ಲಾಕ್ಡೌನ್ ಆದಾಗಿನಿಂದಲೂ ಪಂಜರದ ಗಿಳಿಯ ಪಾಡಾಗಿದೆ ಎಲ್ಲರಿಗೂ. ಒಮ್ಮೆ ಹೊರಗೆ ಹೋಗಿ ಜಗವ ನೋಡುವ ತವಕ..... ಒಂದೆಡೆ ರೋಗಗಳ ಭೀತಿ... ಏನೇ ಆದರೂ ಸರ್ಕಾರ ಅನ್ಲಾಕ್ ಪ್ರಕ್ರಿಯೆ ಜಾರಿಗೊಳಿಸುವ ಸೂಚನೆ ಕಂಡುಬರುತ್ತಿದೆ.
ನಮ್ಮ ಹಿತಕ್ಕೆ , ನಮ್ಮವರ ಹಿತಕ್ಕೆ ನಮ್ಮ ರಕ್ಷಣೆ ಅತೀ ಮುಖ್ಯ ಎಂಬುವುದು ತಲೆಯಲ್ಲಿರಲಿ. ರೋಗದ ಪ್ರಮಾಣ ಕಡಿಮೆಯಾಗುತ್ತಿದೇ ಹೊರತು ರೋಗ ಅಥವಾ ವೈರಸ್ ನಮ್ಮ ಬಿಟ್ಟು ತೊಲಗಿಲ್ಲ. ಹಾಗಿರುವಾಗ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲೇಬೇಕು ಅಲ್ಲವೇ...?
ಬೇಕಾಬಿಟ್ಟಿ ಎಲ್ಲೆಂದರಲ್ಲಿ ಓಡಾಡುತ್ತಾ ಮಜಾ ಹುಡುಗಾಟ ತಿರುಗಾಟ ಎನ್ನುತ್ತಾ ನಾವು ಮೈ ಮರೆತರೆ ಮತ್ತೆ ನಮ್ಮನ್ನು ಅದೇ ವೈರಸ್ ಬಿಗಿದಪ್ಪಿಕೊಳ್ಳುವ ಸಾಧ್ಯತೆ ಇದೆ. ನಾಗರಿಕರಂತೆ ವರ್ತಿಸಿದರೆ ನಮಗೆ ನಾವೇ ಮಾಡಿಕೊಳ್ಳುವ ರಕ್ಷಾಕವಚ ಅದೇ.
ಆದ್ದರಿಂದ ಲಾಕ್ ಓಪನ್ ಆದರೂ, ಬಸ್ ಸಂಚಾರ ಪ್ರಾರಂಭಿಸಿದರೂ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಸೂಕ್ಷ್ಮ ವಿಚಾರ ತಲೆಯಲ್ಲಿರಲಿ. ಅನ್ಲಾಕ್ ಅಡೆತಡೆಗೆ ಕಾರಣವಾಗದಿರಲಿ.
-ಅರ್ಪಿತಾ ಕುಂದರ್
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق