ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕಲ್ಲು ಭೂಮಿಯಲ್ಲಿ ಕೃಷಿ ಅರಳಿಸಿದ ಸಾಧಕ- ಮಾರುತಿ ನಾಯಕ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ಕಣ್ಣಿದ್ದರೆ ಕನಕಗಿರಿ ನೋಡು ಎನ್ನುವುದು ವಿಶ್ವ ವಿಖ್ಯಾತ ನಾಣ್ಣುಡಿ. ಕನಕಗಿರಿ ತಾಲ್ಲೂಕು ಕೇವಲ ಐತಿಹಾಸಿಕ ದೃಷ್ಠಿಯಿಂದ ಮಾತ್ರವಲ್ಲ ಕೃಷಿಯಿಂದಲೂ ಮಹತ್ವ ಪಡೆದಿದೆ. ಇಲ್ಲಿಗೆ ಸಮೀಪದಲ್ಲಿರುವ ಹುಲಿಹೈದರ ಗ್ರಾಮ ಚರಿತ್ರೆಯಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. ಈ ಗ್ರಾಮದ ಮಾರುತಿ ನಾಯಕ್ ದೊರೆ ತಮ್ಮದೇ ಆದ ಕೃಷಿ ವೈಶಿಷ್ಠ್ಯತೆಯಿಂದ  ಹೆಸರಾದವರು. 12 ಎಕರೆ ವಿಸ್ತೀರ್ಣದ ಇವರ ಕೃಷಿ ಜಮೀನು ವೈವಿದ್ಯಮಯ ಬೆಳೆಗಳ ಪ್ರಾಯೋಗಿಕ ತಾಕಿನಂತೆ ಕಾಣುತ್ತದೆ. ಇವರ ತೋಟದಲ್ಲಿ ನಾವು ಗಮನಿಸಿದರೆ ಗೋಚರಿಸುವುದು ಕೃಷಿಗೆ ತಮ್ಮನ್ನು ಅರ್ಪಿಸಿಕೊಂಡಿರುವ ದಂಪತಿಗಳು.

ಇಬ್ಬರ ಅವಿರತ ಶ್ರಮದಿಂದ ಹತ್ತಿ ಬೀಜೋತ್ಪಾದನೆ, ಭತ್ತ, ಎಳ್ಳು ಮುಂತಾದ ಕೃಷಿ ಬೆಳೆಗಳು ಹಾಗು ತೋಟದ ಬೆಳೆಗಳಾದ ಮಾವು, ಪೇರಲ, ಕಾಕಡಾ ಮಲ್ಲಿಗೆ, ಸೀತಾಫಲ, ತೆಂಗು  ಹಾಗು ಅಂಜೂರ  ಮತ್ತು ಬದುವಿನ ಮೇಲೆ ಅಲ್ಲಲ್ಲಿ ಸಾಗುವಾನಿ ಕಾಣಬಹುದು. ರಾಸಾಯನಿಕ ಮತ್ತು ಸಾವಯವ ಮಿಶ್ರ ಪದ್ದತಿ ಅನುಸರಣೆ. ಜೀವನೋಪಾಯಕ್ಕಾಗಿ ಕೋಳಿ ಮತ್ತು ಆಡುಗಳು ಇಲ್ಲಿವೆ. ಆಕಾಶವಾಣಿ ಕೃಷಿ ಕಾರ್ಯಕ್ರಮಗಳನ್ನು ತಪ್ಪದೇ ಆಲಿಸಿ ಭಾಗವಹಿಸುವ ತಜ್ಞರ ಜೊತೆ ನಿರಂತರ ಸಂಪರ್ಕ ಹೊಂದಿ ಮಾಹಿತಿ ಪಡೆಯುವುದು ಹವ್ಯಾಸ. ಕೃಷಿ ಸಂಬಂಧಿತ ಯಾವುದೇ ಕಾರ್ಯಕ್ರಮ ಇದ್ದರೂ ಬಲವಂತವಾಗಿ ಇವರನ್ನು ಕಳುಹಿಸಿ ತಾವು ಕೃಷಿ ಚಟುವಟಿಕೆ ನೋಡಿಕೊಳ್ಳುವ ಇವರ ಶ್ರೀಮತಿಯವರ ನಡೆ ಅತ್ಯಂತ ಶ್ಲಾಘನೀಯ.

ವಾಹನದ ನೇರ ಸೌಕರ್ಯವಿಲ್ಲದಿದ್ದರೂ ಹಲವು ದೂರ ನಡೆದು ಹೋಗಿ ತರಬೇತಿಗಳಲ್ಲಿ ಭಾಗವಹಿಸುವುದು ಹಾಗೂ ಅದರಲ್ಲಿ ಸಾತ್ವಿಕ ಸಂವಾದದಲ್ಲಿ ಭಾಗವಹಿಸುವುದು ಮಾರುತಿಯವರ ಸರಳ ಗುಣ. ಕೃಷಿಯಲ್ಲಿ ನಲವತ್ತು ವರ್ಷಗಳ ಸುದೀರ್ಘ ಅನುಭವವಿದ್ದರೂ ಏನು ಅರಿಯದಂತೆ ಮುಗ್ದ ಮನಸ್ಸಿನಿಂದ ವಿಷಯ ಜ್ಞಾನ ಹೊಂದುವುದು ಅವರ ಸರಳತನಕ್ಕೆ ಉದಾಹರಣೆ. ಅವರು ಬಯಸದಿದ್ದರೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ “ಶ್ರೇಷ್ಠ ತೋಟಗಾರಿಕೆ ಕೃಷಿಕ” ಹಾಗೂ ಪತ್ರಿಕೆಯೊಂದರ “ಸೂಪರ್ ಸ್ಟಾರ್ ರೈತ” ಪ್ರಶಸ್ತಿಗಳು ತಾವಾಗೆ ಒಲಿದಿವೆ. ಮಗುವಿನ ಮುಗ್ದ ಮನಸ್ಸಿನಿಂದ ಆದರಿಸುವ ಈ ಕೃಷಿ ದಂಪತಿಗಳನ್ನು ಸಂಪರ್ಕಿಸಲು ದೂ. 9902903637.

-ಡಾ. ಪಿ. ಆರ್ ಬದರಿಪ್ರಸಾದ್

ಸಹಾಯಕ ಪ್ರಾದ್ಯಾಪಕರು (ಕೀಟಶಾಸ್ತ್ರ)

ಕೃಷಿ ಮಹಾವಿದ್ಯಾಲಯ, ಗಂಗಾವತಿ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم