ಗುಣವಾಯಿತೆನ್ನ ಭವರೋಗ
ಕೃಷ್ಣನೆಂಬ ವೈದ್ಯ ದೊರಕಿದನು
||ಗುಣವಾಯಿತೆನ್ನ||
ಗುಣವಾಗುವವರಿಗೆ ಎಣೆಯಿಲ್ಲ
ಗುಣವಂತರಾಗುವರು ಭವದೆಲ್ಲ
||ಗುಣವಾಗುವವರಿಗೆ||
|| ಗುಣವಾಯಿತೆನ್ನ||
ಸಂತತ ಹರಿಭಕ್ತಿ ಅನುಪಾನ ,
ಸಂತತ ಗುರುಭಕ್ತಿ ಮರುಪಾನ
||ಸಂತತ||
ಸಂತತ ಶ್ರವಣ ಕಠಿನ ಪಥ್ಯ ||2||
ಸಂತತ ಕೀರ್ತನ ಉಷ್ಣೋದಕ||2||
||ಗುಣವಾಯಿತೆನ್ನ||
ಸಹಸ್ರನಾಮದಿ ತಾ ವಂದ್ಯ
ಸಕಲ ಸ್ವತಂತ್ರಕೆ ತಾ ಬಾಧ್ಯ
||ಸಹಸ್ರ||
ಹರಿ ಸರ್ವೋತ್ತಮನೆಂಬ ವೈದ್ಯಾ...ಆ...||2||
ಪುರಂದರವಿಠಲನೆ ನಿರವದ್ಯ||2||
||ಗುಣವಾಯಿತೆನ್ನ||
ಕಾಮೆಂಟ್ ಪೋಸ್ಟ್ ಮಾಡಿ