆ  
(  ಶಾಲಾ ಮಕ್ಕಳ ಪ್ರವೇಶೋತ್ಸವದಲ್ಲಿ ಹಾಡುವುದಕ್ಕಾಗಿ ರಚಿಸಿದ ಒಂದುಸಾರ್ವಕಾಲಿಕ ಪ್ರವೇಶೋತ್ಸವ ಗೀತೆ)

Post a Comment

ನವೀನ ಹಳೆಯದು