ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕನ್ನಡವೆಂದರೆ ಸುಂದರ ಭಾಷೆ: ಮಣಿಯಿತು ಗೂಗಲ್‌ ಕನ್ನಡಿಗರ ಆಕ್ರೋಶಕ್ಕೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಬೆಂಗಳೂರು: ಕನ್ನಡದ ಬಗ್ಗೆ ಅವಹೇಳನಕಾರಿ ಹುಡುಕಾಟಗಳನ್ನು ತೋರಿಸುತ್ತಿದ್ದುದನ್ನು ಗೂಗಲ್‌ ಈಗ ತೆಗೆದು ಹಾಕಿದ್ದು, ಕನ್ನಡದಲ್ಲೇ ಟ್ವೀಟ್ ಮಾಡಿ ಕನ್ನಡಿಗರ ಕ್ಷಮೆಯಾಚಿಸಿದೆ.

ಯಾವುದೇ ಭಾಷೆಯನ್ನು ಕೊಳಕು ಎನ್ನಲಾಗದು.  ಗೂಗಲ್ ಆಲ್ಗೊರಿದಂ ಅನ್ನು ಸತತವಾಗಿ ಸುಧಾರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಹುಡುಕಾಟವು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ ಇಂಟರ್‌ನೆಟ್‌ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯ ಉಂಟುಮಾಡುತ್ತವೆ. ಇದು ಸೂಕ್ತವಲ್ಲ ಎಂದು ನಮಗೆ ಗೊತ್ತು ಎಂದು ಗೂಗಲ್‌ ಸ್ಪಷ್ಟನೆ ನೀಡಿದೆ.

ಗೂಗಲ್ ಇಂಡಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು, ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ' ಎಂದು ಹೇಳಿದೆ.

ಗೂಗಲ್‌ ಸೇರಿದಂತೆ ಸರ್ಚ್‌ ಎಂಜಿನ್‌ಗಳು ತಮ್ಮದೇ ಆದ ವಿಶಿಷ್ಟ ಆಲ್ಗೊರಿದಂ ಆಧಾರದಲ್ಲಿ ಕೆಲಸ ಮಾಡುತ್ತವೆ. ಬಳಕೆದಾರರು ಸಮರ್ಪಕವಾಗಿ ಬಳಸಿದರೆ ಅದು ಸರಿಯಾಗಿಯೇ ಇರುತ್ತದೆ. ಸೈಬರ್‌ ಕಿಡಿಗೇಡಿಗಳು ಆಗಾಗ ಗೂಗಲ್ ಆಲ್ಗೊರಿದಂನ ದೋಷಗಳನ್ನು ಬಳಸಿಕೊಂಡು ಈ ರೀತಿ ಅಸಂಬದ್ಧ ವಿಚಾರಗಳು ಮುನ್ನೆಲೆಗೆ ಬರುವಂತೆ ಮಾಡುತ್ತಾರೆ. ಅನಗತ್ಯ ವಿವಾದಗಳನ್ನು ಹುಟ್ಟುಹಾಕಿ ಮಜಾ ಪಡೆಯುವುದೇ ಅವರ ಉದ್ದೇಶವಾಗಿರುತ್ತದೆ.

ಈ ಆಭಾಸದ ಬಗ್ಗೆ ಗೂಗಲ್‌ ವಿರುದ್ಧ  ಕನ್ನಡಿಗರು ತೀವ್ರ ಆಕ್ರೋಶಗಳನ್ನು ಪ್ರಕಟಿಸಿ, ದೊಡ್ಡ ಲಕ್ಷಾಂತರ ಸಂಖ್ಯೆಯಲ್ಲಿ ರಿಪೋರ್ಟ್ ಮಾಡಿಕೊಳ್ಳಲಾರಂಭಿಸಿದ್ದರಿಂದ ಗೂಗಲ್ ಇಂಡಿಯಾ ತಕ್ಷಣ ಎಚ್ಚತ್ತುಕೊಂಡು ಕನ್ನಡವನ್ನು ಅವಹೇಳನ ಮಾಡುವಂತಹ ಶೋಧಗಳನ್ನು ತೆಗೆದುಹಾಕಿದೆ.

ರಾಜ್ಯ ಸರಕಾರ ಕೂಡ ಗೂಗಲ್ ವಿರುದ್ಧ ಈ ವಿಷಯದಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿತ್ತು.


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم