ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಭೂ ರಮೆಗೆ ಹಸಿರುಡಿಸಿದ ಮದ್ದಾನಯ್ಯರ ನಂದನವನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ಕೊಪ್ಪಳ ಜಿಲ್ಲೆಯ ಗಿಣಿಗೆರಾ ಎಂದರೆ ಕಾರ್ಖಾನೆಗಳ ತವರೂರು. ತಲೆ ಎತ್ತಿ ನೋಡಿದರೆ ಸುತ್ತಲೂ ಕಾಣುವುದು  ಆಗಸಕ್ಕೆ ಮುಖಮಾಡಿ ಕರಿ ಹೊಗೆ ಉಗುಳುವ ಚಿಮಣಿಗಳು.ಮುಖ ಒರೆಸಿದರೆ ಕರವಸ್ತ್ರ ಶ್ವೇತ ವರ್ಣದ ಕರವಸ್ತ್ರವನ್ನು ಗುರುತು ಹಿಡಿಯುವುದೇ ಕಷ್ಟವಾದೀತು. ಇಲ್ಲಿಂದ ಸ್ವಲ್ಪ ಒಳಹಾದಿಯಲ್ಲಿ ಸಾಗಿದರೆ ಹಿರೇಬಗನಾಳ ಗ್ರಾಮ. ಆ ಗ್ರಾಮದ ಹಿರಿಯ ಮುಂದಾಳು ರೈತ ಯಾರು ಎಂದು ಯಾರನ್ನೇ ಕೇಳಿದರೂ ಕೈ ತೋರಿಸುವುದು ಹಿರಿಯ ರೈತರಾದ ಶ್ರೀ ಮದ್ದಾನಯ್ಯ ಅವರನ್ನು.

ಆರು ಎಕರೆಯ ಅವರ ಕ್ಷೇತ್ರ ಅಕ್ಷರಶಃ ನಂದನವನ. ತೋಟಕ್ಕೆ ಕಾಲಿಟ್ಟರೆ ಕಣ್ಣೆದುರಿಗೆ ಊಹಿಸಲು ಅಸಾಧ್ಯವಾದ ಹಸಿರು ಪ್ರಪಂಚ. ಒಳಗೆ ಏನುಂಟು ಏನಿಲ್ಲ ಎಂಬ ಅಚ್ಚರಿಯೊಂದಿಗೆ ಅಲ್ಲಿರುವ ಬೆಳೆಗಳನ್ನು ಲೆಕ್ಕ ಹಾಕಿದರೆ ಸಂಖ್ಯೆ 30ನ್ನ ದಾಟುತ್ತದೆ. ಹೆಬ್ಬೇವು, ಶ್ರೀಗಂಧ, ಸಿಲ್ವರ್, ಮಹಾಗನಿ  ಮುಂತಾದ  ಅರಣ್ಯ ಮರಗಳಿಂದ ಹಿಡಿದು ಅಡಕೆ, ತೆಂಗು, ಎಲೆ ಬಳ್ಳಿ, ಮೆಣಸು, ಪೇರಲ, ಜಾಮೂನು, ಮಾವುಮ ನಿಂಬೆ, ಕರಿಬೇವು ಹೇಗೆ ಪಟ್ಟಿ ಬೆಳೆಯುತ್ತದೆ. ಸಾಗುವಾನಿ ಒಳಗೆ ಜೇನು ಪೆಟ್ಟಿಗೆಗಳ ಸುತ್ತ ಜೇನ ಝೇಂಕಾರ. ಬದುವಿನ ಸುತ್ತಲೂ ಫಲ ಬಿಡುವ ಹುಣಸೆ. ಪ್ರತಿಯೊಂದು ಗಿಡಗಳು ಫಲದಿಂದ ಮೈತುಂಬಿ ನಿಂತಿರುವುದನ್ನು ನೋಡುವುದೇ ನಯನಾನಂದ.

ನೂರಾರು ಕೋಳಿಗಳು ಮರಿಗಳೊಂದಿಗೆ ಹುಳುಹುಪ್ಪಟೆ ಹುಡುಕುತ್ತಾ ಮಣ್ಣು ಕೆದರುವುದನ್ನು ನೋಡುವುದೇ ಆನಂದ. ಹಾಲಿಂಡುವ ಹಸುಗಳು, ಅಂಬಾ ಎನ್ನುವ ಎಳೆಗರುಗಳು, ಎಂತಹ ಬಾರವನ್ನಾದರೂ ಎಳೆಯುವ ಎತ್ತುಗಳು ಕೃಷಿಕನ ಮನೆಗೆ ಶೋಬೆಯನ್ನು ತಂದಿವೆ. ತನ್ನ ಪಾಡಿಗೆ ತಾನಿರುವ ಕುರಿಯ ಹಿಂಡು ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಮಣ್ಣನ್ನೇ ನಂಬಿ ಬರುವ ಆದಾಯದಲ್ಲೇ ತೃಪ್ತಿಯಿಂದ ಜೇವನ ಸಾಗಿಸುತ್ತಿರುವ ನಿಜ ಅರ್ಥದಲ್ಲಿ ಮಣ್ಣಿನ ಮಗನಾಗಿರುವ ಮದ್ದಾನಯ್ಯನವರ ಮುಗ್ದ ಮನಸ್ಸಿದೆ. ಈ ಕೃಷಿ ರತ್ನವನ್ನು ಸಂಪರ್ಕಿಸಲು 9741425991 ಸಂಖ್ಯೆಗೆ ಕರೆಮಾಡಿ. 

-ಡಾ. ಪಿ. ಆರ್ ಬದರಿಪ್ರಸಾದ್

ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ)

ಕೃಷಿ ಮಹಾವಿದ್ಯಾಲಯ, ಗಂಗಾವತಿ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

ನವೀನ ಹಳೆಯದು