ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವಿಶೇಷ: ಅಮ್ಮ ಲಾಲಿ ಹಾಡಿನಲ್ಲಿ ಶ್ರುತಿಯ ನೆಲೆಯನೆಮಗೆ ಕಲಿಪಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಪ್ರೊ.ಪವನಣ್ಣ (ಪವನ್ ಕಿರಣ್‌ಕೆರೆ) ಅವರ ಅರ್ಥಗಾರಿಕೆ ಕೇಳುತ್ತ ಕುಳಿತಾಗ ಅವರಲ್ಲಿ ವಾತ್ಸಲ್ಯಮಯಿ ತಾಯಿ ಹೃದಯದ ಒಂದು ಆಪ್ತತೆ ಇದೆ ಅಂತ ಅನಿಸುವುದು.  ಅನಿಸುವುದೇನು!! ನಿಜ ಕೂಡ. ಬ್ರಹ್ಮ ಸೃಷ್ಟಿ ಮಾಡುವಾಗ ಇವರೊಳಗೆ ಒಂದು ಮಾತೃ ಹೃದಯವನ್ನು ಸೇರಿಸಿರಬೇಕು!!


ಭೀಮನ ಪಾತ್ರ ಮಾಡಿದರೆ ಒಬ್ಬಳು ಕುಂತಿ ಕಾಣಿಸುತ್ತಾಳೆ. ಪವನ ಕುಮಾರ ಹನುಮಂತನಾದಾಗ ಅಂಜನಾದೇವಿಯ ಧ್ವನಿ ಧ್ವನಿಸುತ್ತದೆ.  ಶುಕ್ರಾಚಾರ್ಯರಾದಾಗ ಇವರ ಆಪ್ತತೆಯ ಮಾತೃ ಸ್ವರಕ್ಕೆ ರಕ್ಕಸ ಪಡೆಯೇ ಮಕ್ಕಳಂತೆ ಸೈಲೆಂಟಾಗಿ ಪಾಠ ಕೇಳಬೇಕು!!  


ರಾಮನಾದರೆ ಒರಿಜಿನಲ್ ಕೌಸಲ್ಯಾ ತನಯ. ಇವರ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಸಾಹಿತ್ಯ ಮಾತ್ರ ಅಲ್ಲ ಸ್ವರದಲ್ಲೂ ಶೃಂಗೇರಿ ಶಾರದಮ್ಮ ಇರ್ತಾಳೆ!


ಇಂತಹ ಮದರ್ ಮೈಂಡ್ ಪವನಣ್ಣ, ತಾಯಿಯ ಬಗ್ಗೆಯೇ ಬರೆದ ಎರಡು ಸುಂದರ ಹಾಡುಗಳನ್ನು ನೀವು ಓದುತ್ತಾ ಕೇಳಬೇಕು.  ಕೇಳಿದ ಮೇಲೆ ಮತ್ತೊಮ್ಮೆ ಓದಬೇಕು. ಪವನಣ್ಣರು ರಚಿಸಿದ ಆ ಎರಡು ಗೀತೆಗಳನ್ನು ಓದಿ, ಕೇಳಿ ಬರೋಣ ಬನ್ನಿ.

*

ಹೊತ್ತು ಬಸಿರೊಳಗೆಮ್ಮ ಹೆತ್ತು


ಗಾಯನ ಮತ್ತು ರಾಗ ಸಂಯೋಜನೆ:  ಶ್ರೀಮತಿ ಅಮೃತ ಅಡಿಗ 

ಪ್ರಸಿದ್ದ ಯಕ್ಷಗಾನ ಭಾಗವತರು.


ಸಾಹಿತ್ಯ - ಪ್ರೊ | ಪವನ್ ಕಿರಣಕೆರೆ


ಹೊತ್ತು ಬಸಿರೊಳಗೆಮ್ಮ 

ಹೆತ್ತು ಜೀವವ ನೀಡಿ | 

ಮುತ್ತೀವ ದೇವತೆಯು ||

ಬತ್ತಿಯಂದದೊಳುರಿದು ಬೆಳಕೀವ ತ್ಯಾಗದ | 

ಮೊತ್ತವಾಗಿಹಳ್ ಮಾತೆಯು ||1||


ಮೊದಲ ಹೆಜ್ಜೆಯನಿರಿಸಿ 

ತೊದಲೆ ಮಾತನು ಕಲಿಸಿ | ಬದುಕನೀವಳು ಕಂದಗೆ ||

ಪದಕೆ ನಿಲುಕದ ಕಾವ್ಯ ತುದಿಗಾಣದದ್ಭುತ | 

ಸುಧೆಯು ನಮ್ಮಯ ಬಾಳ್ವೆಗೆ ||2||


ಕೇಳಲು ಅಮ್ಮನ ಒಂದು ಕಿರು ಬೆರಳ ಹಿಡಿದು ನಡೆಯುತ್ತಾ ಕೇಳಬೇಕು!!


ಅಮ್ಮನ ಕಿರುಬೆರಳ ಯೂಟೂಬ್ ಲಿಂಕ್ ಇಲ್ಲಿದೆ!! 





**


ಅಮ್ಮ - ಬ್ರಹ್ಮ


ಗಾಯನ ಮತ್ತು ರಾಗ ಸಂಯೋಜನೆ:   ಶ್ರೀಮತಿ ಕಾವ್ಯಶ್ರೀ ಅಜೇರು. 

ಪ್ರಸಿದ್ದ ಯಕ್ಷಗಾನ ಭಾಗವತರು


ಸಾಹಿತ್ಯ - ಪ್ರೊ | ಪವನ್ ಕಿರಣಕೆರೆ


ಬ್ರಹ್ಮನೆಂದು ಕರೆದರೆಲ್ಲ 

ತಿಳಿಯದಾದ ಜ್ಞಾನಕೆ

ಬ್ರಹ್ಮಗಿಂತ ಮಿಗಿಲು ಜಗದಿ

ಅಮ್ಮನೆಂಬ ಹೊತ್ತಗೆ ||1||


ಹೆಜ್ಜೆಯಿಡಲು ಕಲಿಸುತಾತ್ಮ

ಬಲಕೆ ಬಲವನೀವಳು

ನುಡಿಯ ಕಲಿಸುತರಿವಿನೆಡೆಗೆ

ಸಾಗಲನುವ ಗೈವಳು ||2||


ಬಾನ ಚಂದ್ರನಂತೆ ಬಾಳು

ಬೆಳಗಲವನ ತೋರ್ವಳು

ಲಾಲಿ ಹಾಡಿನಲ್ಲಿ ಶ್ರುತಿಯ

ನೆಲೆಯನೆಮಗೆ ಕಲಿಪಳು ||3||


ಲೋಕವರಿವ ಜ್ಞಾನ ಮೂಲ

ಮಗುವಿಗಮ್ಮನಲ್ಲವೆ

ಜಗವೆ ಮಗುವು ಮಗುವೆ ಜಗವು

ಅಮ್ಮ ಬ್ರಹ್ಮನಲ್ಲವೆ ||4||


ಅಮ್ಮನ ಇನ್ನೊಂದು ಕಿರು ಬೆರಳ ಯೂಟೂಬ್ ಲಿಂಕ್ ಇಲ್ಲಿದೆ!! 




-ಅರವಿಂದ ಸಿಗದಾಳ್, ಮೇಲುಕೊಪ್ಪ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

أحدث أقدم