ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವಿದ್ಯಾರ್ಥಿಗಳ ಬಾಳು- ಶುರುವಾಯ್ತು ಆನ್‌ಲೈನ್ ಕ್ಲಾಸ್‌ಗಳ ಗೋಳು...! ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಜೀವನದಲ್ಲಿ ಎಂದೂ ನೋಡದ ವಿಚಿತ್ರ ವಿದ್ಯಾರ್ಥಿ ಜೀವನ ನಮ್ಮದೀಗ. ಕಾಲೇಜಿಗೆ ಹೋಗದೆ ಮೊಬೈಲ್ ನಲ್ಲೇ ಪಾಠ ಕೇಳುವ ದುರ್ವ್ಯವಸ್ಥೆ. ಕಾಲೇಜಿಗೆ ಫೀಸ್ ಕಟ್ಟಿ ಮತ್ತೆ ಮೊಬೈಲ್ ಗೂ ನೆಟ್ ಹಾಕೋ ಈ ಕಷ್ಟ ಒಮ್ಮೊಮ್ಮೆ ಬೇಕಿತ್ತಾ ಡಬಲ್ ಡಿಗ್ರಿ ಶಿಕ್ಷಣ ಅನ್ನಿಸಿಬಿಡುತ್ತೆ. ಸಾಲುಗಳನ್ನು ಓದೋಕೆ ತಮಾಷೆ ಅನಿಸಬಹುದು. ಆದರೆ ಆರ್ಥಿಕವಾಗಿ ಕಷ್ಟದಲ್ಲಿದ್ದರೂ ಸಾಲ ಕೂಲಿ ಮಾಡಿ ಕಟ್ಟಿದ ಹಣಕ್ಕೆ ದೊರಕಿದ್ದು ಮಾತ್ರ ಎಳ್ಳಾಯಿತಲ್ವೇ ಎಂಬ ನಿರಾಶ ಭಾವ ಎಲ್ಲಾ ವಿದ್ಯಾರ್ಥಿಗಳನ್ನು ಕಾಡುತ್ತಿರಬಹುದು ಅಲ್ಲವೇ....?  

ನಿರಂತರವಾಗಿ ಆನ್ಲೈನ್ ಕ್ಲಾಸ್ ಕೇಳುವ ಪ್ರಮೇಯ ಒದಗಿ ಬರುತ್ತೆ ಎಂಬ ಕಲ್ಪನೆಯಲ್ಲೇ ನಾವಿರಲಿಲ್ಲ. ಮಹಾಮಾರಿ ರೋಗದಿಂದ ವಿದ್ಯಾರ್ಥಿ ಜೀವನ ಅಲ್ಲೋಲ ಕಲ್ಲೋಲವಾಗಿದೆ.  ಅನೇಕರಲ್ಲಿ ಅನೇಕ ಬಗೆಯ ಕನಸುಗಳಿದ್ದಿರಬಹುದು, ಸ್ಟೂಡೆಂಟ್ ಲೈಫ್ ಎಂಜಾಯ್ ಮಾಡಬೇಕು ಎಂಬ ಆಸೆಗಳಿದ್ದಿರಬಹುದು   ಅದೇನೂ ಬೇಡ ಕನಿಷ್ಠ ಪಕ್ಷ ಕಷ್ಟದಿಂದ ಕಟ್ಟಿದ ಹಣಕ್ಕೆ ಒಳ್ಳೆ ರೀತಿಯಲ್ಲಿ ಕಲಿಯೋಣ ಅಂದ್ರೂ ಸಾಧ್ಯವಾಗುತ್ತಿಲ್ಲ ಅಲ್ಲವೇ... ಇನ್ನು ಉದ್ಯೋಗ ಅರಸುತ್ತಾ ಹೊರಡಬೇಕಾದ ನಮ್ಮಂತವರ ದಿಕ್ಕು ಎತ್ತ ಸಾಗಬೇಕು?

ಗಂಭೀರವಾಗಿ ಯೋಚಿಸಿದರೆ ಮನಸ್ಸಿನ ಆಳದಲ್ಲಿ ಭಯ ಹುಟ್ಟುತ್ತದೆ. ಇಡೀ ಸೆಮಿಸ್ಟರ್ ಬರೀ ಮೊಬೈಲ್ ನಲ್ಲೇ ಕೇಳಬೇಕು ಎಂದಾದಾಗ ಮನಸ್ಸು ನೀರಸವೆನಿಸುತ್ತದೆ. ಅದೇಕೋ ಜಡತ್ವ ಬಿಟ್ಟು ಇದೀಗ ಮತ್ತೆ ಬ್ಯುಸಿಯಾಗುತ್ತಿದ್ದೇವೆ ಅನಿಸುತ್ತದೆ.

ಅನಿರೀಕ್ಷಿತ ಅನಿವಾರ್ಯತೆಗಳಿಗೆ ಒಗ್ಗಿಕೊಂಡು ಧನಾತ್ಮಕ ಚಿಂತನೆಗಳತ್ತ ಮುಖ ಮಾಡೋಣ. ಆದರೆ ವಿದ್ಯಾರ್ಥಿಗಳ ಭವಿಷ್ಯದ ಚಿಂತನೆ  ಶಿಕ್ಷಣ ಕ್ಷೇತ್ರ, ಹೆತ್ತವರಿಗೂ ಇರಲಿ  ಎಂಬ ಆಶಯ ಹಾಗೂ ಕೋರಿಕೆ.

-ಅರ್ಪಿತಾ ಕುಂದರ್

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು