ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಜಿವಿಹೆಚ್ಎಸ್ಎಸ್ ಕಾರಡ್ಕ ಶಾಲೆಯ ಆನ್‌ಲೈನ್ ಪ್ರವೇಶೋತ್ಸವ ಸಮಾರಂಭ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 



ಕಾರಡ್ಕ: ಜಿವಿಹೆಚ್ಎಸ್ಎಸ್ ಕಾರಡ್ಕ ಶಾಲೆಯ 2021 - 22 ಶೈಕ್ಷಣಿಕ ವರ್ಷಕ್ಕೆ ಪ್ರವೇಶೋತ್ಸವ ಸಮಾರಂಭವನ್ನು ಗೂಗಲ್ ಮೀಟ್ ಮೂಲಕ  ನಡೆಸಲಾಯಿತು. ಸಭೆಯು ಸಮಾಜಶಾಸ್ತ್ರ ಶಿಕ್ಷಕ ಸತೀಶನ್ ಬಿ ಅವರ ಪ್ರಾರ್ಥನಾ ಹಾಡಿನೊಂದಿಗೆ ಪ್ರಾರಂಭವಾಯಿತು.

ಪಿಟಿಎ ಅಧ್ಯಕ್ಷ ಮೋಹನನ್ ಕಾರಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ ಪ್ರವೇಶ ಸಮಾರಂಭವನ್ನು ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ, ವಕೀಲ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಶಾಲೆಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಪ್ರವೇಶ ಸಮಾರಂಭದಲ್ಲಿ ಭಾಗವಹಿಸಿದ್ದರು. ಶಾಲಾ ಮಟ್ಟಪ್ರವೇಶ ಸಮಾರಂಭದ ನಂತರ ಒಂದರಿಂದ ಹತ್ತನೇ ತರಗತಿಗಳಲ್ಲಿನ ಮಕ್ಕಳಿಗೆ ತರಗತಿ ಪ್ರವೇಶ ಸಮಾರಂಭವನ್ನು ಆಯೋಜಿಸಲಾಗಿತ್ತು.

ಪ್ರವೇಶೋತ್ಸವ ಸಮಾರಂಭದ ನೆನಪಿಗಾಗಿ ಮಕ್ಕಳು ತಮ್ಮ ಮನೆಗಳಲ್ಲಿ ಕಾಡು ಮಾವಿನ ಗಿಡ ನೆಟ್ಟು, ಸಿಹಿತಿಂಡಿಗಳನ್ನು ವಿತರಿಸುವ ಮೂಲಕ  ಮನೆಯ ಉತ್ಸವವನ್ನಾಗಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಬಿ.ಶಫೀಕ್ ಕಾರಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಜೀಜಾ ಎ ರೂಪಾ ಸತ್ಯನ್, ಪ್ರಾಂಶುಪಾಲ ಮೀರಾ ಜೋಸ್, ಹಿರಿಯ ಶಿಕ್ಷಕಿ ಚಂದ್ರಿಕಾ ಎಂ, ಎಸ್‌ಎಂಸಿ ಚೇರ್ಮನ್ ತಂಪನ್ ಕೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಕರುಣಕರ ಎಂ ಅವರು ಸ್ವಾಗತಿಸಿದರು.

ಸ್ಟಾಫ್ ಸೆಕ್ರೆಟರಿ ಕುಞಂಬು ಅವರು ಧನ್ಯವಾದ ಅರ್ಪಿಸಿದರು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು