ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪುಸ್ತಕ ಪ್ರೀತಿ: ಗುರು ಪರಂಪರೆಯ ಕಥನ- || ವಂದೇ ಗುರು ಪರಂಪರಾಮ್ || ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ಜಗತ್ತಿನಲ್ಲಿ ಸಾಧನೆಗೆ ಮೂಲ ಕಾರಣ “ಗುರೂಪದೇಶ’’ ಈ ಉಪದೇಶವು ಜ್ಞಾನ ಮತ್ತು ಧ್ಯಾನಕ್ಕೆ ಅಡಿಪಾಯ. ಇವೆರಡರಿಂದ ಜೀವನಿಗೆ ಮುಕ್ತಿಗೆ ದಾರಿಯಾಗುವುದು. ಅಜ್ಞಾನಕ್ಕೆ ಕಾರಣವಾದ ಹೃದಯ ಗ್ರಂಥಿಯನ್ನು ಭೇದಿಸುವ ಉಪದೇಶ ಮತ್ತು ಜ್ಞಾನವನ್ನು ಕೊಡುವವನೇ ನಿಜವಾದ ಗುರು.

ಅವಿದ್ಯಾ ಹೃದಯ ಗ್ರಂಥಿ | ಬಂಧ ಮೋಕ್ಷೋ ಭವೇದ್ಯತಃ |

ತಮೇವ ಗುರು ರಿತ್ಯಾಹುಃ | ಗುರು ಶಬ್ದಾರ್ಥ ವೇದಿನಃ |ನಿಗ್ರಹಾನುಗ್ರಹ ಶಕ್ತೋ | ಗುರುರಿತ್ಯಭಿಧೀಯತೇ ||

ಇಂತಹ ಪವಿತ್ರವಾದ ಸ್ಥಾನ ಗುರುಗಳದ್ದು. ಇಂತಹ ಗುರುಸ್ಥಾನ, ಮತ್ತು ಪರಂಪರೆಯನ್ನು ಸ್ಮರಿಸುವ ಕಾರ್ಯವನ್ನು ಡಾ. ಗುರುರಾಜ ಪೋಶೆಟ್ಟಹಳ್ಳಿ ಇವರು “ವಂದೇ ಗುರು ಪರಂಪರಾಮ್’’ ಎಂಬ ಕಿರು ಹೊತ್ತಿಗೆಯ ಮೂಲಕ ಆಸ್ತಿಕರಿಗೆ ಅವಕಾಶ ಮಾಡಿಕೊಟ್ಟಿರುವುದು ತುಂಬಾ ಶ್ಲಾಘನೀಯ. ಈ ಪುಸ್ತಕದ ಸಿಂಹಾವಲೋಕನದ ಫಲಿತಾಂಶದ ಕ್ರೋಢೀಕರಣದಲ್ಲಿ ಕೆಲ ಅಂಶಗಳು ಹೃದಯವೇದ್ಯವಾಗಿವೆ.

ಜೀವನ ಗರ್ಭಾಷ್ಠಮದಲ್ಲಿ ಪೂರ್ವ ಜನ್ಮಗಳ ಸ್ಮøತಿ ಇದ್ದು, ಶ್ರೀಹರಿಯನ್ನು ಪ್ರಾರ್ಥಿಸುತ್ತಿರುತ್ತಾನೆ. ಆದರೆ ಪ್ರಸವದ ನಂತರ ಭೂ ಸ್ಪರ್ಶದಿಂದ ಆ ಜ್ಞಾನವು ನಷ್ಟವಾಗುತ್ತದೆ. ಆ ಕಾರಣದಿಂದ ಪ್ರಸವದ ನಂತರ ಮಗುವಿನ ತಂದೆಯು, ಆ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅದರ ಬಲಗಿವಿಯಲ್ಲಿ “ಭೂನಾಮಕ ಪರಮಾತ್ಮನೇ, ನಿನ್ನಲ್ಲಿ ಇವನ ರಕ್ಷಣಾ ಭಾರವಿಡುತ್ತೇನೆ, ಭುವರ್ನಾಮಕ, ಸುವರ್ನಾಮಕ, ಭೂರ್ಭುವಃ ಸ್ವರ್ನಾಮಕನೇ’’ ಈ ಜೀವನವನ್ನು ರಕ್ಷಿಸು ಎಂದು ಹೇಳುತ್ತ ವಾಕ್, ವಾಕ್, ವಾಕ್ ಎಂದು ಮೂರು ಬಾರಿ ಜಪಿಸಿ ಉಪದೇಶಿಸಬೇಕು. ನಂತರ ತುಪ್ಪ, ಜೇನುತುಪ್ಪ, ಮೊಸರು ಇವುಗಳ ಮಿಶ್ರಣವನ್ನು ಮಗುವಿಗೆ ನೆಕ್ಕಿಸುವುದೇ ಶೋಡಷ ಕರ್ಮಗಳಲ್ಲಿ ನಾಲ್ಕನೆಯದಾದ ಜಾತಕರ್ಮವೆನಿಸುತ್ತದೆ. ಇದರಿಂದ ಆ ಜೀವನಿಗೆ ಮುಂದೆ ವಿದ್ಯೆಯ ಮೂಲಕ ಜ್ಞಾನ ಸಂಪಾದನೆಗೆ ಮಾರ್ಗ ಮಾಡಿಕೊಡುವುದರಿಂದ ತಂದೆಯು ಮೊದಲ ಗುರುವೆನಿಸುತ್ತಾನೆ. ನಂತರ ಸರಸ್ವತಿಯು ಮಗುವಿನ ತಾಯಿಯ ಸ್ತನದಲ್ಲಿ ಸನ್ನಿಹಿತಳಾಗಿ, ಕ್ಷೀರದ ಮೂಲಕ ಜ್ಞಾನ ನೀಡುತ್ತಾಳೆ. ಹೀಗಾಗಿ ತಾಯಿಯು ಎರಡನೆ ಗುರುವಾಗುತ್ತಾಳೆ.

ಅಥಾಸ್ಯ ದಕ್ಷಿಣಂ ಕರ್ಣ… ಸರಸ್ವತಿ ತಮಿಹ ಧಾತವ್ಮೇಕರಿತಿ” (ಬೃಹದಾರಣ್ಯಕ ಉಪನಿಷತ್) ನಂತರ ಆಚಾರ್ಯರ ಮೂಲಕ ಜ್ಞಾನ ಸಂಪಾದನೆಯಾಗುವುದರಿಂದ ಅವರು ಮೂರನೆಯ ಗುರುವಾಗುತ್ತಾರೆ.

ವರ್ಣಾಮಾತ್ರಂ ಕಲಿಸಿದಾತಂ ಗುರು ಎಂಬುದು ಲೋಕ ವಾಡಿಕೆಯಲ್ಲಿದ್ದರೂ, ಶ್ರೇಷ್ಠನಾದ ಗುರುವು ಶಿಷ್ಯನಿಗೆ, ಜ್ಞಾನ ಸಂಪಾದನೆಗೆ ಅನುಷ್ಠಾನ ಮಾಡಲು ಉಪಕ್ರಮಿಸುವ ಆಚಾರ ನಿಯಮದ ದೀಕ್ಷೆಯನ್ನು ಕೊಡುತ್ತಾನೆ.

“ದೀಯತೇ ಜ್ಞಾನ ವಿಜ್ಞಾನಂ | ಕ್ಷೀಯಂತೆ ಪಾಪರಾಶಯಃ |

ತೇನ ದೀಕ್ಷೇತಿ ಹಿ ಪ್ರೋಕ್ತಾ | ಚೇತ ಸದ್ಗುರೋರ್ಮುಖಾತ್ || (ಮೇರುತಂತ್ರ)

‘’ದಿವ್ಯ ಜ್ಞಾನಂ ಯತೊ ದದ್ಯಾತ್ | ಕುರ್ಯಾತ್ ಪಾಪಸ್ಯ ಸಂಕ್ಷಯಂ |

ತೇನ ದೀಕ್ಷೇತಿ ಲೋಕೇಸ್ಮಿನ್ | ಕೀರ್ತಿತಾ ಮಂತ್ರಪಾರಗೈಃ (ರುದ್ರಯಾಮಲ)

ಸದ್ಗುರು ನೀಡುವ ಮಂತ್ರೋಪದೇಶದಿಂದ ಪಾಪನಾಶವಾಗಿ, ಜ್ಞಾನವನ್ನು ಕೊಟ್ಟು, ಸಂರಕ್ಷಿಸುವ ಕಾರ್ಯವೇ ದೀಕ್ಷೆ. ಇದರಲ್ಲಿ, ಮನೋದೀಕ್ಷೆ, ಸ್ಪರ್ಷದೀಕ್ಷೆ, ದೃಗ್ದೀಕ್ಷ, ಮಂತ್ರೋಪದೇಶದೀಕ್ಷ ಎಂಬ ವಿಧಗಳಿದ್ದು ಪರಂಪರಾನುಗತವಾಗಿ, ಸ್ವಾಮಿಯಿಂದ ಭೃತ್ಯನಿಗೆ, ಬ್ರಾಹ್ಮಣನಿಂದ ಬ್ರಾಹ್ಮಣೇತರರಿಗೆ, ಪತಿಯಿಂದ ಪತ್ನಿಗೆ, ತಂದೆಯಿಂದ ಮಕ್ಕಳಿಗೆ, ಗುರುವಿನಿಂದ ಶಿಷ್ಯನಿಗೆ ಹರಿದು ಬರುತ್ತದೆ.

ತದ್ವನಂ ಇತಿ ಉಪಾಸಿತವ್ಯಂ" (ಕೇನೋಪನಿಷತ್ತು) ಗುರುಸ್ಥಾನದಲ್ಲಿ ಶ್ರೀಹರಿಯ ವ್ಯಾಪ್ತತ್ವ, ಕರ್ತೃತ್ವ ಮತ್ತು ನಿಯಾಮಕತ್ವವನ್ನು ಚಿಂತಿಸಬೇಕು. ಶ್ರೀಕೃಷ್ಣನು,ಕುರುಕ್ಷೇತ್ರದಲ್ಲಿ ಅರ್ಜುನನನ್ನು ನಿಮಿತ್ತ ಮಾಡಿಕೊಂಡು ಧ್ವಜದಲ್ಲಿದ್ದ ಮುಖ್ಯಪ್ರಾಣನಿಗೆ ಗೀತೆ ಉಪದೇಶಿಸಿದ್ದು, ನಾರದರು ಗರ್ಭಸ್ಥನಾಗಿದ್ದ ಪ್ರಹ್ಲಾದನಿಗೆ ಮತ್ತು ಧೃವನಿಗೆ ಉಪದೇಶಿಸಿದ್ದಾರೆ. ಅದಕ್ಕೆ ಪುರಂದರದಾಸರುಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’’ ಎಂದೂ, ಗುರು ಉಪದೇಶವೆಂಬುದು ಪರಮ ಮಂಗಳಕರವೂ..." ಎಂಬುದಾಗಿ ಗೋಪಾಲದಾಸರು ಹೇಳಿದ್ದಾರೆ.ಗುರು ಶುಶ್ರೂಷಯಾ ಭಕ್ತ್ಯಾಸರ್ವ ಲಬ್ದಾರ್ಪಣೇನಚ | ಸಂಗೇನ ಸಾಧು ಭಕ್ತಾನಾಮಿಶ್ವರಾರಾಧನೇನಚ || (ಭಾಗವತ ಸ್ಕಂದ-7)

ಗುರುಗಳಿಗೆ ಮಾಡಿದ ಸೇವೆ ಮತ್ತು ಕರುಣೆಯಿಂದ ಭಗವಂತನಲ್ಲಿ ಶ್ರದ್ಧೆ, ಭಕ್ತಿ ಮೂಡುತ್ತದೆ. ಇಂತಹ ಗುರು ಪರಂಪರೆಯನ್ನು ಸ್ಮರಿಸುವ ಕಾರ್ಯವನ್ನು ಡಾ|| ಗುರುರಾಜ ಪೋಶೆಟ್ಟಿಹಳ್ಳಿಯವರು ನಿಯಮಿತವಾಗಿ ಮಾಡಿ ಜನತೆಗೆ ಉಪಕರಿಸಿರುವುದು ಶ್ಲಾಘನೀಯ. ಇಲ್ಲಿನ ಬಹುತೇಕ ಲೇಖನಗಳನ್ನು ಪತ್ರಿಕೆಗಳಿಗಾಗಿಯೇ ಬರೆದಿರುವುದರಿಂದ ಇವುಗಳಿಗೆ ಇಬ್ಬಗೆಯ ಗುಣಗಳು ಒದಗಿಬಂದಿವೆ. ಸರಳ, ಸುಲಭ ಭಾಷೆ, ಚುಟುಕು ವಿವರಣೆ, ಓದಿಕೊಂಡು ಹೋಗುವ ಗುಣ .ಇನ್ನೊಂದು ಅವಸರದ ಸಾಹಿತ್ಯದ ಸ್ವಭಾವ. ಪತ್ರಿಕೆಗಳಿಗೆಂದೇ ಬರೆಯ ಹೊರಟಾಗಿನ ಆತುರ, ಶಬ್ದಮಿತಿಗಳ ಪರಿಧಿಯನ್ನು ಪುಸಕ್ತವಾಗಿಸುವ ದಾಟಬಹುದಿತ್ತು.

ಧಾರ್ಮಿಕ ಶ್ರದ್ಧೆ. ಆಧ್ಯಾತ್ಮಿಕ ಜಿಜ್ಞಾಸೆಗಳು. ಸಂಸ್ಕøತಿ ಪರಿಚಯ, ಧರ್ಮಾಂತರಂಗ ಕುರಿತು ಬೆಳಕು ಚೆಲ್ಲುವ ಲೇಖನಗಳ ಮೂಲಕ ಸಾಹಿತ್ಯ ಪರಿಚಾರಿಕೆ ಮಾಡುತ್ತಿರುವ ಇವರ ಈ ಕೃತಿಯನ್ನು ಆಸಕ್ತರು ಬಂಧು ಮಿತ್ರರಿಗೆ ಉಡುಗೊರೆಯಾಗಿ ನೀಡಲು ಅತ್ಯುತ್ತಮ ಆಯ್ಕೆ .

ಡಾ|| ರಾಮಚಂದ್ರದಾಸ್ ಸಿ.ಜೆ., ಅಧ್ಯಾತ್ಮ ಚಿಂತಕರು,


ಲೇಖಕರು : ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಪುಸ್ತಕದ ವಿವರ

‘ವಂದೇ ಗುರು ಪರಂಪರಾಮ್’

ಲೇಖಕರು : ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಪ್ರಕಾಶಕರು : ಪ್ರಣವ ಮೀಡಿಯಾ ಹೌಸ್ ಪ್ರಕಾಶನ, ಬೆಂಗಳೂರು – 9739369621

ಪುಟಗಳು : 184

ಬೆಲೆ : ರೂ 180/-

ಆಕಾರ : ಡೆಮ್ಮಿ 1/8


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು