ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಗಡಿನಾಡ ಜನರ ಗೋಳು (ಕಂದನ ಕಗ್ಗ) ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



 

 (ಛಂದೋಬದ್ಧ ಆಶು ಮುಕ್ತಕ ಪಂಚಕ) 

ಹೆಮ್ಮೆಯಲಿ ಆಳುವರು ಕರುನಾಡ ರಾಜ್ಯವನು  

ಹಮ್ಮಿನಲಿ ದಮನಿಸುತ ಗಡಿನಾಡ ಜನರ | 

ನಮ್ಮ ಕಾಸರಗೋಡ ಕನ್ನಡದ ಬಂಧುಗಳ 

ಸುಮ್ಮನೇ ಕೆಣಕುತಲಿ - ಪುಟ್ಟಕಂದ || ೧ ||  


ತಾಯಿ ಭುವನೇಶ್ವರಿಯು ಮೆಚ್ಚುವಳೆ ಇವರನ್ನು  

ಸಾಯಲೆಡೆಗೊಡದೆಮ್ಮನಾದರಿಪ ಮಾತೆ | 

ದಾಯವಾದಿಗಳಿವರು ನಮ್ಮ ಕನ್ನಡ ಜನಕೆ   

ನಾಯಕರು ಖಳರಾಗಿ - ಪುಟ್ಟಕಂದ || ೨ ||  


ದೇಗುಲವನೊಡೆದಿರುವ ಧರ್ಮಭಕ್ಷಕರಿವರು  

ಮಾಗಿದಾಡಳಿತಗಾರರೆನಿಸಿ ಕೊಂಡವರು |  

ಯೋಗದಲಿಯಾಡಳಿತ ಚುಕ್ಕಾಣಿ ಹಿಡಿದವರು  

ಬೀಗಿದರೆ ಒಡೆಯುವರು - ಪುಟ್ಟಕಂದ || ೩ ||  


ಎಲ್ಲಿಗೂ ಸಲ್ಲದವರಂತಿರುವ ಗಡಿಜನರ  

ಬಲ್ಲಿದರೆ ರಕ್ಷಿಸಿರಿ ಮಾನಧನರಾಗಿ |  

ಸಲ್ಲಲಿತ ಸಂತಸದಿ ಸಲ್ಲಾಪವೆಸಗಿದರೆ  

ಫುಲ್ಲಲೋಚನನೊಲಿವ - ಪುಟ್ಟಕಂದ || ೪ ||


 


ಕನ್ನಡದ ಗಡಿಕಾಯ್ವ ಗುಡಿಕಾಯ್ವ ಜನರೆಲ್ಲ  

ಸನ್ನಡತೆ ಮೈವೆತ್ತು ಬನ್ನಿ ಬಲುಬೇಗ | 

ಮುನ್ನಡೆಸ ಬೇಕಿಂದು ನಾಡುನುಡಿ ರಥವನ್ನು 

ಬನ್ನವೆಲ್ಲವ ಮರೆತು - ಪುಟ್ಟಕಂದ || ೫ ||  

ವಿ.ಬಿ.ಕುಳಮರ್ವ , ಕುಂಬ್ಳೆ

ಸಂಗೀತ ಸಂಯೋಜಿಸಿ ಹಾಡಿದವರು: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ 




Post a Comment

ನವೀನ ಹಳೆಯದು