ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಸಾಮಾಜಿಕ ಮಾಧ್ಯಮಗಳಿಗೆ ನೀತಿ ಸಂಹಿತೆ ಅಗತ್ಯ: ಡಾ. ವಸಂತಕುಮಾರ ಪೆರ್ಲ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಮಂಗಳೂರು: ಸಾಮಾಜಿಕ ಮಾಧ್ಯಮಗಳು ಇಂದು ದೊಡ್ಡದಾಗಿ ಬೆಳೆದಿದ್ದು ತಳಮಟ್ಟದ ವರೆಗೂ ಬಳಕೆದಾರರ ಸಂಖ್ಯೆ ತುಂಬಿಕೊಂಡಿದೆ. ಸ್ವನಿಯಂತ್ರಣವಿಲ್ಲದ ವೈಯಕ್ತಿಕ ಅಭಿಪ್ರಾಯಗಳು ರಾಜಕೀಯ ಮತ್ತು ಸಾಮಾಜಿಕ ಆಗುಹೋಗುಗಳಲ್ಲಿ ಪರಿಣಾಮ ಬೀರತೊಡಗಿದೆ. ಸಮೂಹ ಮಾಧ್ಯಮಗಳಿಗೆ ಇರುವಂತೆ ಸಾಮಾಜಿಕ ಮಾಧ್ಯಮಗಳಿಗೂ ನೀತಿಸಂಹಿತೆ ತರಬೇಕಾದ ಆವಶ್ಯಕತೆ ಕಂಡುಬರುತ್ತಿದೆ. ಸಮೂಹಗಳಲ್ಲಿ ಇರುವ ವಿರಳ ಹಾಗೂ ವಿಶಿಷ್ಟ ಸಂಗತಿಗಳ ವಿನಿಮಯದ ಮೂಲಕ ಸಮಾಜದ ಅಭಿವೃದ್ಧಿ ಸಾಧಿಸುವ ಉದ್ದೇಶ ಹೊಂದಿರುವ ಇಂತಹ ಮಾಧ್ಯಮಗಳು ಈಗ ಅನಗತ್ಯ ವಾದ ವಿವಾದಗಳ ಮತ್ತು ಜಗಳಗಳ ಗೂಡಾಗಿ ಪರಿಣಮಿಸಿದೆ ಎಂದು ಸಾಹಿತಿ ಹಾಗೂ ಮಾಧ್ಯಮತಜ್ಞ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.

ಸುಳ್ಯದ ವಾಸವಿ ಸಾಹಿತ್ಯ ಕಲಾ ವೇದಿಕೆ ಹಾಗೂ ರಾಜ್ಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ನಡೆದ ಸಾಹಿತಿಗಳೊಂದಿಗೆ ಒಂದು ಸಂಜೆ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ ಎಂಬ ವಿಷಯದ ಕುರಿತು ಅಂತರ್ ಜಾಲ ಗೋಷ್ಠಿಯಲ್ಲಿ ಅವರು ಮಾತಾಡಿದರು.  

ಸಮೂಹ ಮಾಧ್ಯಮಗಳು ಸಾಮಾಜಿಕ ಸಭ್ಯತೆಯನ್ನು ಕಾಪಾಡಿಕೊಂಡು ಕೆಲಸ ನಿರ್ವಹಿಸುತ್ತವೆ. ಆದರೆ ಸಾಮಾಜಿಕ ಮಾಧ್ಯಮಗಳು ಎಷ್ಟೋ ಸಂದರ್ಭಗಳಲ್ಲಿ ಸಭ್ಯತೆ ಮತ್ತು ಸ್ವನಿಯಂತ್ರಣವನ್ನು ಮೀರಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಸಾಮಾಜಿಕ ಮಾಧ್ಯಮದ ದುರುಪಯೋಗ ಆಗುತ್ತಿರುವುದನ್ನು ಗಮನಿಸಬಹುದಾಗಿದೆ. ದೇಶ ಹಿತ ಮತ್ತು ಸಾಮಾಜಿಕ ಸಭ್ಯತೆಯ ದೃಷ್ಟಿಯಿಂದ ಈ ನವಮಾಧ್ಯಮಗಳಿಗೆ ನೀತಿ ಸಂಹಿತೆ ತರುವ ಅಗತ್ಯವಿದೆ. ಜೊತೆಗೆ ಬಳಕೆದಾರರಿಗೆ ಸ್ವಲ್ಪಮಟ್ಟಿನ ತರಬೇತಿಯ ಅಗತ್ಯವೂ ಕಂಡು ಬರುತ್ತದೆ ಎಂದು ಡಾ. ಪೆರ್ಲ ಅವರು ಹೇಳಿದರು.

ಉಪನ್ಯಾಸದ ಬಳಿಕ ರಾಜ್ಯದ ವಿವಿಧ ಕಡೆಗಳಿಂದ ಭಾಗವಹಿಸಿದ ಆಸಕ್ತರೊಂದಿಗೆ ಚರ್ಚೆ ಸಂವಾದ ಏರ್ಪಟ್ಟಿತು.  

ವಾಸವಿ ಸಾಹಿತ್ಯ ಸಂಘದ ಸಂಚಾಲಕಿ ಡಾ. ವೀಣಾ ಎನ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ರಾಜ್ಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ವಂದಿಸಿದರು.

Post a Comment

أحدث أقدم