ಗಾಳಿ, ನೀರು, ಬೆಟ್ಟ-ಗುಡ್ಡ, ಕಾಡು-ನಾಡು, ಸಕಲ ಜೀವಿಗಳನ್ನೊಳಗೊಂಡ ಸುಂದರ ಸೃಷ್ಟಿಯೇ ಪರಿಸರ. ಮನುಷ್ಯನ ತಿಳಿಗೇಡಿತನದಿಂದ ಪ್ರಕೃತಿ ಮಾತೆಯ ಮಡಿಲು ದಿನದಿಂದ ದಿನಕ್ಕೆ ಬರಿದಾಗುತ್ತಿದೆ.
ಪ್ರಕೃತಿಯೆಡೆಗೆ ನಾವು ನಮ್ಮ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿದ್ದೇವೆ. ನಮ್ಮ ಮತ್ತು ಪ್ರಕೃತಿಯ ನಡುವಿನ ಸಂಬಂಧ ತಾಯಿ- ಮಗುವಿನ ಸಂಬಂಧದಷ್ಟೇ ಪವಿತ್ರವಾದುದು. ಕೇಳದೆಯೇ ಮಗುವಿಗೆ ಬೇಕಾದ ಎಲ್ಲವನ್ನೂ ಕೊಡುವ ತಾಯಿಯಂತಿರುವ ಪರಿಸರವನ್ನು ಮನುಷ್ಯ ಕುರುಡಾಗಿ ನಾಶ ಮಾಡುತ್ತಿದ್ದಾನೆ. ತಾನೂ ಇತರ ಜೀವಿಗಳಂತೆ ಎಂಬುದನ್ನು ಮರೆತು, ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನು ರಕ್ಷಿಸಿ ಉಳಿಸಬೇಕಾದ ಮನುಷ್ಯ ಅತಿಯಾಸೆ ಬಲಿಯಾಗಿ ಪರಿಸರ ನಾಶಕ್ಕೆ ಮುಂದಾಗಿರೋದು ದುರದೃಷ್ಟಕರ ಸಂಗತಿ
ಇದಕ್ಕೆಲ್ಲಾ ಸೇಡು ಎಂಬಂತೆ ಪ್ರಕೃತಿ ಕೊರೊನಾ ಎಂಬ ಸಾಂಕ್ರಾಮಿಕವನ್ನು ಕಳುಹಿಸಿದೆ ಎಂಬಂತೆ ಭಾಸವಾಗುತ್ತಿದೆ. ಮುಂದಿನ ಪೀಳಿಗೆ ದುಡ್ಡು ಕೊಟ್ಟು ಆಮ್ಲಜನಕ ಖರೀದಿಸುವಂತಹ ಸ್ಥಿತಿ ಬರಬಹುದು. ಅದಕ್ಕಾಗಿ ಗಿಡ ನೆಟ್ಟು ಬೆಳೆಸಿ ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಆ ಪರಿಸ್ಥಿತಿ ಬರಲು ಬಹುಕಾಲ ಹಿಡಿಯಲಿಲ್ಲ. ಇನ್ನಾದರೂ ಮನುಜ ಅರಣ್ಯ ನಾಶ ಮಾಡಿದರೆ ಯಮಪಾಶ ತಪ್ಪಿದ್ದಲ್ಲಾ ಎಂಬ ಸತ್ಯ ಅರಿಯಬೇಕಾಗಿದೆ.
ಪ್ರಕೃತಿ ರಕ್ಷಣೆ ಮಾಡಲಿ ಎಂದು ಇತರರೆಡೆಗೆ ಬೆಟ್ಟು ಮಾಡುವ ಮೊದಲು ನಾವೇ ಈ ಒಂದು ಕ್ರಾಂತಿಗೆ ಮುನ್ನುಡಿ ಬರೆಯೋಣ. ಇದಕ್ಕಾಗಿ ನಮ್ಮ ಜಲಮೂಲಗಳನ್ನು ಸಂರಕ್ಷಿಸಬೇಕು. ಗಿಡ ನೆಡುವ ಮೂಲಕ ಶುದ್ಧ ಗಾಳಿ ದೊರೆಯುವ ಪರಿಸರವನ್ನು ನಾವು ನಿರ್ಮಾಣ ಮಾಡಿಕೊಳ್ಳಬೇಕು. ಪ್ರಕೃತಿ ಸ್ನೇಹಿ ವಸ್ತುಗಳನ್ನು ಆದಷ್ಟು ಬಳಸಬೇಕು. ವಿನಾಶಕಾರಿ ಪ್ಲಾಸ್ಟಿಕ್ ಅನ್ನು ಆದಷ್ಟು ದೂರವಿಡಬೇಕು. ನಮ್ಮ ಮನೆಯ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ, ಮಳೆನೀರು ಕೊಯ್ಲು ಮಾಡುವ, ಮನೆಮುಂದೆ ಅಥವಾ ಟೆರೇಸ್ ಮೇಲೆ ಕೈತೋಟ ನಿರ್ಮಿಸಲು ಮನಸ್ಸು ಮಾಡಬೇಕು.
ಅಳಿದರೆ ಕಾಡು, ಅಳುವುದು ನಾಡು...
-ಅಖಿಲಾ
ದ್ವಿತೀಯ ಬಿಎ, ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ