ಆಲಿಸಿ: ಭಕ್ತಿಗೀತೆ- ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ
ರಚನೆ: ಪುರಂದರ ದಾಸರು
ಗಾಯನ: ಶ್ರೀ ವಿದ್ಯಾಭೂಷಣ
ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ
ಅಂಜಿಕಿನ್ಯಾತಕಯ್ಯಾ ||ಅಂಜಿಕಿನ್ಯಾತಕಯ್ಯಾ||
ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ||2||
||ಅಂಜಿಕಿನ್ಯಾತಕಯ್ಯಾ||
ಕನಸ್ಸಿಲಿ ಮನಸ್ಸಿಲಿ ಕಳವಳವಾದರೆ||2||
ಹನುಮನ ನೆನೆದರೆ||2||
ಹಾರಿ ಹೋಗದೆ ಪಾಪ
||ಅಂಜಿಕಿನ್ಯಾತಕಯ್ಯಾ||
ರೋಮ ರೋಮಕೆ ಕೋಟಿಲಿಂಗ ಉದ್ಧರಿಸಿದ||2||
ಭೀಮನ ನೆನೆದರೆ||3||
ಬಿಟ್ಟು ಹೋಗದೆ ಭೀತಿ ||ಅಂಜಿಕಿನ್ಯಾತಕಯ್ಯಾ||
ಪುರಂದರವಿಠ್ಠಲನ ಪೂಜೆಯ ಮಾಡುವ||3||
ಗುರಮಧ್ವರಾಯರ||3||
ಸ್ಮರಣೆ ಮಾಡಿದ ಮೇಲೆ
||ಅಂಜಿಕಿನ್ಯಾತಕಯ್ಯಾ||
ಕಾಮೆಂಟ್ ಪೋಸ್ಟ್ ಮಾಡಿ