ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನಿತ್ಯ ಸತ್ಯ: ಸುಖದ ಬಾಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಕಿರು   ಸತ್ಯ..72

ಸುಖದ ಬಾಳು

*****

ಸಾಕು ಎನಲು

ಸಿರಿತನವೇ

ಬೇಕು ಎನಲು  

ಬಡತನವೇ 

ಸಾಕ ಬೇಕು 

ಸಂತೃಪ್ತಿಯ

ಸುಖದ ಬಾಳಿಗೆ

******

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ..74

ನಿಷ್ಪ್ರಯೋಜಕ

*****

ಪುಸ್ತಕದಲಿ 

ಇರುವ ವಿದ್ಯೆ 

ಪರರ ಕೈಲಿ 

ಇರುವ ಧನವು 

ಕಷ್ಟ ಕಾಲ

ಕೊದಗಿ ಬರಲು

ಸಾಧ್ಯವಾಗದು 

****

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ..75

ಸ್ವಾತಂತ್ರ್ಯ 

***

ಆಪತ್ತಿಗೆ 

ಪಡೆದುಕೊಂಡ 

ದಾನ ಯಾವು 

ದಾದರಿರಲಿ 

ಬದಲಿಗಷ್ಟು 

ಸ್ವಾತಂತ್ರ್ಯವ 

ಕೊಡಲು ಬೇಕಿದೆ. 

*****

ಸಹಸ್ರಬುಧ್ಯೆ ಮುಂಡಾಜೆ


ಕಿರು  ಸತ್ಯ..76

ಮುಖವಾಡ

*****

ಮುಖವಾಡವ 

ಧರಿಸಿಕೊಂಡು 

ಬದುಕು ಕಟ್ಟಿ

ಕೂತುಕೊಂಡೆ 

ಸಹಜ ಬದುಕು 

ಮನುಜ ನಿನಗೆ 

ಸಾಧ್ಯವಾಗದು. 

*****

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ..77

ವೆಂಟಿಲೇಟರ್ 

****

ಏರು ಮಾರ್ಗ 

ದಲ್ಲಿ ರಥವ 

ತಳ್ಳಿಕೊಂಡು 

ಹೋಗುವಂತೆ 

ಆತ್ಮರಥದ

ಕಷ್ಟಕಿಹುದು 

ವೆಂಟಿಲೇಟರು

*****

ಸಹಸ್ರಬುಧ್ಯೆ ಮುಂಡಾಜೆ


ಕಿರು  ಸತ್ಯ..78

ಪ್ರಯಾಣ

***

ಬದುಕೆಂಬ

ರೈಲಿನಲ್ಲಿ

ಕುಳ್ಳಿರಿಸಿದ

ಮಹಾದೇವ 

ಕರೆದುಕೊಂಡು 

ಹೋಗುವನವ

ಕಾಯಬೇಕಿದೆ.

*****

ಸಹಸ್ರಬುಧ್ಯೆ ಮುಂಡಾಜೆ


ಕಿರು  ಸತ್ಯ.. 79

ಸ್ವಭಾವ 

****

ಬ್ರಹ್ಮ ಕ್ಷಾತ್ರ 

ವೈಶ್ಯ ಶೂದ್ರ 

ಜಾತಿಯೆಂದು 

ತಿಳಿಯಬೇಡ 

ಮನುಜನೊಳಿತಿ

ಗೆಂದು ದೇವ

ಕೊಟ್ಟ ವರವಿದು.

*****

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ..81

ಧರ್ಮರಾಯ 

****

ಶಿಷ್ಟನಾಗಿ

ಧರ್ಮರಾಯ 

ಸಕಲ ಕಷ್ಟ 

ಅನುಭವಿಸುತ 

ಬಂಧು ಬಳಗ

ಕಳೆದು ಕೊಂಡು 

ರಾಜ್ಯವಾಳಿದ 

*****

ಸಹಸ್ರಬುಧ್ಯೆ ಮುಂಡಾಜೆ


ಕಿರು   ಸತ್ಯ..82

ಆತ್ಮೋನ್ನತಿ

*****

ಬುದ್ಧಿಯಿಂದ 

ಮನಸ್ಸು ತಿದ್ದಿ 

ಪಂಚೇಂದ್ರಿಯ 

ವರ್ತಿಸಿದರೆ 

ಪರಮ ಗತಿಯ

ಪಡೆಯದಿರದು 

ಮನುಜನಾತ್ಮವು 

*****

ಸಹಸ್ರಬುಧ್ಯೆ ಮುಂಡಾಜೆ


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು