ಕೊರೋನಾ ಎರಡನೇ ಅಲೆ ಪ್ರಾರಂಭವಾದಾಗಿನಿಂದಲೂ ಜನರು ಹೊರಗೆ ಬರಲು ಕಾಯುತ್ತಿದ್ದಾರೆ. ಅದೇನೋ ಬಂಧಿ ಭಾವ. ಈ ಲಾಕ್ಡೌನ್ ಕೆಲವರಿಗೆ ಗೃಹಬಂಧನ ಎನಿಸಿರಬಹುದು. ಆದರೆ ಇನ್ನೂ ಕೆಲವರಿಗೆ ಅದೇನನ್ನೋ ಮಾಡಲು ಇದು ಅವಕಾಶ, ವೇದಿಕೆಯೂ ಆಗಿರಬಹುದು. ಅದೇನೇ ಆಗಲಿ ಕಣ್ಣಿಗೆ ಕಾಣದ ಈ ಮಹಾಮಾರಿ ಜಗತ್ತು ಬಿಟ್ಟು ತೊಲಗಲಿ, ಮತ್ತೆ ಮೊದಲಿನಂತಾಗಲಿ ಎಂಬ ಕನಸು ಮಾತ್ರ ಎಲ್ಲರದ್ದು.
ಮಿತ್ರರೇ ಮನುಷ್ಯ ಒಬ್ಬನೆ ಕೂತು ಭವಿಷ್ಯದ ಬಗ್ಗೆ ಆಲೋಚಿಸುವಾಗ ಸಾವಿರಾರು ಯೋಚನೆ, ಭಾವನೆ ಎರಡೂ ಸಂಗಮವಾಗೋದು ಸಹಜ. ಬೇಕಾದ ಬೇಡದ ಎಲ್ಲಾ ತರದ ಭಾವಗಳು ನಮ್ಮನ್ನು ಕ್ರಿಯಾಶೀಲರನ್ನಾಗಿಯೋ ಅಥವಾ ನೀರಸ ಮನದ ಒಂಟಿ ಜೀವಿಯಾಗಿಯೋ ಮಾಡಿ ಬಿಡುತ್ತದೆ.
ಈಗ ನೋಡಿ ಮನೆಯೊಳಗೇ ಇರಬೇಕಾದ ಅನಿವಾರ್ಯತೆ ಒಂದೆಡೆಯಾದರೆ ಮತ್ತೊಂದೆಡೆ ಎಡೆಬಿಡದೆ ಧಾರಾಕಾರವಾಗಿ ಸುರಿಯುವ ಮಳೆ....ಅಬ್ಬಾ..ಒತ್ತಡ ಮತ್ತು ಅವಸರದ ಜೀವನದಲ್ಲಿ ಮಗ್ನರಾಗಿ ಹೋಗಿದ್ದ ನಮಗೆಲ್ಲ ಇದು ಹೊಸ ಅನುಭವ ಅಲ್ಲವೇ...?
ಮಳೆ ಎಂದ ಮೇಲೆ ಕರೆಂಟ್, ನೆಟ್ವರ್ಕ್ ಕಥೆ ಕೇಳಬೇಕೆ.....ಮೊಬೈಲ್ ಇಲ್ಲದೆ ಅತ್ತ ಕಡೆ ಹೊರಗೆ ಹೋಗಲು ಸಾಧ್ಯವೂ ಇಲ್ಲದೆ ಈ ಪಾಡು ಹೇಗಾಗಿದೆ...ಅಲ್ಲವೇ....?
ಇದಕ್ಕೇನು ಧೃತಿಕೆಡಬೇಕಾಗಿಲ್ಲ. ಮನೆಯವರೊಂದಿಗೆ ಮುಕ್ತವಾಗಿ ಬೆರೆಯಲು, ಅಜ್ಜಿ ಜೊತೆಗೆ ಅಜ್ಜಿ ಕಥೆ ಕೇಳಲು, ಅಮ್ಮಂದಿರ ಬಾಲ್ಯದ ನೆನಪುಗಳ ತುಣುಕುಗಳನ್ನು ಅನಾವರಣಗೊಳಿಸಲು, ಅಡಿಗೆ ಕಲಿಯಲು, ಪುಸ್ತಕ ಓದಲು, ತಲೆಯಲ್ಲಿ ತೋಚಿದನ್ನು ಗೀಚಲು ಇದೇ ನಮಗೆ ಸುಪ್ತ ಸಮಯ ಉಪಯೋಗಿಸೋಣ. ಕೊರೋನಾ ಗೆಲ್ಲಲು ಇದೂ ನಮ್ಮದೊಂದು ಸಣ್ಣ ಸಹಾಯ ಆಗಲಾರದೇ....???
-ಅರ್ಪಿತಾ ಕುಂದರ್
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ