ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಲಾಕ್‌ಡೌನ್ ಸಂಕಷ್ಟದಲ್ಲಿ ಫೋಟೋಗ್ರಾಫರ್‌ಗಳು: ವಿಶೇಷ ಪ್ಯಾಕೇಜ್‌ಗಾಗಿ ಶಾಸಕರಿಗೆ ಮನವಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ಬೆಳ್ತಂಗಡಿ: ದೇಶವೇ ಲಾಕ್‌ಡೌನ್ ಆಗಿ ಮನೆಯಲ್ಲಿಯೇ ಇರುವ ಜನರಿಗೆ ಹೊರಬರಲು ಹಿಂದೇಟು ಹಾಕುತ್ತಿದ್ದು, ಇಂಥ ಸಂದರ್ಭದಲ್ಲಿ ಮದುವೆ, ಮುಂಜಿ, ಶುಭಕಾರ್ಯಗಳು ನಡೆಸುವುದು ಅಸಾಧ್ಯ. ಮಾರ್ಚ್​ನಿಂದ ಜೂನ್​ವರೆಗೆ ಫೋಟೋಗ್ರಾಫರ್​ಗಳಿಗೆ ಕೈ ತುಂಬ ಕೆಲಸ ಇರುತ್ತಿತ್ತು. ವರ್ಷಪೂರ್ತಿ ಕೆಲಸವಿರದಿದ್ದರೂ ಈ ನಾಲ್ಕು ತಿಂಗಳಿನಲ್ಲಿ ದುಡಿದು ವರ್ಷಪೂರ್ತಿ ಜೀವನ ನಡೆಸುತ್ತಿದ್ದರು.

ಆದರೆ ಇದೀಗ ಕೊರನೊ ವೈರಸ್ ಭೀತಿಯಿಂದ ದೇಶವೇ ಲಾಕ್ ಡೌನ್ ತಿಂಗಳು ಕಳೆದಿದ್ದು, ಯಾರೂ ಗುಂಪು ಸೇರುವಂತಿಲ್ಲ, ಮದುವೆ, ಶುಭಕಾರ್ಯ ಮಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾರಂಭಗಳಲ್ಲಿ ಫೋಟೋಗ್ರಫಿ, ವೀಡಿಯೋಗ್ರಫಿ ಮಾಡಿ ಜೀವನ ನಡೆಸುತ್ತಿದ್ದ ರಾಜ್ಯದ ಛಾಯಾಚಿತ್ರಗ್ರಾಹಕರು ಇದೀಗ ಸಂಕಷ್ಟದಲ್ಲಿದ್ದಾರೆ.

ಈ ನಿಟ್ಟಿನಲ್ಲಿ ಉಭಯ ಜಿಲ್ಲೆಗಳ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನ ಬೆಳ್ತಂಗಡಿ ವಲಯದ ಸದಸ್ಯರು ಛಾಯಾಗ್ರಾಹಕರಿಗೂ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಶಾಸಕ ಹರೀಶ್ ಪೂಂಜ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.  

ತಾಲೂಕಿನಾದ್ಯಂತ ಮಧ್ಯಮ ವರ್ಗದ ಅನೇಕ ಛಾಯಾಗ್ರಾಹಕರಿದ್ದು, ಸಂಸಾರದ ನಿರ್ವಹಣೆ, ಮನೆ ಸಾಲ, ಕ್ಯಾಮರಾ ಪರಿಕರಗಳ ನಿರ್ವಹಣೆ ಸೇರಿದಂತೆ ಬ್ಯಾಂಕ್ ಸಾಲ ಸಾಲ ಕಟ್ಟಲು ಆಗದೆ ಕಷ್ಟಪಡುತ್ತಿದ್ದು, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಂಡವಾಳ ಹೂಡಿ ಲಾಕ್‌ಡೌನ್‌ನಿಂದಾಗಿ ಸಾಲ ಮರು ಪಾವತಿಸಲಾಗದ ತೀರ ಸಂಕಷ್ಟದಲ್ಲಿದ್ದೇವೆ. ಆದುದ್ದರಿಂದ ತಾವು ನಮ್ಮ ಸಂಕಷ್ಟವನ್ನು ಮನಗಂಡು ಸರಕಾರದಿಂದ ನಮ್ಮ ಛಾಯಾಗ್ರಹಕರಿಗೂ ವಿಶೇಷ ಪ್ಯಾಕೇಜ್ ದೊರಕಿಸಿ ವಿನಂತಿಸಿಕೊಂಡಿದ್ದಾರೆ.

ಛಾಯಾಗ್ರಾಹಕರ ಮನವಿಗೆ ಸ್ಪಂದಿಸಿರುವ ಶಾಸಕರು ಮುಂದಿನ ಹಂತಹ ಪ್ಯಾಕೇಜ್ ಅಲ್ಲಿ ಪರಿಹಾರದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು