ಮಂಗಳೂರು: ಮಳೆಗಾಲದ ಸಮಯವಾದ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಮಂಗಳೂರಿನ ಪ್ರತಿ ಬೀಚ್‌ಗಳಲ್ಲಿ ಇಬ್ಬರಂತೆ 8 ಬೀಚ್‌ಗಳಲ್ಲಿ 16 ಮಂದಿ ಗೃಹರಕ್ಷಕರನ್ನು ಬೀಚ್ ಗಾರ್ಡ್‌ಗಳಾಗಿ ನೇಮಕ ಮಾಡಲಾಗಿದೆ.
ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರವಾಸಿಗರ ರಕ್ಷಣೆಗೆ ಈ ಬೀಚ್ ಗಾರ್ಡ್‌ಗಳು ಆದ್ಯತೆ ನೀಡುತ್ತಾರೆ ಎಂದು ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರ ರಕ್ಷಣಾ ದಳದ ಮುಖ್ಯ ಪಾಲಕರಾದ ಡಾ. ಮುರಲೀಮೋಹನ ಚೂಂತಾರು ಹೇಳಿದರು.
ಸೋಮೇಶ್ವರ, ಉಳ್ಳಾಲ, ಮೊಗವೀರಪಟ್ಣ, ಫಾತಿಮಾ ಬೀಚ್, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್ ಮತ್ತು ಸಸಿಹಿತ್ಲು ಬೀಚ್‌ಗಳಲ್ಲಿ ಈ ಗೃಹರಕ್ಷಕರು ಪ್ರವಾಸಿಗರ ಚಲನವಲನಗಳ ಮೇಲೆ ನಿಗಾ ಇಡಲಿದ್ದಾರೆ.
ಮಳೆಗಾಲದಲ್ಲಿ ಸಮುದ್ರ ಹೆಚ್ಚು ಉಗ್ರವಾಗಿರುತ್ತದೆ ಮತ್ತು ಅಲೆಗಳು ತೀವ್ರವಾಗಿರುತ್ತವೆ. ಪ್ರವಾಸಿಗರು ಮೋಜಿಗಾಗಿ ಸಮುದ್ರಕ್ಕೆ ಇಳಿದು ಭೌಗೋಳಿಕ ಹಿನ್ನೆಲೆ ಅರಿಯದೆ ಅಪಾಯಕ್ಕೆ ಒಳಗಾಗುತ್ತಾರೆ.
ಕಳೆದ 4 ವರ್ಷಗಳಿಂದ ನಿರಂತರವಾಗಿ ದ.ಕ ಜಿಲ್ಲೆಯಲ್ಲಿ ಮಳೆಗಾಲದ ಸಮಯದಲ್ಲಿ ಬೀಚ್‌ಗಳಲ್ಲಿ ಗೃಹರಕ್ಷಕರು ಬೀಚ್‌ಗಾರ್ಡ್‌ಗಳಾಗಿ ಕೆಲಸ ನಿರ್ವಹಿಸಿ ಹಲವಾರು ಪ್ರವಾಸಿಗರನ್ನು ರಕ್ಷಿಸಿರುವುದು ಉಲ್ಲೇಖನೀಯ.
ಇವರಿಗೆ ಆಶ್ರಯಕ್ಕಾಗಿ ಟೆಂಟ್, ಕುರ್ಚಿಗಳು, ರೈನ್‌ಕೋಟುಗಳು, ರೈನ್ ಬೂಟುಗಳು ಮತ್ತು ಮೈಕ್‌ಗಳನ್ನು ಜಿಲ್ಲಾಡಳಿತ ಒದಗಿಸಿದ್ದು, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಲಿದ್ದಾರೆ.
ಇದಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸಂಪಾಜೆ, ಸುಬ್ರಹ್ಮಣ್ಯ ಸ್ನಾನಘಟ್ಟ, ಉಪ್ಪಿನಂಗಡಿ ದೇವಳದ ಬಳಿ, ಕಡಬದ ಹೊಸಮಠ ಸೇತುವೆ ಬಳಿ, ಬಂಟ್ವಾಳ, ಉಳ್ಳಾಲ, ಮೂಲ್ಕಿ ಮುಂತಾದ ನೆರೆ ಉಂಟಾಗುವ ಪ್ರದೇಶಗಳಲ್ಲಿಯೂ ಗೃಹರಕ್ಷಕ ದಳದ 5 ಜನರ ನೆರೆ ರಕ್ಷಣಾ ತಂಡಗಳನ್ನು ಸಿದ್ಧಪಡಿಸಲಾಗಿದ್ದು, ಅಲ್ಲಿನ ತಹಶೀಲ್ದಾರರ ನಿರ್ದೇಶನದಲ್ಲಿ ಕೆಲಸ ಮಾಡಲಿದ್ದಾರೆ.
ಸೋಮೇಶ್ವರ ಬೀಚ್‌ನಲ್ಲಿ ನೇಮಿಸಲಾದ ಗೃಹರಕ್ಷಕರಿಗೆ ಸೂಕ್ತ ನಿರ್ದೇಶನ ನೀಡಿ ಸಮಾದೇಷ್ಟರು ಇಂದು ಮಾತನಾಡಿದರು. ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ರಮೇಶ್, ಉಳ್ಳಾಲ ಘಟಕದ ಘಟಕಾಧಿಕಾರಿ ಭಾಸ್ಕರ್, ಸುನಿಲ್ ಪೂಜಾರಿ, ಸಮದ್, ಮಂಗಳೂರು ಘಟಕದ ದಿವಾಕರ್, ದುಷ್ಯಂತ್ ಮುಂತಾದವರು ಉಪಸ್ಥಿತರಿದ್ದರು.
Tags: Monsoon, Rainy season, Beach gaurds, ದಕ್ಷಿಣ ಕನ್ನಡ, ಬೀಚ್ ಗಾರ್ಡ್‌ಗಳು, ಗೃಹರಕ್ಷಕ ದಳ
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق