ಆಲಿಸಿ: ಭಕ್ತಿಗೀತೆ- ಮನವ ಶೋಧಿಸಬೇಕು ನಿತ್ಯ
ರಚನೆ: ಶ್ರೀ ಪುರಂದರ ದಾಸರು
ಗಾಯನ: ಶ್ರೀ ವಿದ್ಯಾಭೂಷಣರು
ಮನವ ಶೋಧಿಸಬೇಕು ನಿತ್ಯಾ
ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ
||ಮನವ||
ಧರ್ಮ ಅಧರ್ಮ ವಿಂಗಡಿಸಿ
ಅಧರ್ಮದ ನರಗಳ ಬೇರ ಕತ್ತರಿಸಿ
||ಮನವ||
ನಿರ್ಮಲಾಚಾರದಿ ಚರಿಸಿ ||2||
ಪರಬೊಮ್ಮ ಮೂರುತಿ
ಪಾದಕಮಲವ ಭಜಿಸಿ
||ಮನವ||
ತನುವ ಖಂಡಿಸಿ ಒಮ್ಮೆ ಮಾಣೋ
ನಿನ್ನಮನವ ದಂಡಿಸಿ
ಪರಮಾತ್ಮನ್ನ ಕಾಣೋ||ತನುವ||
ಕೊನೆಗೆ ನಿನ್ನೊಳಗೆ ನೀ ಜಾಣೋ ||2||
ಮುಕ್ತಿ ನಿನಗೆ ದೂರಿಲ್ಲವು
ಒಂದೇ ಗೇಣೊ
||ಮನವ||
ಆತನವರಿಗೆ ಕೇಡಿಲ್ಲ ,ಅವ ಪಾತಕ
ಪತಿತ ಸಂಗವ ಮಾಡುವನಲ್ಲ
||ಆತನವರಿಗೆ||
ನೀತಿವಂತರು ಕೇಳಿರೆಲ್ಲ ||2||
ನಮಗಾತನೆ ಗತಿ ಈವ ಪುರಂದರವಿಠಲ
||ಮನವ||
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق