ಕೊರೋನಾ ಬಂದಾಗಿನಿಂದಲೂ ಮನೆಯ ಒಳಾಂಗಣವೇ ಎಲ್ಲರ ಜಗತ್ತಾಗಿದೆ. ಲಾಕ್ಡೌನ್ ಮಾಡಿದಾಗಿನಿಂದಲೂ ಜನ ನೀರಸ ಭಾವದಲ್ಲಿ, ಕೆಲಸದ ಟೆನ್ಶನ್ ನಲ್ಲಿ ದಿನ ದೂಡುತ್ತಿದ್ದಾರೆ. ಯಾವಾಗ ಹೊರ ಪ್ರಪಂಚ ನೋಡುತ್ತೇವೆಯೋ ಎಂಬ ಆಸೆ ಬಹುಶಃ ಎಲ್ಲರಲ್ಲೂ ಇದೆ.
ಆದರೆ ಮಹಿಳೆಯರದ್ದು ಮಾತ್ರ ಸ್ವಲ್ಪ ಭಿನ್ನ ಮನಸ್ಸು. ಹಲವರು ಕೆಲಸದ ಧಾವಂತದಲ್ಲಿ, ದೈವಭಕ್ತರು ದೇವಸ್ಥಾನಕ್ಕೆ ಹೋಗುವ ಅವಸರದಲ್ಲಿ , ಇನ್ನೂ ಕೆಲವರು ಸಣ್ಣ ಮಟ್ಟಿನ ಪಿಕ್ನಿಕ್ ಗೆ ಹೀಗೆ ಎಲ್ಲರ ತಲೆಯಲ್ಲಿ ಬಸ್ಸು ಪ್ರಾರಂಭ ಆದ ನಂತರ ಒಂದೊಂದು ಬಗೆಯ ಪ್ಲಾನ್ ಗಳು ಇರಬಹುದು.
ಆದರೆ ಸದಾ ತಮ್ಮ ಬ್ಯೂಟಿ ಕೇರ್ ಬಗ್ಗೆಯೇ ತೀವ್ರವಾಗಿ ಯೋಚಿಸುತ್ತಾ ಅದರಲ್ಲೇ ಬದುಕು ಅಡಗಿದೆ ಎಂಬುವಷ್ಟರ ಮಟ್ಟಿಗೆ ಯೋಚಿಸೋ ಹುಡುಗೀರು, ಮಹಿಳೆಯರು ಇರ್ತಾರಲ್ಲವೇ. ಅವರು ಅನ್ಲಾಕ್ ನ ನಂತರ ಮೊದಲು ಮಾಡುವ ಕೆಲಸ ಬ್ಯೂಟಿ ಪಾರ್ಲರ್ ನ ದರ್ಶನ. ಇನ್ನು ಕೆಲವು ವಿಭಿನ್ನ ವರ್ತನೆಯ ಹುಡುಗೀರು ಇರುತ್ತಾರೆ. ಯಾವಾಗ ಐಸ್ ಕ್ರೀಂ ತಿನ್ನುತ್ತೇವೆಯೋ ಎಂಬ ಚಡಪಡಿಕೆಯ ಭಾವದವರು. ಮತ್ತೂ ಕೆಲವು ಪ್ರೇಮಿಗಳು ಪರಸ್ಪರ ಭೇಟಿಗಾಗಿ ಕಾಯುತ್ತಿರಬಹುದು. ಕೆಲವು ಸಣ್ಣ ಸಣ್ಣ ವಿಚಾರಗಳು ತುಟಿಯಂಚಲ್ಲಿ ನಗು ತರಿಸುತ್ತಾದರೂ ವಾಸ್ತವ ತಾನೇ...?
ಅದ್ಯಾವುದೇ ಬಗೆಯ ಗೋಜಿನ ಬಗ್ಗೆ ತಲೆಕೆಡಿಸಿಕೊಳ್ಳದವರು ಮಾತ್ರ ತಾವು ಮುಗಿಸಬೇಕಾದ ಕೆಲಸದ ಬಗ್ಗೆಯೇ ಯೋಚಿಸುತ್ತಿರುತ್ತಾರೆ.
ಹೀಗೆ ದೇಶ ಮತ್ತೆ ಮೊದಲಿನಂತೆ ಯಾವಾಗ ಆಗುತ್ತದೋ ಬಲ್ಲವರಾರು. ಆದರೆ ಬಿಡುಗಡೆಯಲ್ಲಿ ಮೈಮರೆಯದೆ ಜಾಗೃತೆ ವಹಿಸುವುದು ಮಾತ್ರ ನಮ್ಮ ಕರ್ತವ್ಯ ಎಂಬುವುದನ್ನು ಮರೆಯದಿರೋಣ.
-ಅರ್ಪಿತಾ ಕುಂದರ್
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق