ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 'ಯುವ ಸಾಹಿತಿಗಳು ತಿದ್ದಿಕೊಳ್ಳುವ ಸೌಜನ್ಯವನ್ನು ರೂಢಿಸಿಕೊಳ್ಳಬೇಕು' : ಗುಣಾಜೆ ರಾಮಚಂದ್ರ ಭಟ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಮಂಗಳೂರು : ಯುವ ಸಾಹಿತಿಗಳು ತಮ್ಮ ಬರಹಗಳಲ್ಲಿ 'ಇರುವ ತಪ್ಪುಗಳನ್ನು ತಿದ್ದಿಕೊಳ್ಳುವ ಸಕಾರಾತ್ಮಕ ಗುಣಗಳನ್ನು ರೂಢಿಸಿಕೊಳ್ಳಬೇಕು. ಬರವಣಿಗೆಯ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ ಅಧ್ಯಯನ ಮಾತ್ರ ಹೆಚ್ಚಿರಬೇಕು' ಎಂದು ಹಿರಿಯ ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಅವರು ಹೇಳಿದರು.

ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಗಳೂರಿನಲ್ಲಿ ನಡೆದ 'ಸಾಹಿತ್ಯದಲ್ಲಿ ಭಾಷಾ ಶುದ್ಧತೆ' ಎಂಬ ವಿಷಯದ ಕುರಿತು ಮಾತನಾಡಿದರು.

'ಭಾಷೆ ನಿಂತ ನೀರಾಗಬಾರದು ಚಲನಶೀಲ ಹೊಳೆಯಾಗಿರಬೇಕು.ವ್ಯಾಕರಣವು ಉಚ್ಚಾರ ದೋಷಗಳಿಗೆ ಚಿಕಿತ್ಸೆ ಇದ್ದ ಹಾಗೆ, ಗ್ರಾಂಥಿಕ ರೂಪ ಪಡೆದಾಗ ಸಾಹಿತ್ಯದಲ್ಲಿ ಭಾಷಾ ಶುದ್ಧತೆ ಅತೀ ಮುಖ್ಯ' ಎಂದವರು ಅಭಿಪ್ರಾಯ ಪಟ್ಟರು.  

ಇದಕ್ಕೂ ಮುನ್ನ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿದ ಚುಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಮಾತನಾಡಿ 'ತನ್ನ ಬರಹಗಳನ್ನು ಎಲ್ಲರೂ ಓದಬೇಕೆನ್ನುವ ಉದಯೋನ್ಮುಖ ಲೇಖಕರಲ್ಲಿ ಹಿರಿಯ ಸಾಹಿತಿಗಳ ಪಾಂಡಿತ್ಯದಲ್ಲಿ ಆಸಕ್ತಿ ತೋರದಿರುವುದು ಅವರ ಬೆಳವಣಿಗೆಗೆ ಅಪಾಯ' ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಅವರು ವಹಿಸಿದ್ದರು. ಹಿರಿಯ ಕವಿ ಎನ್. ಸುಬ್ರಾಯ ಭಟ್, ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿಕುನಾ, ಹೆಸರಾಂತ ಸಾಹಿತಿ ರಘು ಇಡ್ಕಿದು, ವಾಗ್ಮಿ ಭಾಸ್ಕರ್ ರೈ ಕುಕ್ಕುವಳ್ಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಉಪನ್ಯಾಸದ ಬಳಿಕ ನಡೆದ ಸಂವಾದದಲ್ಲಿ ಡಾ.ಸುರೇಶ್ ನೆಗಳಗುಳಿ, ಅರುಂಧತಿ ರಾವ್, ವಿದ್ಯಾಶ್ರೀ ಅಡೂರು, ರೇಖಾ ಸುದೇಶ್, ವಿಜಯಲಕ್ಷ್ಮೀ ಕಟೀಲು, ಜಿನೇಂದ್ರ, ಹರೀಶ್ ಸುಲಾಯ, ಆಕೃತಿ ಐ ಎಸ್ ಭಟ್, ಎಸ್ ಕೆ ಗೋಪಾಲಕೃಷ್ಣ ಭಟ್ ಮುಂತಾದವರು ಪಾಲ್ಗೊಂಡರು.

ಅರುಂಧತಿ ರಾವ್ ಪ್ರಾರ್ಥಿಸಿದರು. ಮಂಗಳೂರು ಚುಸಾಪ ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಸ್ವಾಗತಿಸಿದರು.  ಪ್ರಾಧ್ಯಾಪಕಿ, ಲೇಖಕಿ ಅಕ್ಷಯ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ವಿಘ್ನೇಶ್ ಭಿಡೆ ವಂದಿಸಿದರು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು