ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವಿಶ್ವ ಪರಿಸರ ದಿನಾಚರಣೆ: ಹಸಿರ ನಾಶದಲಿ ಉಸಿರ ಗಾಳಿ...ಬತ್ತಿ ಹೋಯಿತೇ..? ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಇಂದು ಎಲ್ಲರಿಗೂ ತಿಳಿದಿರುವಂತೆ ಜೂನ್ 5. ವಿಶ್ವ ಪರಿಸರ ದಿನ. ಬಹುಶಃ ಈ ಸಲ ಮನುಷ್ಯ ಕಿಂಚಿತ್ತಾದರೂ ಈ ದಿನದ ಮಹತ್ವವನ್ನು ಅರಿತಿರಲೇಬೇಕು. ಏಕೆಂದರೆ ಪರಿಸರ ನಾಶ ಮಾಡಿ ಅನುಭವಿಸಲಾರದ ಕಷ್ಟವನ್ನು ಕಂಡದ್ದು ನಾವು ತಾನೇ?

ಪ್ರದರ್ಶನಕ್ಕಾಗಿ ಒಂದು ಗಿಡ ನೆಟ್ಟು ನಂತರ ಪರಿಸರದ ಮಹತ್ವದ ಬಗ್ಗೆ ತಲೆಗೆ ಬಂದ ಎರಡು ಮಾತನ್ನಾಡಿ ಈ ದಿನಾಚರಣೆಯನ್ನು ಮುಕ್ತಾಯಗೊಳಿಸುತ್ತಿದ್ದೆವು. ಇಂದು ಸಾಮಾಜಿಕ ಮಾಧ್ಯಮಗಳಲ್ಲಂತೂ ಲೆಕ್ಕವಿಲ್ಲದಷ್ಟು ಹಸಿರ ವಾಕ್ಯಗಳು...

ಮಾನವ ಅವಶ್ಯಕತೆಗೆ ತಕ್ಕಂತೆ ಮರಗಳಿಗೆ ಕತ್ತಿ ಏಟು ನೀಡುತ್ತಾ ಬಂದ. ಆದ ಕಾರಣ ಉಸಿರಾಡೋ ಗಾಳೀನೂ ಭಿಕ್ಷೆ ಬೇಡುವಂತ ಪರಿಸ್ಥಿತಿ ಕೊಟ್ಟು ಪ್ರಕೃತಿ ಸೇಡು ತೀರಿಸಿಕೊಳ್ಳುತ್ತಿದ್ದಾಳೆ. ಮನುಷ್ಯ ಇನ್ನಾದರೂ ಬುದ್ಧಿ ಕಲಿಯಲೇಬೇಕಲ್ಲವೇ?

ಕೇವಲ ಬ್ಯಾನರ್ ನಲ್ಲಿ ರಾರಾಜಿಸುವಂತೆ ಸಾವಿರ ಗಿಡ ನೆಡುವ ಕಾರ್ಯಕ್ರಮ ಎಂದು ಹಾಕಿ ತಿರುಗಿದರಷ್ಟೇ ಸಾಲದು. ಮನೆ ಮನೆಗಳಲ್ಲೂ ಮರಗಳೂ ಮಕ್ಕಳಂತೆ ಬೆಳೆಯುತ್ತಿರಬೇಕು. ಆವಾಗಲೇ ಹಸಿರನ್ನು ಬೆಳೆಸಿ ಅದರಿಂದಲೇ ನೆಮ್ಮದಿಯಾಗಿ ನಾವು ಉಸಿರಾಡೋದು.

ಇಂದು ಪ್ರತಿಯೊಬ್ಬರು ವಾಟ್ಸಾಪ್ ಸ್ಟೇಟಸ್ ಗಳನ್ನು ಹಾಕುತ್ತಾ ನೇತಾಡುವುದಕ್ಕಿಂತಲೂ ತಾವು ನೆಟ್ಟ ಮರದಲ್ಲಿ ಒಮ್ಮೆ ನೇತಾಡಿ ಬರುವುದು ಲೇಸಲ್ಲವೇ? ಪ್ರಾಯೋಗಿಕವಾಗಿಯೇ ಈ ದಿನ ಆಚರಣೆಯಾದರೆ ಅರ್ಥಪೂರ್ಣವೆನಿಸುವುದಿಲ್ಲವೇ?

-ಅರ್ಪಿತಾ ಕುಂದರ್

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم