ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಆಲಿಸಿ: ಭಕ್ತಿಗೀತೆ- ಹೆತ್ತ ತಂದೆ ತಾಯಿಗಳ ಚಿತ್ತವ ನೋಯಿಸಿ

ರಚನೆ: ಪುರಂದರ ದಾಸರು

ಗಾಯಕರು: ಶ್ರೀ ವಿದ್ಯಾಭೂಷಣರು




ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು                       || ಪ ||

ಸತ್ಯ ಸದಾಚಾರ ಇಲ್ಲದವನು
ಜಪ ಹತ್ತುಸಾವಿರ ಮಾಡಿ ಫಲವೇನು                || ಅ.ಪ ||

ತನ್ನ ಸತಿ ಸುತರು ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿ ಫಲವೇನು
ಬಿನ್ನಾಣದಿಂದಲಿ ದೇಶ ದೇಶವ ತಿರುಗಿ
ಅನ್ನ ದಾನವ ಮಾಡಿ ಫಲವೇನು                      || ೧ ||

ಗೋಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
ರೂಪ ಯೌವನವಿದ್ದು ಫಲವೇನು
ತಾಪತ್ರಯದಿ ಸಂಸಾರ ಕೆಡಿಸುವಂಥ
ಪಾಪಿ ಮಗನು ಇದ್ದು ಫಲವೇನು                      || ೨ ||

ತುಂಡು ಧನದಿಂದ ತಂದೆ ಮಾತು ಕೇಳದ
ತೊಂಡ ಮಗನು ಇದ್ದು ಫಲವೇನು
ಭಂಡು ಮಾಡಿ ಅತ್ತೆ ಮಾವನ ಬೈವ
ಪುಂಡು ಸೋಸೆಯಿದ್ದು ಫಲವೇನು                  || ೩ ||

ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿ ನೀರು
ಕಾನನ ದೊಳಗಿದ್ದು ಫಲವೇನು
ಆನಂದ ಮೂರುತಿ ಪುರಂದರ ವಿಠ್ಠಲನ್ನ
ನೆನೆಯದ ತನುವಿದ್ದು ಫಲವೇನು                     || ೪ ||

Post a Comment

أحدث أقدم