ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮರೆಯಲಾಗದ ಬಾಲ್ಯದ ನೆನಪುಗಳು... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 


ಬಾಲ್ಯದ ಜೀವನವನ್ನು ನೆನಪಿಸಿಕೊಂಡಾಗ ಯಾರಿಗೆ ತಾನೆ ಖುಷಿಯಾಗುವುದಿಲ್ಲ ಹೇಳಿ. ಪ್ರತಿಯೊಬ್ಬರೂ ಸಹ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಾಗ, ನಾವೆಲ್ಲರೂ ಕೆಲ  ಸಮಯವಾದರೂ ಆ ದಿನಗಳಲ್ಲೇ ಕಳೆದು ಹೋಗುವುದು ಖಚಿತ. ಹೌದು ಸ್ನೇಹಿತರೇ, ಬಾಲ್ಯದ ಜೀವನ ಎಷ್ಟೊಂದು ಸುಮಧುರ ಎಂದು ಈಗ ಅನಿಸುತ್ತಿದೆ ಅಲ್ಲವೇ? ಅಂದಿನ ನಮ್ಮ ತುಂಟಾಟಗಳನ್ನು ತಡೆಯಲು ಹೆತ್ತವರಿಗೂ ಅಸಾಧ್ಯವಾಗುತ್ತಿತ್ತು. ಪುಸ್ತಕವನ್ನಂತೂ ಬಿಡಿಸುತ್ತಲೇ ಇರಲಿಲ್ಲ.


ಬಾಲ್ಯದ ದಿನಗಳಲ್ಲಿ ಯಾವಾಗಲೂ ಆಟದ ಕಡೆಗೇ ವಾಲುತ್ತಿದ್ದ ನಮ್ಮ ಮನಸ್ಸನ್ನು ಪಾಠದ ಕಡೆಗೆ ವಾಲಸಲು ಶಿಕ್ಷಕರು ಪಡುತ್ತಿದ್ದ ಶ್ರಮ ಅಷ್ಟಿಷ್ಟಲ್ಲ. ಇಂದಿನ ಮಕ್ಕಳ ಬಾಲ್ಯವು ಡಿಜಿಟಲ್ ಯುಗದೊಳಗೆ ಮುಳುಗಿದೆ.         


ಅಂದು ಮಳೆಗಾಲದಲ್ಲಿ ನಾವು ಮಳೆಯಲ್ಲಿ ನೆನೆಯುವುದನ್ನು ತಡೆಯಲು ಮನೆಯವರ ಪರದಾಟ ಹೇಳತೀರದು. ಮಳೆ ನೀರು ಹರಿಯುವ ಜಾಗಗಳಲ್ಲೆಲ್ಲಾ ಮೀನಿಗಾಗಿ ಹುಟುಕಾಟ ನಡೆಸಿ, ನೋಡಲು ಮೀನಿನಂತೆ ಇರುವ ಆದರೆ, ಮೀನಲ್ಲದ ಜೀವಿಯನ್ನು ಹಿಡಿದು ಸಂಭ್ರಮ ಪಟ್ಟು, ಮರುಕ್ಷಣವೇ ಅದು ಮೀನಲ್ಲ ಎಂದು ತಿಳಿದಾಗ ಆದ ನಿರಾಸೆಯಲ್ಲೂ ಆಗುವ ಸಂಭ್ರಮದ ಆ ದಿನಗಳು ಎಂದಿಗೂ ಮರಳದು.  ಕಾಡಿನ ಮಧ್ಯದ ಕಣಿವೆ, ಕೆರೆಗಳ ಬಳಿ ಗೆಳೆಯರೆಲ್ಲ ಸೇರಿ ಅದೇಷ್ಟು ಸಲ ನೀರಿನಲ್ಲಿ ಆಟ ಆಡಿ ಬಟ್ಟೆ ಒದ್ದೆ ಮಾಡಿಕೊಂಡು ತಮಗೆ ಸಿಗಬೇಕಾದ ಮಂಗಳಾರತಿಗೆ ಬೇರೆಯವರನ್ನು ಹೊಣೆ ಮಾಡಿ ಪ್ರಸಾದದ ವಿತರಣೆ ತಮಗೂ ಸಿಕ್ಕಾಗ ಅಳುಮುಖದಲ್ಲೂ ನಗುವ ಆ ದಿನಗಳನ್ನು ಎಂದಿಗೂ ಮರೆಯಲಾಗದು.      

 

ಕಾಡಿನಲ್ಲಿ ಸಿಗುತ್ತಿದ್ದ ಚೂರಿ ಕಾಯಿ, ಕುಂಟಾಲ ಹಣ್ಣು, ನೇರಳೆ ಹಣ್ಣು ಇವುಗಳನ್ನೆಲ್ಲ ಆಯ್ದು ತಿಂದು ಮರುದಿನ ಶಾಲೆಗೂ ತೆಗೆದುಕೊಂಡು ಹೋಗಿ, ತರಗತಿಯಲ್ಲಿ ಎಲ್ಲರಿಗೂ ಹಂಚಿ ಶಿಕ್ಷಕರು ಪಾಠ ಮಾಡುತ್ತಿದ್ದಾಗಲೇ ಕದ್ದು ಮುಚ್ಚಿ ತಿಂದು ಆನಂದಿಸಿದ ಆ ದಿನಗಳು ಇಂದು ನಮ್ಮ ನೆನಪು ಮಾತ್ರ. ಬಾಲ್ಯದಲ್ಲಿ ಅನುಭವಿಸಿದ ಖುಷಿ ಮುಂದಿನ ಯಾವ ದಿನಗಳಲ್ಲೂ ಕಾಣಲು ಸಾಧ್ಯವಿಲ್ಲ. ಆ ನಮ್ಮ ಸುಂದರ ಬಾಲ್ಯ ಕಳೆದು ಹಲವು ವರುಷಗಳೇ ಸಂದಿವೆ. ಆದರೂ ಅಂದಿನ ನೆನಪು ಇಂದಿಗೂ ನಮ್ಮ ಎದೆಯಾಳದಲ್ಲಿ ಉಳಿದುಕೊಂಡಿದೆ.  


ವರುಷಗಳು ಕಳೆದ ಹಾಗೆ ಮನುಷ್ಯ ತನ್ನ ಜೀವನ ಶೈಲಿಯನ್ನು ಬದಲಾಯಿಸುತ್ತಿದ್ದಾನೆ. ಬಾಲ್ಯ ಜೀವನದ ನೆನಪುಗಳು ಇಂದಿಗೂ ಹಸಿರಾಗಿದೆ. ಮತ್ತೊಮ್ಮೆ ಆ ದಿನಗಳು ಮರಳದೆಂದು ತಿಳಿದಿದ್ದರೂ, ಆ ದಿನಗಳು ಮರಳಲಿ ಎಂದು ಮನ ಬಯಸುತಿದೆ...


-ಸರೋಜ ಪಿ ಜೆ ದೋಳ್ಪಾಡಿ. 

 ದ್ವಿತೀಯ ಬಿ.ಎ (ಪತ್ರಿಕೋದ್ಯಮ ವಿಭಾಗ)

ವಿವೇಕಾನಂದ ಪದವಿ ಕಾಲೇಜು ಪುತ್ತೂರು.

Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم