ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪ್ರವಾಸ: ಅಂಬುಧಿಯ ಮಧ್ಯದೊಳು ಪದ್ಮಾವತಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಪಶ್ಚಿಮ ಘಟ್ಟದ ಸಮೃದ್ಧ ಹಸಿರ ಮಡಿಲಲಿ ಗದ್ದೆಗಳ ನಡುವೆ ವಿಶಾಲ ಕೆರೆ. ಆ ಜಲರಾಶಿಯ ಮಧ್ಯದಲ್ಲಿ ಕಂಗೊಳಿಸುವುದೇ ಕೆರೆ ಬಸದಿ ಎಂದು ಪ್ರಖ್ಯಾತವಾಗಿರುವ ಪದ್ಮಾವತಿ ದೇವಿಯ ದೇವಾಲಯ. ವರಂಗದ ಕೆರೆಯಲ್ಲಿ ಕಮಲದ ಶೋಭೆ, ನಡುವಲ್ಲಿ ದೋಣಿಯ ಪಯಣ, ಶಾಂತ ವಾತಾವರಣ ಅದೇನೋ ಹೊಸ ತೆರನಾದ ಅನುಭವ ನೀಡುತ್ತದೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನಲ್ಲಿ ಈ ವರಂಗ ಜೈನ ದೇವಾಲಯವಿದೆ. ಇದು ಪ್ರಸಿದ್ಧ ಪದ್ಮಾವತಿ ದೇವಿಯ ಆರಾಧನಾ ಸ್ಥಳವಾಗಿದೆ. ಈ ಕೆರೆಬಸದಿಯಿಂದ ಆ ಪುಟ್ಟ ಹಳ್ಳಿಯೇ ಪ್ರವಾಸ ತಾಣವಾಗಿ ಪ್ರಸಿದ್ಧವಾಗಿದೆ. ವರಂಗದ ಈ ಬಸದಿಯಲ್ಲಿ ಜೈನ ಧರ್ಮ ತೀರ್ಥಂಕರರಾದ ಪಾರ್ಶ್ವನಾಥ, ನೇಮಿನಾಥ, ಶಾಂತಿನಾಥ ಮತ್ತು ಅನಂತನಾಥರ ವಿಗ್ರಹವನ್ನು ಕರಿಶಿಲೆಗಳಲ್ಲಿ ಕೆತ್ತಲಾಗಿದೆ. ಅದರ ಎರಡೂ ಬದಿಗಳಲ್ಲಿ ಯಕ್ಷ ಯಕ್ಷಿಯರ ಪ್ರತಿಮೆಗಳಿವೆ.  

ವರಂಗ ಬಸದಿಗಳಲ್ಲಿ ಆಕರ್ಷಣೀಯ ಕೇಂದ್ರವೇ ಈ ಕೆರೆ ಬಸದಿ. ಆಥವಾ ಜಲಮಂದಿರ. ಸುತ್ತಲೂ ನೀರಿನಿಂದ ಆವೃತವಾದ 14ಎಕರೆ ವಿಸ್ತಾರದ ಕೆರೆಯ ಮಧ್ಯಭಾಗದಲ್ಲಿ ಪದ್ಮಾವತಿ ತಾಯಿಯು ಭಕ್ತರನ್ನು ಬರಮಾಡಿಕೊಳ್ಳುತ್ತಿದ್ದಾಳೆ. ಕೆಡು ಮತ್ತು ಚರ್ಮರೋಗಗಳಿಗೆ ಇಲ್ಲಿ ಹರಕೆಯನ್ನು ಹೇಳಿದರೆ ಸಮಸ್ಯೆಗಳು ನಿವಾರಣೆಯಾದ ಸಾಕಷ್ಟು ಉದಾಹರಣೆಗಳಿವೆ. ಭಕ್ತರ ಇಷ್ಟಾರ್ಥವನ್ನು ಪೂರೈಸುವ ಪದ್ಮಾವತಿ ಅಮ್ಮನಿಗೆ ಬೆಳ್ತಿಗೆ ಅಕ್ಕಿ ಮತ್ತು ಹುರುಳಿಯನ್ನು ಹರಕೆಯ ರೂಪದಲ್ಲಿ ಜನರು ಸಮರ್ಪಿಸುತ್ತಾರೆ. ಕೆರೆಯಲ್ಲಿರುವ ಮೀನುಗಳಿಗೆ ಕೂಡ ಧಾನ್ಯಗಳನ್ನು ಅರ್ಪಿಸಲಾಗುತ್ತದೆ.

ಪ್ರತೀ ವರ್ಷ ಫೆಬ್ರವರಿ ತಿಂಗಳ ಹಸ್ತ ನಕ್ಷತ್ರದಲ್ಲಿ ಇಲ್ಲಿ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ದೇಶದಲ್ಲಿ ಮಧ್ಯಪ್ರದೇಶ ಬಿಟ್ಟರೆ ಇಂತಹ ಎರಡನೇ ಕೆರೆ ಬಸದಿ ಇರುವುದು ಕರ್ನಾಟಕದ ವರಂಗದಲ್ಲಿ ಮಾತ್ರ. ಇಲ್ಲಿನ ಸುಮಾರು  4-5ಕಿ.ಮೀ ದೂರದಲ್ಲಿ ತೀರ್ಥಕಲ್ಲು ಎಂಬ ನೀರಿನ ತೊರೆಯನ್ನು ವೀಕ್ಷಿಸಬಹುದಾಗಿದೆ. 

ಹಸಿರ ತಪ್ಪಲಿನ ಮಧ್ಯೆ ಜಲಾಶಯದ ನಡುವೆ ಕಂಗೊಳಿಸುವ ಈ ಬಸದಿಗೆ ನೋಡುಗರು ಒಮ್ಮೆ ಭೇಟಿ ನೀಡಲೇಬೇಕು ಮತ್ತು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲೇಬೇಕು.

-ಅರ್ಪಿತಾ ಕುಂದರ್

ಉಪಯುಕ್ತ ನ್ಯೂಸ್)

Post a Comment

ನವೀನ ಹಳೆಯದು