ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನಮ್ಮ ಜೀವನದ ಉತ್ತಮ ಸ್ನೇಹಿತರನ್ನು ನೆನೆಯೋಣ... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ಅಮೂಲ್ಯವಾದುದು. ನಮ್ಮ ಜೀವನದಲ್ಲಾಗುವ ಪ್ರತಿಯೊಂದು ಬದಲಾವಣೆಗಳಿಗೂ ಸಾಕ್ಷಿಯಾಗಬಲ್ಲ ಒಬ್ಬನೇ ಒಬ್ಬ ವ್ಯಕ್ತಿ ಎಂದರೆ ನಮ್ಮ ಆತ್ಮೀಯ ಗೆಳೆಯ/ಗೆಳತಿ. ನಮ್ಮ ಕುಟುಂಬದ ಸದಸ್ಯರಿಗೂ ತಿಳಿದಿರದ ನಮ್ಮ ಅದೆಷ್ಟೋ ರಹಸ್ಯಗಳಿಗೆ ಭದ್ರ ಬಾಗಿಲು ಸ್ನೇಹಿತರು. ಸುಖ ದುಃಖ, ನೋವು ನಲಿವುಗಳೊಂದಿಗೆ ಸಾಗುವ ನಮ್ಮ ಜೀವನದಲ್ಲಿ ನಮ್ಮ ಬೆನ್ನೆಲುಬಾಗಿ ನಿಲ್ಲುವವರೇ ನಮ್ಮ ಆತ್ಮೀಯ ಸ್ನೇಹಿತರು.  

ಇಂದು ರಾಷ್ಟ್ರೀಯ ಉತ್ತಮ ಸ್ನೇಹಿತರ ದಿನ. ನಮ್ಮ ಜೀವನದ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ನಮ್ಮೊಂದಿಗಿದ್ದು, ನಮ್ಮ ಸುಖ ದುಃಖಗಳಲ್ಲಿ ಪಾಲು ಪಡೆಯುವ ನಮ್ಮ ನಿಜವಾದ ಸ್ನೇಹಿತರೊಂದಿಗೆ ಸಂಭ್ರಮ ಪಡುವ ಈ ದಿನವೇ ಉತ್ತಮ ಸ್ನೇಹಿತರ ದಿನ.  

ನಮ್ಮ ಭಾವನೆಗಳನ್ನು ಹಂಚಿಕೊಂಡು, ಜೀವನದುದ್ದಕ್ಕೂ ನಮ್ಮ ಯಶಸ್ಸನ್ನೇ ಬಯಸುವವರು ನಿಜವಾದ ಸ್ನೇಹಿತರು. ಮಾತುಗಳಿಲ್ಲದ ಮೌನವನ್ನೇ ಅಥ೯ಮಾಡಿಕೊಂಡು ನಮ್ಮ ಮನಸ್ಥಿತಿಯನ್ನು ಎತ್ತಿ ಹಿಡಿಯುವ ಸ್ನೇಹಿತರು ನಮ್ಮ ಬದುಕಿನಲ್ಲಿ ಅಮೂಲ್ಯ ರತ್ನ. ನಾವು ಸಾಗುವ ಜೀವನದ ದಾರಿ ಸರಿಯೋ, ತಪ್ಪೋ ಎಂದು ತಿಳಿಸಲು ಕುಟುಂಬದವರಿಗಿಂತ ಸ್ನೇಹಿತರೇ ಹೆಚ್ಚು ಸೂಕ್ತ. 1935ರಲ್ಲಿ ಆರಂಭವಾದ ರಾಷ್ಟ್ರೀಯ ಬೆಸ್ಟ್ ಫ್ರೆಂಡ್ ಡೇ ಆಚರಣೆ ಇಂದಿನವರೆಗೂ ವಿಕಾಸಗೊಂಡು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಿದೆ.

ಸ್ನೇಹ ಎಂಬುದು ಒಂದು ಮರದಂತೆ. ಅದು ಎಷ್ಟೇ ಎತ್ತರವಾಗಿದ್ದರೂ ಅದರ ಬೇರುಗಳು ಎಷ್ಟು ಆಳವಾಗಿದೆ ಎಂಬುದು ಮುಖ್ಯ. ಅಂದರೆ, ಸ್ನೇಹ ಎಷ್ಟೇ ದಿನಗಳಲದ್ದಾದರೂ, ನಂಬಿಕೆ ಎಂಬ ಬೇರು ಎಷ್ಟು ಆಳವಾಗಿದೆ ಎಂಬುದು ಮುಖ್ಯ.

ಸ್ನೇಹ ಎಂಬುದು ಶಾಲೆಯಲ್ಲಿ ಕಲಿಯುವ ವಿಷಯವಲ್ಲ. ಮನಸ್ಸಿನ ಭಾವನೆಗಳಿಂದ ಕಲಿಯುವ ವಿಷಯ. ನಮ್ಮ ಸಮಸ್ಯೆಗಳನ್ನು ಪರಿಹರಿಸದಿದ್ದರೂ, ನಮ್ಮ ಬೆನ್ನೆಲುಬಾಗಿ ನಿಲ್ಲುವವರು ಸ್ನೇಹಿತರು. ಬೆಲೆ ಕಟ್ಟಲಾಗದ, ಶ್ರೇಷ್ಠ ಸಂಬಂಧವೇ ಸ್ನೇಹ.

ಎಲ್ಲಾ ಸ್ನೇಹಿತರಿಗೂ ರಾಷ್ಟ್ರೀಯ ಉತ್ತಮ ಸ್ನೇಹಿತರ ದಿನದ ಶುಭಾಶಯಗಳು. 



-ಸರೋಜ ಪಿ ಜೆ ದೋಳ್ಪಾಡಿ

ದ್ವಿತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಪದವಿ ಕಾಲೇಜು ಪುತ್ತೂರು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



Post a Comment

ನವೀನ ಹಳೆಯದು