ಆಲಿಸಿ: ಭಕ್ತಿಗೀತೆ- ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮುದ್ದು ಗಣಪ ಬಂದನೆ
ಗಾಯಕಿ: ಎಸ್. ಜಾನಕಿ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಗೆಜ್ಜೆ ಕುಣಿವ ಸದ್ದಿನಿಂದ
ಸಜ್ಜನರ ಮುದ್ದು ಬಾಲ ಗಣಪ ಬಂದನೆ
ಬೆಣಕ ಬಂದನೆ, ಕಪಿಲ ಬಂದನೆ
ಸುಮುಖ ಬಂದನೆ, ಗಜಕರ್ಣ ಬಂದನೇ...
ಸಿದ್ಧಿ ಬುದ್ಧಿ ಸಮೃದ್ಧಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ
||ಸಿದ್ಧಿ ಬುದ್ಧಿ||
||ಹೆಜ್ಜೆ ಮೇಲೆ||
ಹತ್ತು ತಲೆಯ ರಾವಣನ ಸೊಕ್ಕ ಮುರಿದನೆ
ಅಹಂನಿಂದ ನಕ್ಕ ಚಂದ್ರಗೆ ಶಾಪ ಕೊಟ್ಟಾನೆ
||ಹತ್ತು ತಲೆಯ||
ಭಾದ್ರಪದ ಚೌತಿಯಂದು ಓಡಿ ಬಂದಾನೆ
ಬಡವರನ್ನು ಕಾಯಲೆಂದು ಹಾರಿ ಬಂದಾನೆ
||ಭಾದ್ರಪದ||
ಸಿದ್ಧಿ ಬುದ್ಧಿ ಸಮೃದ್ಧಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ
||ಸಿದ್ಧಿ ಬುದ್ಧಿ||
||ಹೆಜ್ಜೆ ಮೇಲೆ||
ಪಾಶ ಪರಶು ಕರದಿ ಹಿಡಿದು ಓಡಿ ಬಂದಾನೆ
ಪದ್ಮ, ಗರಿಕೆ, ಚಂದಿರನ ಮುಡಿದು ಬಂದಾನೆ
||ಪಾಶ||
ಬಂದ ವಿಘ್ನ ಕಳೆದು, ಗಣಪ ಕಷ್ಟ ಕೊಂದನೆ
ಮಂದಬುದ್ಧಿ ತಡೆದು, ದಿವ್ಯ ಜ್ಞಾನ ತಂದನೆ
||ಬಂದ ವಿಘ್ನ||
ಸಿದ್ಧಿ ಬುದ್ಧಿ ಸಮೃದ್ಧಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ
||ಸಿದ್ಧಿ ಬುದ್ಧಿ||
||ಹೆಜ್ಜೆ ಮೇಲೆ||
ವೇದವ್ಯಾಸಗೆ ಭಾರತವನ್ನು ಬರೆದು ಕೊಟ್ಟಾನೆ
ವೇಗದಿ ಬರೆದು ವ್ಯಾಸನನ್ನೆ ಸೋಲಿಸಿ ಬಿಟ್ಟಾನೆ
||ವೇದವ್ಯಾಸ||
ಸಿದ್ಧ ಚಾರಣ ಸೇವಿತ ಚರಣ ಸದ್ಗುಣಶೀಲನೆ
ಯಕ್ಷ ಕಿನ್ನರ ಪೂಜಿತ ಗಣಪ, ಚಿನ್ಮಯ ರೂಪನೆ
||ಸಿದ್ಧ ಚಾರಣ||
ಸಿದ್ಧಿ ಬುದ್ಧಿ ಸಮೃದ್ಧಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ
||ಸಿದ್ಧಿ ಬುದ್ಧಿ||
||ಹೆಜ್ಜೆ ಮೇಲೆ||
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ